Advertisement
ವಿವಿಧ ಕಾರಣಗಳಿಂದ ಮನೆಯಿಂದ ಹೊರಗುಳಿದ ಯುವತಿಯರು, ರಸ್ತೆಗಳಲ್ಲಿ ತಿರುಗಾಡುವ ಮಾನಸಿಕ ಅಸ್ವಸ್ಥ ಮಹಿಳೆಯರಿಗೆ ಅನಾಥ ಯುವತಿಯರಿಗೆ ಆಶ್ರಯ ನೀಡುವ ನಗರದ ಪ್ರಜ್ಞಾ ಸ್ವಾಧಾರ ಗೃಹದ ನಿರ್ವಹಣೆಗೆ ಅನುದಾನದ ಕೊರತೆಯಾಗಿದೆ. ಹೀಗಾಗಿ ಇಲ್ಲಿ ಆಶ್ರಯ ಪಡೆದಿರುವ ಸುಮಾರು 40 ಮಂದಿ ಹೆಣ್ಮಕ್ಕಳು ಸಮಸ್ಯೆ ಎದುರಿಸಬೇಕಾಗಿದೆ.
ವಿವಿಧ ಕಾರಣಗಳಿಂದ ಪೊಲೀಸ್ ಠಾಣೆ ಮೆಟ್ಟಲೇರುವ ಪ್ರಕರಣಗಳು ಇತ್ಯರ್ಥವಾಗದೆ ಇರುವ ಕಾರಣಕ್ಕಾಗಿ ನೊಂದ ಮಹಿಳೆಯರನ್ನು ಪೊಲೀಸರು ಸ್ವಾಧಾರ ಗೃಹಕ್ಕೆ ತಂದು ಬಿಡುತ್ತಾರೆ. ಇಲ್ಲಿನ ಸಮಸ್ಯೆ ಬಗ್ಗೆ ಅವರಿಗೆ ಹೇಳಿದರೂ ಈ ಬಗ್ಗೆ ತಲೆಕೆಡಿಸಿಕೊಳ್ಳದ ಪೊಲೀಸರು ಹಾಗೂ ಇತರ ಅಧಿಕಾರಿಗಳು ನೊಂದ ಮಹಿಳೆಯರನ್ನು ಇಲ್ಲೇ ತಂದು ಬಿಡುತ್ತಾರೆ. ಆ ಬಳಿಕ ಅವರ ಬಗ್ಗೆ ಯಾರೂ ಕೂಡ ತಲೆಕೆಡಿಸಿಕೊಳ್ಳುವುದೇ ಇಲ್ಲ. ಅವರ ಲಾಲನೆ ಪಾಲನೆ ಜವಾಬ್ದಾರಿ ಸಂಸ್ಥೆಯ ಮೇಲಿರುತ್ತದೆ. ಆದರೆ ಒಂದೂವರೆ ವರ್ಷದಿಂದ ಸಂಸ್ಥೆ ನಿರ್ವಹಣೆಗೆ ಅನುದಾನ ಬಂದಿಲ್ಲ. ಆ ಕಾರಣದಿಂದ ದಾನಿಗಳ ನೆರವು ಯಾಚಿಸಿ ದಿನದೂಡಬೇಕಾಗಿದೆ. ಈ ನಡುವೆ ಸ್ವಾಧಾರ ಗೃಹದಲ್ಲಿರುವ ಗರ್ಭೀಣಿಯರ ಹೆರಿಗೆ, ಯುವತಿಯರ ಮದುವೆ ಮಾಡಬೇಕಾಗುತ್ತದೆ. ಇದರ ಖರ್ಚನ್ನು ಸಂಸ್ಥೆಯ ಮುಖ್ಯಸ್ಥೆ ತನ್ನ ಪಿಂಚಣಿ ಹಣದಲ್ಲಿ ನಿಭಾಯಿಸಬೇಕಾದ ಸ್ಥಿತಿ ಇದೆ. ಬಾಡಿಗೆ, ಸಿಬಂದಿ ಸಂಬಳಕ್ಕೆ ಹರಸಾಹಸ ಪ್ರಜ್ಞಾ ಸ್ವಾಧಾರ ಗೃಹ ಜಪ್ಪಿನಮೊಗರಿನ ಖಾಸಗಿ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದು, ಇದರ ಬಾಡಿಗೆ, ಸಿಬಂದಿಗಳ ಸಂಬಳ, ಇತರ ಚಟುವಟಿಕೆಗಳಿಗಾಗಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ತಗಲುತ್ತದೆ. ಇದನ್ನು ನಿಭಾಯಿಸಲು ದಾನಿಗಳ ಮೊರೆ ಹೊಗಬೇಕಾಗುತ್ತದೆ.
Related Articles
Advertisement
ಎಂಆರ್‌ಪಿಎಲ್‌ನಿಂದ ಸ್ವಂತ ಕಟ್ಟಡದ ಭರವಸೆಪ್ರಜ್ಞಾ ಸ್ವಾಧಾರ ಗೃಹ ಹಲವಾರು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದು, ಇದಕ್ಕೆ ಸ್ವಂತ ಕಟ್ಟಡದ ಆವಶ್ಯಕತೆ ಬಗ್ಗೆ ಹಲವಾರು ಬಾರಿ ಸರಕಾರದ ಗಮನಕ್ಕೆ ತಂದಿದ್ದರು. ಸುಮಾರು ವರ್ಷಗಳಿಂದ ವಿವಿಧ ಇಲಾಖೆಗಳಿದ ಅಲೆದಾಡಿದ ಬಳಿಕ ಮುಡಿಪುವಿನಲ್ಲಿ ಜಾಗ ಮಂಜೂರಾಗಿದ್ದು, ಆ ಬಳಿಕ ಎಂಆರ್‌ಪಿಎಲ್ ತನ್ನ ಸಿಎಸ್‌ಆರ್ ನಿಧಿಯಿಂದ ಕಟ್ಟಡ ನಿರ್ಮಾಣ ಮಾಡುವ ಭರವಸೆ ನೀಡಿದೆ. ಕೇಂದ್ರ ನಿರ್ವಹಣೆಗೆ ಹರಸಾಹಸ
ಒಂದೂವರೆ ವರ್ಷಗಳಿಂದ ಸ್ವಾಧಾರ ಕೇಂದ್ರಕ್ಕೆ ಅನುದಾನ ಬಿಡುಗಡೆಯಾಗಿಲ್ಲ. ಸಿಬಂದಿ ಖರ್ಚು, ಬಾಡಿಗೆ ಸೇರಿದಂತೆ ಇತರ ಖರ್ಚು ನಿರ್ವಹಣೆ ಕಷ್ಟವಾಗುತ್ತಿದೆ. ಸದ್ಯ ನನ್ನ ಪಿಂಚಣಿ ಹಣ, ದಾನಿಗಳ ನೆರವು ನಿರ್ವಹಣೆಗೆ ಹೋಗುತ್ತಿದೆ. ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
- ಹಿಲ್ಡಾ ರಾಯಪ್ಪನ್,ಮುಖ್ಯಸ್ಥೆ, ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ – ಪ್ರಜ್ಞಾ ಶೆಟ್ಟಿ