Advertisement

Fish: ಮತ್ಸ್ಯ ವಾಹಿನಿ ಯೋಜನೆ- ಮೀನುಗಾರರಿಗೆ ಮೀನು ಉತ್ಪನ್ನಗಳನ್ನು ಮಾರಾಟ ಮಾಡಲು ಇ-ಆಟೋ

11:05 PM Sep 03, 2023 | Team Udayavani |
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ “ಮತ್ಸ ವಾಹಿನಿ” ಮೀನುಗಾರರಿಗೆ ತಾಜಾ ಮೀನು ಮತ್ತು ಮೌಲ್ಯವರ್ಧಿತ ಮೀನು ಉತ್ಪನ್ನಗಳನ್ನು ಮಾರಾಟ ಮಾಡಲು ಫ್ರೀಜರ್‌ಗಳು ಮತ್ತು ಅಗತ್ಯ ವಸ್ತುಗಳನ್ನು ಹೊಂದಿರುವ ಅತ್ಯಾಧುನಿಕ ಇ-ಆಟೋ ರಿಕ್ಷಾಗಳನ್ನು ಒದಗಿಸಲಾಗುತ್ತದೆ. “ಸ್ವಾವಲಂಬಿ ಬದುಕಿಗಾಗಿ ಸ್ವಯಂ ಉದ್ಯೋಗ’ ಎಂಬ ಧ್ಯೇಯ ವಾಕ್ಯದೊಂದಿಗೆ ಮೀನು ಸರಬರಾಜು ಮಾಡಲು ಅರ್ಹರಿಗೆ ಇ-ತ್ರಿಚಕ್ರ ವಾಹನಗಳನ್ನು ವಿತರಿಸಲಾಗುತ್ತದೆ. “ಮತ್ಸ್ಯ ವಾಹಿನಿ’ ಸದ್ಯಕ್ಕೆ ಪೈಲಟ್‌ ಪ್ರೊಜೆಕ್ಟ್ ಆಗಿದ್ದು, ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿದೆ. ಇಲ್ಲಿಯ ಸಫ‌ಲತೆ ಪರಿಗಣಿಸಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸಲು ನಿರ್ಧರಿಸಲಾಗುತ್ತದೆ.
ದಾಖಲೆಗಳು
ಆಧಾರ್‌ ಕಾರ್ಡ್‌, ಚಾಲನಾ ಪರವಾನಗಿ (ಡಿ.ಎಲ್‌), ವಿಳಾಸದ ಪುರಾವೆ. ಅರ್ಜಿಯಲ್ಲಿ ವಿದ್ಯಾರ್ಹತೆ, ತರಬೇತಿ ಪಡೆದಿರುವ ವಿವರಗಳು, ಮೀನುಗಾರಿಕೆ, ಮೀನು ಮಾರಾಟ ಕ್ಷೇತ್ರದಲ್ಲಿ ಅನುಭವದ ಬಗ್ಗೆ ಭರ್ತಿ ಮಾಡಬೇಕು.
ಪ್ರಮುಖ ಷರತ್ತು,  ನಿಬಂಧನೆಗಳು 
ಅರ್ಹ ಫ್ರಾಂಚೈಸಿ/ಏಜೆನ್ಸಿ/ಪರವಾನಗಿದಾರನನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಈ ಕೆಳಗಿನ ಆದ್ಯತೆಗಳನ್ನು ಪರಿಗಣಿಸಲಾಗುತ್ತದೆ.
ಈಗಾಗಲೇ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಫ್ರಾಂಚೈಸಿಗಳು ಈ ಯೋಜನೆಯಡಿ ಅವರ ಮೀನು ಮಾರಾಟ ಜಾಲವನ್ನು ವಿಸ್ತರಿಸಲು ಬಯಸಿದಲ್ಲಿ ಅವರಿಗೆ ಆದ್ಯತೆ ನೀಡುವುದು
ಸರ್ಕಾರದ ವಿವಿಧ ಕೌಶಲ್ಯ ಅಭಿವೃದ್ಧಿ ಯೋಜನೆಗಳಡಿ ತರಬೇತಿ ಪಡೆದವರು
ಮೀನುಗಾರಿಕೆ ಇಲಾಖೆಯಿಂದ ಅನುಮೋದಿತ ಮೀನುಗಾರರ ಉತ್ಪಾದಕ ಸಂಸ್ಥೆಗಳು (ಎಫ್ಎಫ್ಪಿಒಎಸ್‌)
ಮೀನು ಮಾರಾಟ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಮೀನುಗಾರಿಕೆ ಸಹಕಾರ ಸಂಘಗಳು/ಒಕ್ಕೂಟಗಳು
ಮಹಿಳಾ ಸ್ವಸಹಾಯ ಗುಂಪುಗಳು
