Advertisement
ಇಷ್ಟು ಹೇಳಿದೆ ಮೇಲೆ ಕರಾವಳಿಯ ಖಾದ್ಯಗಳ ಬಗ್ಗೆಯೇ ಹೇಳುತ್ತಿದ್ದಾರೆನ್ನುವುದು ಖಾತ್ರಿ ಆಯ್ತಾ… ಹೌದು, ನಿಮ್ಮ ಊಹೆ ಸರಿಯಾಗಿಯೇ ಇದೆ. ಕರಾವಳಿಯ ಖಾದ್ಯಗಳಿಗೀಗ ರಾಜ್ಯದ ಉಳಿದ ಭಾಗಗಳೂ ಸೇರಿ ವಿಶ್ವದೆಲ್ಲೆಡೆ ಭಾರಿ ಬೇಡಿಕೆ ಇದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಂತೂ ಎಲ್ಲಿಲ್ಲದ ಬೇಡಿಕೆ.
Related Articles
Advertisement
ತಾಜಾ ತಾಜಾ ಮೀನು: ಸಂತೆಯಲ್ಲಿ ಕೊಂಡ ತರಕಾರಿಯನ್ನು ವಾರ ಕಾಲ ಇಡಬಹುದು. ಆದರೆ ಒಮ್ಮೆ ಮಾರುಕಟ್ಟೆಗೆ ಬರುವ ಮೀನಿನ ಆಯುಷ್ಯ ಗರಿಷ್ಠ ಎರಡು ದಿನ. ಆ ನಂತರ ತಾಜಾತನ ಇರುವುದಿಲ್ಲ. ಹೀಗಾಗಿ ವಿವಿಧೆಡೆಯಿಂದ ಬಂದ ತರಹೇವಾರಿ ಮತ್ಸ್ಯಗಳನ್ನು ಎರಡೇ ದಿನದಲ್ಲಿ ಮಾರಾಟ ಮಾಡುವುದು ವ್ಯಾಪಾರಿಗಳಿಗಿರುವ ಸವಾಲು.
ಮೀನುಗಾರರು ಸಮುದ್ರದಿಂದ ಹಿಡಿದು ತಂದ ಮೀನುಗಳನ್ನು ಬಂದರಿನಲ್ಲಿ ದೊಡ್ಡ ವ್ಯಾಪಾರಿಗಳು ಖರೀದಿಸುತ್ತಾರೆ. ನಂತರ ಬೇರೆ ಬೇರೆ ಪ್ರದೇಶಕ್ಕೆ ಸಗಟು ವ್ಯಾಪಾರಿಗಳ ಮೂಲಕ ಸಾಗಿಸುತ್ತಾರೆ. ಮೀನು ಇದೇ ವ್ಯವಸ್ಥೆಯಲ್ಲಿ ರಾಜಧಾನಿಗೂ ಬರುತ್ತದೆ. ಸಗಟು ವ್ಯಾಪಾರಿಗಳು ಹೋಲ್‌ಸೇಲ್ ದರದಲ್ಲಿ ಸಾಮಾನ್ಯ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ.
ವ್ಯಾಪಾರಿಗಳು ಗ್ರಾಹಕರಿಗೆ ನೀಡುವ ಹೊತ್ತಿಗೆ ಮೀನುಗಳ ಮೂಲ ದರ ದುಪ್ಪಟ್ಟು, ಇಲ್ಲವೇ ಮೂರು ಪಟ್ಟಾಗಿರುತ್ತದೆ. ಸೀಜನ್‌ಗೆ ಅನುಗುಣವಾಗಿ ಮೀನಿನ ಬೆಲೆ ನಿಗದಿಯಾಗುತ್ತದೆ. ಬಂದರಿನಲ್ಲಿ ಒಂದು ಕೇಜಿ ಬಂಗುಡೆಗೆ 100 ರೂ. ಕೊಟ್ಟು ಕೊಳ್ಳುವ ದೊಡ್ಡ ವ್ಯಾಪಾರಿಗಳು, ಸಗಟು ವ್ಯಾಪಾರಿಗಳಿಂದ 150 ರೂ. ಪಡೆಯುತ್ತಾರೆ. ಮಾರಾಟಗಾರರು 200 ರೂ. ನಿಗದಿ ಮಾಡಿ ಗ್ರಾಹಕರ ಕೈಗಿಡುತ್ತಾರೆ.
