Advertisement
ಈ ಶೈಕಣಿಕ ವರ್ಷದಲ್ಲಿ ಕಟ್ಟಡ ಉದ್ಘಾಟನೆಗೊಳ್ಳಲಿದ್ದು, ಅಂತಿಮ ಹಂತದ ಕಾಮಗಾರಿಯು ಬಿರುಸು ಪಡೆದಿದೆ. ಈಗ ತಾತ್ಕಾಲಿಕ ಕಟ್ಟಡದಲ್ಲಿ ಶೈಕ್ಷಣಿಕ ತರಗತಿ ನಡೆಯುತ್ತಿದೆ.
Related Articles
Advertisement
ಏನಿದು ಮೌಲಾನ್ ಆಜಾದ್ ಶಾಲೆ?
ಅಲ್ಪಸಂಖ್ಯಾಕ ಮಕ್ಕಳನ್ನು ಮರಳಿ ಶಾಲೆಗೆ ತರಲು ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಆರಂಭಿಸಲಾಗಿತ್ತು. ಅನಂತರ ವಸತಿ ಸಹಿತ ಶಾಲೆಯ ಮಾದರಿಯಲ್ಲೇ ವಸತಿ ರಹಿತ ಶಾಲೆ ಆರಂಭಿಸಿ 6 ನೇ ತರ ಗತಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಾರಂಭಿಸಿ 10ನೇ ತರಗತಿವರೆಗೆ ವಿಸ್ತರಿಸಲಾಯಿತು. ಈ ಶಾಲೆಗಳಲ್ಲಿ ಶೇ. 75ರಷ್ಟು ಸೀಟ್ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಕ್ಖ್, ಪಾರ್ಸಿ ವಿದ್ಯಾರ್ಥಿಗಳಿಗೆ, ಶೇ. 25ರಷ್ಟು ಪ.ಜಾತಿ, ಪಂಗಡ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ.
ಉದ್ಘಾಟನೆಗೆ ಸಿದ್ಧತೆ
ಸಾಲ್ಮರದಲ್ಲಿ ನಿರ್ಮಾಣ ಹಂತದಲ್ಲಿರುವ ಮೌಲಾನ್ ಆಜಾದ್ ಮಾದರಿ ಶಾಲೆಯ ನೂತನ ಕಟ್ಟಡದ ಕಾಮಗಾರಿ ಅಂತಿಮ ಹಂತದಲ್ಲಿದ್ದು ಮೂರು ತಿಂಗಳಲ್ಲಿ ಕಾರ್ಯಾರಂಭಕ್ಕೆ ಬಿಟ್ಟು ಕೊಡುವಂತೆ ಸೂಚನೆ ನೀಡಲಾಗಿದೆ. ಸುಸಜ್ಜಿತ ಕಟ್ಟಡ ಮೂಲ ಸೌಕರ್ಯ ವ್ಯವಸ್ಥೆ ಒದಗಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಪೂರಕ ವಾತಾವರಣ ನಿರ್ಮಿಸಲು ಆದ್ಯತೆ ನೀಡಲಾಗಿದೆ. –ಸಂಜೀವ ಮಠಂದೂರು, ಶಾಸಕರು, ಪುತ್ತೂರು
ಕೊನೆಯ ಹಂತ
ಜಿಲ್ಲೆಯಲ್ಲಿ ಒಟ್ಟು ಎಂಟು ಮೌಲಾನ್ ಆಜಾದ್ ಮಾದರಿ ಶಾಲೆಗಳಿವೆ. ಪುತ್ತೂರಿನ ಶಾಲೆಗೆ ಹೊಸ ಕಟ್ಟಡ ನಿರ್ಮಾಣ ಮುಕ್ತಾಯದ ಹಂತದಲ್ಲಿ ಇದೆ. ಉದ್ಘಾಟನೆ ಅನಂತರ ತರಗತಿಗಳು ಹೊಸ ಕಟ್ಟಡದಲ್ಲಿ ಪ್ರಾರಂಭಗೊಳ್ಳಲಿದೆ. –ಅಂಜನಪ್ಪ, ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ದ.ಕ.