ಸ್ವಯಂ ಉದ್ಯೋಗ ಕೈಗೊಳ್ಳಲು ಆಸಕ್ತರಿರುವ ನಿರುದ್ಯೋಗಿ ಯುವಕ/ಯುವತಿಯರು
ವೈಯಕ್ತಿಕ ಫ‌ಲಾನುಭವಿಗಳಿಗೆ ಒಂದು ವಾಹನ, ಸಂಘ ಸಂಸ್ಥೆಗಳಿಗೆ ಗರಿಷ್ಠ 5 ವಾಹನಗಳವರೆಗೆ ಹಂಚಿಕೆ
ಆಯಾ ವರ್ಗಗಳಲ್ಲಿ ನಿಗದಿತ ಗುರಿಗಿಂತ ಹೆಚ್ಚಿನ ಅರ್ಜಿಗಳು ಬಂದಲ್ಲಿ ಲಾಟರಿ ಮೂಲಕ ಆಯ್ಕೆ
ಸ್ವೀಕೃತವಾದ ಅರ್ಜಿಗಳನ್ನು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯು ಸರ್ಕಾರದ ಮಾರ್ಗಸೂಚಿಗಳನ್ವಯ ಅರ್ಹ ಫ್ರಾಂಚೈಸಿ/ಏಜೆನ್ಸಿ/ ಪರವಾನಿಗೆದಾರರನ್ನು ಆಯ್ಕೆ ಮಾಡುವುದು. ಇದರಲ್ಲಿ ಜಿಲ್ಲಾಧಿಕಾರಿಗಳು ಮತ್ತು ಇಲಾಖೆಯ ಅಧಿಕಾರಿಗಳು ಇರುತ್ತಾರೆ.
ಆಯ್ಕೆಯಾದ ಸಾಮಾನ್ಯ ವರ್ಗದ ಫ್ರಾಂಚೈಸಿ/ಏಜೆನ್ಸಿ, ಪರನಾನಿಗೆದಾರರು ರೂ.2,00,000 ಹಾಗೂ ಪರಿಶಿಷ್ಟ ಜಾತಿ, ಪಂಗಡ ಮಹಿಳೆಯರು ರೂ.1,50,000 ಮೊತ್ತವನ್ನು ಭದ್ರತಾ ಠೇವಣಿಯಾಗಿ ಪಾವತಿಸಲು ಸಿದ್ಧರಿರಬೇಕು. ಪರವಾನಗಿ ಅವಧಿ ಪೂರ್ಣಗೊಳಿಸಿದ ನಂತರ ಮರು ಪಾವತಿ.
ಮಾಸಿಕ ರೂ.3,000ನ್ನು ಏಜೆನ್ಸಿ ಫೀಯಾಗಿ ನಿಗಮಕ್ಕೆ ಪಾವತಿಸತಕ್ಕದ್ದು.
ಆಯ್ಕೆಯಾದ ಫ್ರಾಂಚೈಸಿದಾರರು ಯೋಜನೆಯ ಷರತ್ತು ಹಾಗೂ ನಿಬಂಧನೆಗಳನ್ನು ಒಪ್ಪಿರುವ ಬಗ್ಗೆ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಜತೆ ಕರಾರು ಮಾಡಿಕೊಳ್ಳತಕ್ಕದ್ದು.
ಅರ್ಜಿ ಸಲ್ಲಿಸಬೇಕಾದ ವಿಳಾಸ
ಮೀನುಗಾರಿಕೆ ಉಪನಿರ್ದೇಶಕರ ಕಚೇರಿ, ಬೆಂಗಳೂರು ನಗರ ಜಿಲ್ಲೆ, ಕಬ್ಬನ್‌ ಪಾರ್ಕ್‌, ಕೆ.ಆರ್‌.ಸರ್ಕಲ್‌-ಬೆಂಗಳೂರು-560 001.  ಹೆಚ್ಚಿನ ಮಾಹಿತಿಗಾಗಿ: ದೂ. 080-22350078/0824-2421281/82/83. ಸಹಾಯವಾಣಿ 8277200 ಸಂಪರ್ಕಿಸಿ. ವೆಬ್‌ಸೈಟ್‌- https://fisheries.karnataka.gov.in . ಈಗಾಗಲೇ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಜಾರಿಯಲ್ಲಿದ್ದು, ಆಯಾ ಜಿಲ್ಲೆಗಳಲ್ಲಿ ತ್ರಿಚಕ್ರ ವಾಹನಗಳನ್ನು ವಿತರಿಸಲಾಗುತ್ತಿದೆ. ಈ ಯೋಜನೆಗೆ ಫ‌ಲಾನುಭವಿಗಳಾಗಲು ಅರ್ಹರು ಸಂಬಂಧಪಟ್ಟ ಆಯಾ ಜಿಲ್ಲೆಯ ಕಚೇರಿಗಳಲ್ಲಿ ಸಂಪರ್ಕಿಸಬಹುದು.
ನಾಗಪ್ಪ ಹಳ್ಳಿ ಹೊಸೂರು
Advertisement

Udayavani is now on Telegram. Click here to join our channel and stay updated with the latest news.

Next