Advertisement

Hawaii: ಸುಟ್ಟು ಕರಕಲಾದ ಪ್ರವಾಸಿ ಪಟ್ಟಣ, ಎಲ್ಲಿ ನೋಡಿದರೂ ಬೂದಿ… ಮೃತರ ಸಂಖ್ಯೆ 53ಕ್ಕೆ

09:55 AM Aug 11, 2023 | Team Udayavani |

ಹವಾಯಿ: ವಿಶ್ವ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಪಶ್ಚಿಮ ಯುನೈಟೆಡ್ ಸ್ಟೇಟ್ಸ್ ನ ಐತಿಹಾಸಿಕ ದ್ವೀಪ ರಾಜ್ಯ ಹವಾಯಿಯಲ್ಲಿ ಉಂಟಾದ ಭಾರಿ ಕಾಡ್ಗಿಚ್ಚು ದ್ವೀಪರಾಜ್ಯದ ಮವ್ವಿ ಪಟ್ಟಣವನ್ನು ವ್ಯಾಪಿಸಿದ್ದು, ಪಟ್ಟಣದ ಬಹುತೇಕ ಭಾಗವನ್ನು ಬೆಂಕಿಯ ಕೆನ್ನಾಲಿಗೆ ಭಸ್ಮಗೊಳಿಸಿದೆ.

Advertisement

ಅಮೆರಿಕದ ಹವಾಯಿಯಲ್ಲಿರುವ ಮಾಯಿ ಅರಣ್ಯದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡ ಪರಿಣಾಮ ಹುಟ್ಟಿಕೊಂಡ ಅಗ್ನಿಯ ಜ್ವಾಲೆ ಇಡೀ ನಗರವನ್ನೇ ಆವರಿಸಿಕೊಂಡಿದೆ. ಲಹೈನಾ ಪಟ್ಟಣದಲ್ಲಿ ಕನಿಷ್ಠ 53 ಜನರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.

ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಿಸಲು ನಿರಂತರ ಪ್ರಯತ್ನಿಸುತ್ತಿದ್ದಾರೆ. ದ್ವೀಪದಲ್ಲಿರುವ ಐತಿಹಾಸಿಕ ಪಟ್ಟಣಗಳ ದೊಡ್ಡ ಭಾಗಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಬೂದಿಯಾಗಿದೆ.

ಜನಪ್ರಿಯ ಪ್ರವಾಸಿ ತಾಣವಾದ ಲಹೈನಾ ಪಟ್ಟಣ ಸೇರಿದಂತೆ ಹಲವು ಕಡೆಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಕಾಡ್ಗಿಚ್ಚಿನಿಂದಾಗಿ ಲಹೈನಾ ಪಟ್ಟಣದ ಪ್ರವಾಸಿ ಸ್ಥಳಗಳಿಗೆ ಹೆಚ್ಚಿನ ಹಾನಿಗೊಳಗಾಗಿವೆ. ಅಮೆರಿಕದ ಹವಾಮಾನ ಇಲಾಖೆಯ ಪ್ರಕಾರ, ಹವಾಯಿಯಲ್ಲಿ ಈ ರೀತಿಯಾಗಿ ಕಾಡ್ಗಿಚ್ಚು ಏರಲು ಡೋರಾ ಚಂಡಮಾರುತವೂ ಕಾರಣವಾಗಿದೆ, ಇದರ ಬಲವಾದ ಗಾಳಿ ಬೆಂಕಿಯನ್ನು ಬಹಳ ಬೇಗವಾಗಿ ಹರಡುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.

Advertisement

ಈ ಬೆಂಕಿಯ ಕೆನ್ನಾಲಿಗೆಗೆ ಐತಿಹಾಸಿಕ ನಗರ ಲಹೈನಾ ಸುಟ್ಟು ಹೋಗಿದ್ದು ಅಧಿಕಾರಿಗಳ ಪ್ರಕಾರ, ಈ ದುರಂತದಲ್ಲಿ ಕನಿಷ್ಠ 1,000 ಮಂದಿ ಕಾಣೆಯಾಗಿದ್ದಾರೆ. ಇಡೀ ನಗರವೇ ಭೂದಿಯಿಂದ ಆವರಿಸಿಕೊಂಡಂತೆ ಕಾಣುತ್ತದೆ ಎನ್ನಲಾಗಿದೆ.

ಅಗ್ನಿಯ ಅವಘಡಕ್ಕೆ ಸಾವಿರಾರು ಕಟ್ಟಡಗಳು ಸಿಲುಕಿ ಕ್ಷಣಾರ್ಧದಲ್ಲಿ ಸುಟ್ಟು ಬೂದಿಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಗಸ್ಟ್ 8 ಮಂಗಳವಾರದಂದು ಕಾಣಿಸಿಕೊಂಡ ಬೆಂಕಿ ಮಾಯಿಯ ಸುತ್ತಮುತ್ತಲಿನ ಒಣ ಪೊದೆಗಳಿಗೆ ಆವರಿಸಿಕೊಂಡು ದೊಡ್ಡ ಮಟ್ಟದಲ್ಲಿ ಹರಡತೊಡಗಿದೆ. ಬಳಿಕ ಬೆಂಕಿಯ ಪ್ರಮಾಣ ಹೆಚ್ಚಾಗುತ್ತಾ ರಸ್ತೆಗಳು, ಸೇತುವೆಗಳು ಮತ್ತು ವಿದ್ಯುತ್ ಸಂಪರ್ಕಗಳು ಕಡಿತಗೊಂಡವು.

ಲಹೈನಾ ದ್ವೀಪದಲ್ಲಿ ಉಂಟಾದ ಅಗ್ನಿ ಅವಘಡದಿಂದ ಇದುವರೆಗೆ ಕನಿಷ್ಠ 53 ಜನರು ಮೃತಪಟ್ಟಿದ್ದು ನೂರಾರು ಮಂದಿ ಗಾಯಗೊಂಡಿದ್ದಾರೆ ಅಲ್ಲದೆ ಸಾವಿರಾರು ಕುಟುಂಬ ತಮ್ಮ ಸೂರುಗಳನ್ನು ಕಳೆದುಕೊಂಡು ಅತಂತ್ರವಾಗಿವೆ ಎನ್ನಲಾಗಿದೆ. ಇದು ಹವಾಯಿ ದ್ವೀಪದ ಇತಿಹಾಸದಲ್ಲಿ ಕಂಡ ಮೊದಲ ಭೀಕರ ಅಗ್ನಿ ಅವಘಡವಾಗಿದೆ.

ಮಾಯಿ ದ್ವೀಪದಲ್ಲಿ ಕಾಡ್ಗಿಚ್ಚುಗಳು ವಿನಾಶಕಾರಿ ಪರಿಣಾಮವನ್ನು ಬೀರಿದ್ದು ದ್ವೀಪದ ಪ್ರಮುಖ ಆದಾಯದ ಮೂಲವಾದ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next