ಸಾಗಣೆ ಪ್ರಕ್ರಿಯೆ ಹೇಗೆ?: ಮೀನು ಹೂವಿದ್ದಂತೆ. ಹೂವಿನ ಆಯಸ್ಸು ಒಂದೇ ದಿನ. ಹಾಗೇ ಮೀನು ಕೂಡ. ಶಿಥಲೀಕರಣ ವ್ಯವಸ್ಥೆಯಲ್ಲಿ ನಿರ್ದಿಷ್ಟ ದಿನಕ್ಕಿಂತ ಜಾಸ್ತಿ ಇಟ್ಟರೆ ಮೀನೂಟ ರುಚಿಯಾಗದು. ರಾಜ್ಯ ಹಾಗೂ ನೆರೆಯ ರಾಜ್ಯದ ಮೀನುಗಳನ್ನು ಫೈಬರ್ ಬಾಕ್ಸ್‌ನಲ್ಲಿ ಲಾರಿ ಅಥವಾ ಟೆಂಪೋ ಮೂಲಕ ಸಾಗಿಸುತ್ತಾರೆ. ಒಂದು ಬಾಕ್ಸ್‌ನಲ್ಲಿ 30 ಕೆ.ಜಿ ಮೀನು ಹಾಗೂ ಅದಕ್ಕೆ ಸರಿಹೊಂದುವಷ್ಟು ಮಂಜುಗಡ್ಡೆ (ಐಸ್) ತುಂಬಿಸಿ ಪಾರ್ಸೆಲ್ ಮಾಡಲಾಗುತ್ತದೆ.
ವಾಹನದ ಗಾತ್ರಕ್ಕೆ ಅನುಗುಣವಾಗಿ 50ರಿಂದ 250 ಬಾಕ್ಸ್ ತನಕ ತುಂಬಿಸಿಕೊಂಡು ಬರುತ್ತಾರೆ. ಇನ್ನು ಕೆಲವರು ಶಿಥಲೀಕರಣ ವಾಹನದ ಮೂಲಕವೇ ಸಾಗಾಟ ಮಾಡುತ್ತಾರೆ. ಬೆಂಗಳೂರಿನ ಯಶವಂತಪುರ, ಶಿವಾಜಿನಗರ, ಮಡಿವಾಳ, ಗೌರಿಪಾಳ್ಯ, ಬಿಟಿಎಂ, ಯಲಹಂಕ, ಎಚ್‌ಎಎಲ್, ಕೆ.ಆರ್.ಮಾರುಕಟ್ಟೆ ಮೊದಲಾದ ದೊಡ್ಡ ಮಾರುಕಟ್ಟೆಯಲ್ಲಿ ತಲಾ 3ರಿಂದ 4 ಮಂದಿ ಸಗಟು ವ್ಯಾಪಾರಿಗಳಿದ್ದಾರೆ.
