ಕಾರ್ ಮೆಕ್ಯಾನಿಕ್, ಟೈಲರ್, ಚಾಲಕ, ಬ್ಯೂಟೀಷಿಯನ್, ವಿದ್ಯಾರ್ಥಿ, ಮಕ್ಕಳು ಜತೆ ಯಾಗಿ ತಮ್ಮ ಅಜ್ಜನ ಗದ್ದೆಯಲ್ಲಿ ಕೃಷಿ
ಚಟುವಟಿಕೆಯಲ್ಲಿ ನಿರತರಾಗಿರುವುದು ಕಂಡು ಬಂದಿತ್ತು.ಇವರೆಲ್ಲರೂ ಮಟ್ಟು ಆಳಿಂಜೆಯ ದಿ| ಮಟ್ಟು ಚಿನ್ನು ಆರ್. ಅಂಚನ್, ವನಜಾ ಚಿನ್ನು ಅಂಚನ್ ದಂಪತಿಯ ಅವಿಭಕ್ತ ಕುಟುಂಬದ ಸದಸ್ಯರಾಗಿದ್ದು, ಕುಟುಂಬದ ಗದ್ದೆಯಲ್ಲಿ ಭತ್ತದ ಕೃಷಿಗೆ ಒಂದೆಡೆ ಕಲೆತಿದ್ದಾರೆ.
Advertisement
ಕೃಷಿ ಹಬ್ಬಕ್ಕೆ ಕಲೆತ ಅವಿಭಕ್ತ ಕುಟುಂಬಹಿರಿಯ ಕೃಷಿಕರಾಗಿದ್ದ ದಿ| ಮಟ್ಟು ಚಿನ್ನು ಆರ್. ಅಂಚನ್ ಅವರು ಹಾಕಿ ಕೊಟ್ಟ ಸಂಪ್ರದಾಯದಂತೆ ತನ್ನ 7 ಪುತ್ರರು, ಪುತ್ರಿಯ ಮನೆಯ ಸಮಸ್ತ ಮಂದಿ ಒಟ್ಟಾಗಿ ಒಂದು ದಿನ ತಮ್ಮ ಒಂದು ಎಕರೆ ಜಮೀನಿನಲ್ಲಿ ಸಾಂಪ್ರದಾಯಿಕ ನೇಜಿ ನಾಟಿ ಮಾಡುವುದು ಸಂಪ್ರದಾಯವಾಗಿದೆ.
Related Articles
ಈ ಬಾರಿ ಕುಟುಂಬದ ಹಿರಿಯ, ಪ್ರಗತಿಪರ ಕೃಷಿಕ ಲಕ್ಷ್ಮಣ್ ಮಟ್ಟು ಮುಂದಾಳತ್ವದಲ್ಲಿ ಹಸನುಗೊಳಿಸಿದ ಗದ್ದೆಯಲ್ಲಿ ಸಿದ್ಧಪಡಿಸಲಾದ ಚಾಪೆ ನೇಜಿ (ಎಂಒ4 ತಳಿ)ಯನ್ನು ನೆಡುವ ಮೂಲಕ ಸಂಪ್ರದಾಯ ಮುಂದುವರಿಸಿದ್ದಾರೆ.
Advertisement
ಈ ಕುಟುಂಬದ ಸದಸ್ಯರು ಬೇರೆ ಬೇರೆ ಮನೆಗಳಲ್ಲಿ ವಾಸವಾಗಿದ್ದರೂ ಈ ಕೃಷಿ ಕೆಲಸಕ್ಕೆ ಕೂಡು ಕುಟುಂಬದಂತೆ ಒಗ್ಗೂಡಿಕೊಂಡು ಸುಮಾರು 25 ಮಂದಿ ಜತೆಗೂಡಿ ಬೇಸಾಯ ಕೆಲಸ ನಡೆಸಿದ್ದರು. ಕೃಷಿ ಕೂಲಿಯಾಳುಗಳ ಸಹಾಯ ಇಲ್ಲದೇ, ಉಳುಮೆ ಮಾಡಿ ಹದಗೊಳಿಸಿದ 1 ಎಕರೆ ಗದ್ದೆಯಲ್ಲಿ 12 ದಿನದ ಚಾಪೆ ನೇಜಿಯನ್ನು ಬಳಸಿಕೊಂಡು ನೇಜಿ ನಾಟಿ ಕಾರ್ಯ ಪೂರೈಸಿದ್ದಾರೆ.
ನಾಟಿಯ ದಿನ ನಿಗದಿ ಪಡಿಸಿ ಚಾಪೆ ನೇಜಿ ಹಾಕಲಾಗುತ್ತದೆ. ನಾವು ಮನೆಮಂದಿ ಜತೆಯಾಗಿ ಕೃಷಿ ಹಬ್ಬದ ಮಾದರಿಯಲ್ಲಿ ಕೃಷಿ ಚಟುವಟಿಕೆ ನಿರತರಾಗುತ್ತೇವೆ. ಕೃಷಿ ಕೂಲಿಯಾಳುಗಳ ಸಮಸ್ಯೆಗೆ ಮುಕ್ತಿ. ಖರ್ಚು ವೆಚ್ಚ ಸಮದೂಗಿಸಲು ಅವಿಭಕ್ತ ಕುಟುಂಬ ಕೃಷಿಗೆ ಪೂರಕ.
*ಲಕ್ಷ್ಮಣ್ ಮಟ್ಟು,
ಹಿರಿಯ ಪ್ರಗತಿಪರ ಕೃಷಿಕ *ವಿಜಯ ಆಚಾರ್ಯ ಉಚ್ಚಿಲ