ಮುಂಬಯಿ: ಬಂಟರ ಸಂಘ ಮುಂಬಯಿ ಸಂಚಾಲಕತ್ವದ ಮಾತೃಭೂಮಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ 30 ನೇ ವಾರ್ಷಿಕ ಮಹಾಸಭೆಯು ಸೆ. 1ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆಯಿಯು.
ಕಾರ್ಯಕ್ರಮದಲ್ಲಿ ಪ್ರಸ್ತುತ ವರ್ಷ ಅತೀ ಹೆಚ್ಚು ಠೇವಣಿ ಸಂಗ್ರಹಿಸಿದ ಪ್ರವೀಣ್ ಭೋಜ ಶೆಟ್ಟಿ ಹಾಗೂ ಉಮಾಕೃಷ್ಣ ಶೆಟ್ಟಿ ಅವರನ್ನು ಗೌರವಿಸಲಾಯಿತು. ಅತೀ ಹೆಚ್ಚು ಠೇವಣಿ ಸಂಗ್ರಹಿಸಿದ ಥಾಣೆ ಶಾಖೆಯ ತಾರನಾಥ ಶೆಟ್ಟಿ, ಸಂಧ್ಯಾ ಮಲ್ಲಿ, ಸಾಕಿನಾಕಾ ಶಾಖೆಯ ಸದಾಶಿವ ಶೆಟ್ಟಿ ಬಂಟ್ವಾಳ, ಸಂದೇಶ್ ಆರ್. ಶೆಟ್ಟಿ, ವಸಾಯಿ ಶಾಖೆಯ ಪುರುಷೋತ್ತಮ ಸುವರ್ಣ, ಸದಾಶಿವ ಎಂ. ಶೆಟ್ಟಿ, ವಾಶಿ ಶಾಖೆಯ ಪ್ರೇಮನಾಥ್ ಅಮೀನ್, ಶೇಖರ್ ಆರ್. ಶೆಟ್ಟಿ, ಕಲ್ಯಾಣ್ ಶಾಖೆಯ ಪ್ರಸಾದ್ ಪಿ. ಶೆಟ್ಟಿ, ಮಹಾಬಲ ಶೆಟ್ಟಿ ಅವರನ್ನು ಸೊಸೈಟಿಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಅವರು ಸ್ಮರಣಿಕೆಯನ್ನಿತ್ತು ಗೌರವಿಸಿದರು.
ಮಾನಸಾ ತಾರನಾಥ್ ಶೆಟ್ಟಿ ಮತ್ತು ಮೋಹಿತ್ ಶೆಟ್ಟಿ ಅವರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾ
ಯಿತು. ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಉಪಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಕಾರ್ಯದರ್ಶಿ ಸಿಎ ರಮೇಶ್ ಶೆಟ್ಟಿ, ಕೋಶಾಧಿಕಾರಿ ಪ್ರವೀಣ್ ಭೋಜ ಶೆಟ್ಟಿ, ನಿರ್ದೇಶಕರುಗಳಾದ ಸಿಎ ಶಂಕರ್ ಶೆಟ್ಟಿ, ಕರ್ನಿರೆ ವಿಶ್ವನಾಥ್ ಶೆಟ್ಟಿ, ಮಹೇಶ್ ಎಸ್. ಶೆಟ್ಟಿ, ಡಾ| ಆರ್. ಕೆ. ಶೆಟ್ಟಿ, ಉಮಾಕೃಷ್ಣ ಶೆಟ್ಟಿ, ಸುಜಾತಾ ಗುಣಪಾಲ್ ಶೆಟ್ಟಿ, ಸಂತೋಷ್ ಜವಾಂದಲೆ, ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಬೋಂಬೆ ಬಂಟ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ನ್ಯಾಯವಾದಿ ಸುಭಾಶ್ ಶೆಟ್ಟಿ, ಸಿಇಒ ಮಂಜಯ್ಯ ಸಿ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಲಹಾ ಸಮಿತಿಯ ರವೀಂದ್ರನಾಥ ಎಂ. ಭಂಡಾರಿ, ಕಿಶೋರ್ ಕುಮಾರ್ ಕುತ್ಯಾರ್, ಜಯಂತ್ ಆರ್. ಪಕ್ಕಳ, ಎನ್. ಪ್ರಕಾಶ್ ಟಿ. ಶೆಟ್ಟಿ, ಕುಶಲ್ ಸಿ. ಭಂಡಾರಿ, ಗುಣಪಾಲ್ ಶೆಟ್ಟಿ ಐಕಳ, ಗಿರೀಶ್ ಆರ್. ಶೆಟ್ಟಿ ತೆಳ್ಳಾರ್, ಶರತ್ ವಿ. ಶೆಟ್ಟಿ, ಡಾ| ಪ್ರಭಾಕರ ಶೆಟ್ಟಿ ಬೋಳ, ಸಂಸ್ಥೆಯ ಹಿರಿಯ ಪ್ರಬಂಧಕ ಮಲ್ಲಿಕಾ ಪಿ. ಶೆಟ್ಟಿ, ಪ್ರಬಂಧಕರುಗಳಾದ ಶಶಿಕಲಾ ಎಸ್. ಶೆಟ್ಟಿ, ಕಿಶೋರ್ ಎಂ. ಪಟೀಲ್, ಶಂಕರ್ ಬಿ. ಶೆಟ್ಟಿ ಉಪಸ್ಥಿತರಿದ್ದರು.
ಚಿತ್ರ-ವರದಿ : ಸುಭಾಷ್ ಶಿರಿಯಾ