ರಾಜ್ಯದ ಕರಾವಳಿ ಮತ್ತು ಬೇರೆ ರಾಜ್ಯಗಳಿಂದ ಬರುವ ಮೀನು ಸಗಟು ವ್ಯಾಪಾರಿಗಳ ಮೂಲಕವೇ ಸಣ್ಣ ವ್ಯಾಪಾರಿಗಳ ತಲುಪುತ್ತದೆ. ನೆಲಮಂಗಲ, ರಾಜಾರಾಜೇಶ್ವರಿ ನಗರ, ಕೆ.ಆರ್.ಪುರ, ಬನಶಂಕರಿ, ಜಯನಗರ, ವಿಜಯನಗರ, ಬಸವನಗುಡಿ ಹೀಗೆ ನಗರದ ವಿವಿಧ ಭಾಗಕ್ಕೆ ಸಗಟು ವ್ಯಾಪಾರಿಗಳಿಂದಲೇ ಮೀನು ಹೋಗುತ್ತದೆ. ಇನ್ನು ಕೆಲವರು ಮಂಗಳೂರಿನಿಂದ ನೇರವಾಗಿ ಮೀನು ತರಿಸಿಕೊಂಡು ಮಾರಾಟ ಮಾಡುತ್ತಾರೆ.
ಮೋದಿ ಬೂತಾಯಿ: ರಾಜ್ಯದ ಕರಾವಳಿಯಲ್ಲಿ ಪ್ರತಿ ವರ್ಷ ಜನವರಿ ನಂತರ ಮೀನಿನ ಇಳುವರಿ ಕಡಿಮೆ. ಹಾಗೇ ಜೂನ್, ಜುಲೈನಲ್ಲಿ ಮೀನುಗಾರಿಕೆ ಇರುವುದಿಲ್ಲ. ಈ ಅವಧಿಯಲ್ಲಿ ಮಂಗಳೂರನ್ನೇ ಮೀರಿಸಲಾಗು ತ್ತದೆ. ಒಮನ್‌ನಿಂದೇನು ವ್ಯಾಪಾರಿಗಳು ಒಮನ್‌ನಿಂದ ಮೀನನ್ನು ಆಮದು ಮಾಡಿಕೊಳ್ಳುತ್ತಾರೆ. ಒಮನ್ ದೇಶದಿಂದ ಹೊರಟ ಮೀನುಗಳು ಮೊದಲು ಗುಜರಾತ್ ಬಂದರಿನ ಮೂಲಕ ಭಾರತ ಪ್ರವೇಶಿಸುತ್ತವೆ.
ಅಲ್ಲಿಂದ ರಾಜ್ಯದ ಕರಾವಳಿಗೆ ಗುಜರಾತಿನಿಂದ ಬರುವ ಮತ್ತಿ ಮೀನಿಗೆ “ಮೋದಿ ಬೂತಾಯಿ’ ಎಂದು ಹೆಸರಿಟ್ಟಿದ್ದು, ಮಂಗಳೂರಲ್ಲಿ ಇದು ತುಂಬಾ ಫೇಮಸ್. ಬೆಂಗಳೂರಿಗೆ ಬರುವುದೂ ಇದೇ ಮತ್ತಿ ಮೀನು. ಸಾಮಾನ್ಯವಾಗಿ ಮತ್ತಿ ಮೀನು ಜಾಸ್ತಿ ಉದ್ದ ಇರುವುದಿಲ್ಲ. ಆದರೆ ಮೋದಿ ಬೂತಾಯಿ ಉದ್ದ ಹೆಚ್ಚಿರುತ್ತದೆ.
