Advertisement

ಪ್ರಬುದ್ಧ ಸಮಾಜಕ್ಕೆ ಶಿಕ್ಷಣ ಅವಶ್ಯ: ಪ್ರಿಯಾಂಕ್

12:56 PM May 15, 2022 | Team Udayavani |

ಚಿತ್ತಾಪುರ: ತಾಲೂಕು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ಪ್ರಬುದ್ಧ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ತಾಲೂಕಿನ ಮಲಕೂಡ ಗ್ರಾಮದಲ್ಲಿ ನಬಾರ್ಡ್‌-25 ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ 48ಲಕ್ಷ ರೂ. ಮೊತ್ತದಲ್ಲಿ ನಿರ್ಮಿಸಿದ ಶಾಲಾ ಕೋಣೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಶಿಕ್ಷಣ ಪಡೆದ ಯುವಜನತೆ ದೇಶಕ್ಕೆ ಸುಭದ್ರ ಅಡಿಪಾಯ ಆಗುತ್ತಾರೆ. ಹೀಗಾಗಿ ತಾವು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ. ಚಿತ್ತಾಪುರ ಹೊರವಲಯದಲ್ಲಿ ನಾಗಾವಿ ಶೈಕ್ಷಣಿಕ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಲಾಗಿದೆ ಎಂದರು.

ಮಕ್ಕಳಿಗೆ ಶಿಕ್ಷಣದಲ್ಲಿ ಆಸಕ್ತಿ ಮೂಡಿಸುವಲ್ಲಿ ಪೋಷಕರ ಪಾತ್ರ ಹಿರಿದಾಗಿದೆ. ಮಕ್ಕಳನ್ನು ವೈಜ್ಞಾನಿಕ ಮನೋಭಾವನೆಯಡಿ ಬೆಳೆಸಬೇಕು. ಅಂದಾಗ ಮಾತ್ರ ಒಂದು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿ ಯಾಗುತ್ತದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ ಶಾಸಕರು, ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕೆ ನನಗೆ ಈ ಬಹುಮಾನ ನೀಡಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.

Advertisement

ಅಕ್ರಮ ಪಿಎಸ್‌ಐ ನೇಮಕಾತಿಯಲ್ಲಿ ನಡೆದಿರುವ ಹಗಣರವನ್ನು ಹೊರಗೆ ತಂದಿರುವುದಕ್ಕೆ ಸಿಐಡಿಯವರು ನನಗೆ ನೋಟಿಸು ನೀಡಿದ್ದಾರೆ. ಯುವಕರ ಭವಿಷ್ಯದ ವಿಚಾರದಲ್ಲಿ ಸರ್ಕಾರ ಗಂಭೀರತೆ ಪ್ರದರ್ಶನ ಮಾಡುತ್ತಿಲ್ಲ ಎಂದು ಹೇಳಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ತಿಪ್ಪಣಪ್ಪ ಕಮಕನೂರ ಮಾತನಾಡಿ, ಅಭಿವೃದ್ದಿ ವಿಚಾರದಲ್ಲಿ ಪ್ರಿಯಾಂಕ್‌ ಖರ್ಗೆ ಅವರನ್ನು ಮೀರಿಸುವಂತ ಮತ್ತೂಬ್ಬ ಶಾಸಕರಿಲ್ಲ.ಎಂದರು.

ತಾಪಂ ಮಾಜಿ ಅಧ್ಯಕ್ಷ ಜಗಣ್ಣಗೌಡ ಪಾಟೀಲ ರಾಮತೀರ್ಥ, ಜಿಪಂ ಮಾಜಿ ಸದಸ್ಯ ರಮೇಶ ಮರಗೋಳ, ಎಪಿಎಂಸಿ ಅಧ್ಯಕ್ಷ ಸಿದ್ಧುಗೌಡ ಅಫಜಲ್‌ಪುರಕರ್‌, ಶಿವರುದ್ರ ಭೇಣಿ, ಮಲ್ಲಪ್ಪ ಹೊಸಮನಿ, ಮನ್ಸೂರ ಪಟೇಲ, ರಾಜಶೇಖರ ತಿಮ್ಮಾನಾಯಕ ಹಾಗೂ ಮುಖಂಡರು, ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next