Advertisement

ಯಮುನಾ ಎಕ್ಸ್‌ಪ್ರೆಸ್‌ವೇ: ಸೂಟ್‌ಕೇಸ್‌ನಲ್ಲಿ ಯುವತಿಯ ಶವ ಪತ್ತೆ; ತೀವ್ರ ತನಿಖೆ

08:25 PM Nov 19, 2022 | Team Udayavani |

ಮಥುರಾ : ದೆಹಲಿಯ ಶ್ರದ್ಧಾ ವಾಕರ್ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿರುವ ಹೊತ್ತಿನಲ್ಲಿ ಶುಕ್ರವಾರ (ನವೆಂಬರ್ 18) ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇ ಬಳಿ ಟ್ರಾಲಿ ಬ್ಯಾಗ್‌ನೊಳಗೆ ಯುವತಿಯ ಶವ ಪತ್ತೆಯಾಗಿದ್ದು, ತೀವ್ರ ತನಿಖೆ ನಡೆಸಲಾಗುತ್ತಿದೆ.

Advertisement

ಕೃಷಿ ಅನುಸಂಧಾನ ಕೇಂದ್ರದ ಬಳಿಯ ಯಮುನಾ ಎಕ್ಸ್‌ಪ್ರೆಸ್‌ವೇ ಪಕ್ಕದ ಸರ್ವಿಸ್ ಲೇನ್‌ನಲ್ಲಿ ಕೆಂಪು ಬಣ್ಣದ ಚೀಲವು ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ತಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿದೆ. ಬ್ಯಾಗ್‌ನಲ್ಲಿ ಪ್ಲಾಸ್ಟಿಕ್‌ನಲ್ಲಿ ಸುತ್ತಿದ ಮಹಿಳೆಯ ಶವ ಪತ್ತೆಯಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ ಬಲಿಯಾದ ಯುವತಿ 21-22 ವರ್ಷ ವಯಸ್ಸಿನವಳಾಗಿದ್ದು, ಆದರೆ, ಆಕೆಯ ಗುರುತು ಪತ್ತೆಯಾಗಿಲ್ಲ. ಮೃತದೇಹ ಪತ್ತೆಗೆ ಸಂಬಂಧಿಸಿದಂತೆ ಮಥುರಾ ಪೊಲೀಸರು ಜಿಲ್ಲೆಯ ಎಲ್ಲಾ ಠಾಣೆಗಳಿಗೆ ಎಚ್ಚರಿಕೆ ನೀಡಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

ಶವ ಪತ್ತೆಯಾದ ಟ್ರಾಲಿ ಬ್ಯಾಗ್ ಕಂಪನಿಯೊಂದಕ್ಕೆ ಸೇರಿದ್ದು. ಆದರೆ ಅದರ ಟ್ಯಾಗ್ ಕಿತ್ತು ಹಾಕಲಾಗಿದೆ. ಟ್ರಾಲಿ ಬ್ಯಾಗ್‌ನಲ್ಲಿ ಒಂದು ಸ್ಥಳದಲ್ಲಿ ಶ್ರೀಮಂತ ಎಂದು ಬರೆಯಲಾಗಿದೆ. ಕೆಂಪು ಮತ್ತು ಬಿಳಿ ಬಣ್ಣದ ಎರಡು ಸೀರೆಗಳೂ ಪತ್ತೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next