ಬಗೆಬಗೆ ಮೀನಿನ ಖಾದ್ಯ: ಮೆಜೆಸ್ಟಿಕ್ ಸುತ್ತಮುತ್ತ, ಮಲ್ಲೇಶ್ವರ, ಯಶವಂತಪುರ, ಜಾಲಹಳ್ಳಿ ಕ್ರಾಸ್, ವಿಜಯನಗರ, ಬಿಟಿಎಂ, ಜಯನಗರ, ಬಸವನಗುಡಿ, ಕೆ.ಆರ್.ಪುರಂ, ಎಂ.ಜಿ.ರಸ್ತೆ ಹೀಗೆ ನಗರದ ಸುತ್ತಲೂ ಕರಾವಳಿ ಲಂಚ್ ಹೋಮ್‌ಗಳಲ್ಲಿ ಸಮುದ್ರದ ಮೀನನ ರುಚಿಕರವಾದ ಊಟ ಸಿಗುತ್ತದೆ. ಸಮಾನ್ಯ ಹಾಗೂ ಮಧ್ಯಮ ವರ್ಗದ ಹೋಟೆಲ್‌ನಲ್ಲಿ ಮತ್ತಿ, ಬಂಗುಡೆ, ಅಂಜಲ್, ಮಾಂಜಿ, ಕಾಣೆ, ಪ್ರಾನ್ಸ್, ಬೊಂಡಾಸ್, ಕೊಡೈ, ಕ್ರ್ಯಾಬ್, ಮರ್ವಾಯಿ ಹೀಗೆ ಎಲ್ಲಾ ಬಗೆಯ ಮೀನನ ಸಾಂಬಾರು, ಫ್ರೈ, ಕಬಾಬ್, ಬಿರಿಯಾನಿ ಸಿಗುತ್ತದೆ. ಇನ್ನು ನಗರದ ಸ್ಟಾರ್ ಹೋಟೆಲ್‌ಗಳಲ್ಲೂ ಅಂಜಲ್, ಕೇದರ್ ಮತ್ತು ಮಾಂಜಿ ಮೀನುಗಳನ್ನು ಹೆಚ್ಚಾಗಿ ಬಳಸುತ್ತಾರೆ.
ಲಾಭದಾಯಕ ಉದ್ಯಮ: ಮೀನುಗಾರಿಕೆಯ ಜತೆಗೆ ಮೀನು ಮಾರಾಟವೂ ಲಾಭದಾಯಕ ಉದ್ಯಮ. ತಿಂಗಳು ಅಥವಾ ವಾರ್ಷಿಕ ಲೆಕ್ಕಾಚಾರದಲ್ಲಿ ಇಷ್ಟೇ ಆದಾಯ ಬರುತ್ತದೆ ಎಂದು ಹೇಳು ಸಾಧ್ಯವಿಲ್ಲ. ಮೀನಿಗೆ ಒಳ್ಳೆ ಬೆಲೆ ಇದ್ದಾಗ ಆದಾಯ ಚೆನ್ನಾಗಿರುತ್ತದೆ, ಬೆಲೆ ಕುಸಿದಾಗ ಆದಾಯದಲ್ಲೂ ಕುಸಿಯುತ್ತದೆ. ಕಾರ್ತಿಕ ಮಾಸ ಸೇರಿದಂತೆ ಕೆಲವು ತಿಂಗಳಲ್ಲಿ ವ್ಯಾಪಾರ ಹೇಳಿಕೊಳ್ಳುವಷ್ಟು ಇರುವುದಿಲ್ಲ ಎಂದು ಮೀನಿನ ಸಗಟು ವ್ಯಾಪಾರಿಯೊಬ್ಬರು ಮಾಹಿತಿ ನೀಡಿದರು.
ಆನ್‌ಲೈನ್‌ನಲ್ಲಿ ಫ್ರೆಶ್ ಫಿಶ್: ಸಾಮಾನ್ಯ ಅಂಗಡಿ, ಮಾಲ್ ಹಾಗೂ ಮಾರುಕಟ್ಟೆ ಮಾತ್ರವಲ್ಲದೇ ಆನ್‌ಲೈನ್‌ನಲ್ಲೂ ಪ್ರೇಶ್ ಮೀನು ಖರೀದಿ ಮಾಡಬಹುದು. ಆರ್ಡರ್ ಮಾಡಿದ 5 ಗಂಟೆಯೊಳಗೆ ಮನೆ ಬಾಗಿಲಿಗೆ ಮೀನು ಬರುತ್ತದೆ. ಬಂಗುಡೆ, ಅಂಜಲ್, ಮಾಂಜಿ, ಪ್ರಾನ್ಸ್ ಹೀಗೆ ಹತ್ತಾರು ಬಗೆಯ ಮೀನು ಆನ್‌ಲೈನ್‌ನಲ್ಲಿ ಮನೆಗೆ ತರಿಸಿಕೊಳ್ಳಬಹುದು. ಒಂದೇ ಬಗೆಯ ಮೀನು ಅಥವಾ ಕಾಂಬೋ ಆಫರ್ ಲಭ್ಯತೆ ಇದೆ. ಮೀನಂಗಡಿ, ಮಾಲ್ ಹಾಗೂ ಮಾರುಕಟ್ಟೆ ದರಕ್ಕಿಂತ ಇದು ಹೆಚ್ಚು ದುಬಾರಿ. www.dailyfish.comನಲ್ಲಿ ಫ್ರೆಶ್ ಫಿಶ್ ಬುಕ್ ಮಾಡಬಹುದು.
ನಿಗಮದ ಮೊಬೈಲ್ ವಾಹನ: ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದಲೂ ನಗರದಲ್ಲಿ ಮೀನು ಮಾರಾಟದ ಜತೆಗೆ ರುಚಿ ರುಚಿಯಾದ ಮೀನಿನ ಖಾದ್ಯ ನೀಡುವ ಮತ್ಸ್ಯದರ್ಶಿನಿಯನ್ನು ಹೊಂದಿದೆ. ಮಂಗಳೂರು ಬಂದರಿನಿಂದ ಮೀನು ಇಲ್ಲಿಗೆ ಬರುತ್ತದೆ. ನಿಗಮದ ಒಂದು ಮೊಬೈಲ್ ವೆಹಿಕಲ್ ಸಹಕಾರಿ ನಗರದ ಸುತ್ತಲಿನ ಪ್ರದೇಶಕ್ಕೆ ಮೀನು ಸರಬರಾಜು ಮಾಡುತ್ತದೆ. ಹಾಗೆಯೇ ಕಬ್ಬನ್ ಪಾರ್ಕ್, ಇಂದಿರಾನಗರ ಮತ್ತು ಯಲಹಂಕದಲ್ಲಿ ಮೀನು ಮಾರಾಟಕ್ಕೆ ಸುಸಜ್ಜಿತ ಮಳಿಗೆಗಳನ್ನು ಹೊಂದಿದೆ. ಮಳಿಗೆಯಲ್ಲಿ ಮೀನಿನ ಉಪ್ಪಿನಕಾಯಿ ಕೂಡ ಸಿಗುತ್ತದೆ.
ಖರೀದಿಸುವಾಗ ಎಚ್ಚರದಿಂದಿರಿ!: ಗ್ರಾಹಕರೇ, ಮಾರುಕಟ್ಟೆಗೆ ಹೋಗಿ ಮೀನು ಕೊಳ್ಳುವಾಗ ಸ್ವಲ್ಪ ಎಚ್ಚರ ವಹಿಸಿ. ಕರಾವಳಿಯಿಂದ ರಾಜಧಾನಿಗೆ ಮೀನು ಬರಲು ಕನಿಷ್ಠ 5ರಿಂದ 10 ಗಂಟೆಯಾಗುತ್ತದೆ. ಇನ್ನು ಕೆಲ ಗಂಟೆ ಹೆಚ್ಚೇ ಆಗಬಹುದು. ಮೀನು ಖರೀದಿಯ ಮೊದಲು ಮೀನನ್ನು ಮುಟ್ಟಿ ನೋಡಿ, ತುಂಬಾಮೃದುವಾಗಿದ್ದರೆ ಖರೀದಿಸಬೇಡಿ. ಕೆಂಪು ಬಣ್ಣಕ್ಕೆ ಮಾಗಿದ್ದರೂ ಖರೀದಿಸಬೇಡಿ. ಮೀನಿನ ಕಣ್ಣನ್ನು ಗಮನಿಸಿ ಅದು ತಾಜಾ ಮೀನೋ, ಅಲ್ಲವೋ ಎಂದು ನಿರ್ಧರಿಸಬಹುದು.
ಏಡಿ, ಮರ್ವಾಯಿ ರುಚಿ: ಸಮುದ್ರದ ಮೀನುಗಳಂತೆಯೇ ಏಡಿ (ಕ್ರ್ಯಾಬ್) ಹಾಗೂ ಮರ್ವಾಯಿ (ರಾÌ ಮುಸೆಲ್ಸ್) ಕೂಡ ಅತ್ಯಂತ ರುಚಿಕರವಾದ ತಿನಿಸು. ಸಾಮಾನ್ಯವಾಗಿ ಏಡಿಗಳು ಮೀನಿನ ಬಲೆಗೆ ಬೀಳುತ್ತವೆ. ಮರ್ವಾಯಿ ಹಾಗಲ್ಲ. ಸಮುದ್ರದ ಮಧ್ಯೆ ಇರುವ ಕಲ್ಲುಗಳಲ್ಲಿ ಬೆಳೆದಿರುತ್ತದೆ. ಉಪ್ಪು ನೀರಿನ ಏಡಿ, ಕಲ್ಲಿನ ಮೇಲಿರುವ ಏಡಿ, ಸಿಹಿ ನೀರಿನ ಏಡಿ, ಆಳ ಸಮುದ್ರದ ಏಡಿ ಹೀಗೆ ಐದಾರು ಬಗೆಯ ಏಡಿ ಇದೆ. ಮರ್ವಾಯಿಯಲ್ಲೂ ಹಲವು ಬಗೆ ಇದೆ. ಬೆಂಗಳೂರಿನ ಬಹುತೇಕ ಮೀನು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಒಣಮೀನು: ಯಶವಂತಪುರ, ಶಿವಾಜಿನಗರ, ಮಡಿವಾಳ, ಗೌರಿಪಾಳ್ಯ, ಬಿಟಿಎಂ, ಯಲಹಂಕ, ಎಚ್‌ಎಎಲ್, ಕೆ.ಆರ್.ಮಾರುಕಟ್ಟೆಯಲ್ಲಿ ಹಸಿ ಮೀನನ ಜತೆಗೆ ಒಣಮೀನು ಸಿಗುತ್ತದೆ. ಎಲ್ಲಾ ಮೀನುಗಳನ್ನು ಒಣಗಿಸಿದರೆ ರುಚಿ ಬರುವುದಿಲ್ಲ. ಹೀಗಾಗಿ ಕೆಲವೇ ಕೆಲವು ಮೀನುಗಳನ್ನು ಒಣಗಿಸಿ ಹೆಚ್ಚು ಲಾಭ ಪಡೆಯುತ್ತಾರೆ. ಒಣ ಮೀನಿನ ವಾಸನೇ ಜೋರಾಗಿರುತ್ತದೆ.
ಕೆರೆ ಮೀನುಗಳ ಮಾರಾಟ: ಸಮುದ್ರದ ಮೀನಿನ ಜತೆಗೆ ರೋಹು, ಕಾಟ್ಲಾ, ಮೃಗಾಲ್, ಸಾಮಾನ್ಯ ಗೆಂಡೆ, ಹುಲ್ಲುಗಂಡೆ ಸೇರಿ ವಿವಿಧ ಪ್ರಬೇಧದ ಕೆರೆ ಮೀನುಗಳನ್ನು ಮಾರಾಟ ಮಾಡುತ್ತಾರೆ. ತಳ್ಳುಗಾಡಿ, ಬೈಕ್ ಮೂಲಕ ಮಾರಾಟಕ್ಕೆ ಬರುವವರು ಬಂಗುಡೆ, ಮತ್ತಿ ಮೀನಿನ ಜತೆಗೆ ಕರೆ ಮೀನನ್ನೇ ಜಾಸ್ತಿ ಇಟ್ಟುಕೊಂಡಿರುತ್ತಾರೆ. ಕಡಲ ಮೀನಿಗಿಂತ ಬೆಲೆಯೂ ಕಡಿಮೆ ಇರುತ್ತದೆ.
ಮಾಲ್‌ಗಳಲ್ಲೂ ಮೀನು: ನಗರದ ಸಾಮಾನ್ಯ ಅಂಗಡಿ ಮಾತ್ರವಲ್ಲ ಮಾಲ್‌ಗಳಲ್ಲೂ ಫ್ರೆಶ್ ಫಿಶ್ ಸಿಗುತ್ತವೆ. ಎಲ್ಲ ಬಗೆಯ ಕಡಲ ಮೀನುಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ಮಾಲ್‌ನಲ್ಲೇ ಮೀನನ್ನು ಸಂಪೂರ್ಣವಾಗಿ ಕ್ಲೀನ್ ಮಾಡಿಕೊಡುತ್ತಾರೆ. ಮನೆಗೆ ಹೋಗಿ ನೀರಿನಲ್ಲಿ ತೊಳೆದು ನೇರವಾಗಿ ಸಾಂಬಾರು ಅಥವಾ ಫ್ರೈ ಮಾಡಬಹುದು. ಇಲ್ಲಿ ದರ ಸ್ವಲ್ಪ ಹೆಚ್ಚಿರುತ್ತದೆ.
ಬಗೆಬಗೆಯ ಮೀನುಗಳು: ಬಂಗುಡೆ, ಮತ್ತಿ ಅಥವಾ ಬೂತಾಯಿ, ಅಂಜಲ್, ಪ್ರಾನ್ಸ್ ಹಾಗೂ ಮಾಂಜಿ ಮೀನನ ಹೆಸರು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಇದರ ಹೊರತಾಗಿಯೂ ಅತ್ಯಂತ ರುಚಿಕರ ಹಾಗೂ ಆಕರ್ಷಕ ಮೀನುಗಳು ಸಾಕಷ್ಟಿದೆ. ಕೆಂಪೇರಿ, ಥೋರಕೆ, ಕೇದರ್, ಕಾಣೆ, ಸಿಲ್ವರ್, ಶ್ರೀಂಪ್ ಸ್ಯಾಡ್, ಗ್ರೀನ್‌ಜಾಬ್ ಫಿಶ್, ತಾತೇ, ಕಾಂಡೈ, ಸೈಲ್‌ಫಿಶ್, ಥೆÅàಡ್‌ಫಿನ್, ಏರೀ, ಬೊಂಡಾಸ್, ಕಲ್ಲೂರ್, ಮದಮಾಲ್ ಹೀಗೆ ನೂರಾರು ಬಗೆಯ ಮೀನುಗಳು ಇದೆ.
ಮೀನಿನ ದರ ಪೂರ್ವ ನಿಗದಿ ಮಾಡಲು ಸಾಧ್ಯವಿಲ್ಲ. ಸೀಜನ್ ಹಾಗೂ ಮೀನಿನ ಲಭ್ಯತೆಯ ಆಧಾರದಲ್ಲಿ ನಿಗದಿ ಮಾಡಲಾಗುತ್ತದೆ. ಮೀನಿನ ಮಳಿಗೆ ಸ್ವತ್ಛವಾಗಿದ್ದರೆ ಮಾತ್ರ ಗ್ರಾಹಕರನ್ನು ಸೆಳೆಯಲು ಸಾಧ್ಯ. ರಾಜ್ಯದ ಕರಾವಳಿ ಸೇರಿ ಗೋವಾ, ಕೇರಳ, ಆಂಧ್ರ, ತಮಿಳುನಾಡಿನಿಂದಲೂ ಮೀನು ಬರುತ್ತದೆ.-ಪಿ.ವಿ.ಪೌಲ್, ಪಿವಿಪಿ ಸೀ ಫುಡ್, ಯಶವಂತಪುರ * ರಾಜು ಖಾರ್ವಿ ಕೊಡೇರಿ