Advertisement

ವಸ್ತು ವಿಜ್ಞಾನ, ಜೈವಿಕ ಭೌತಶಾಸ್ತ್ರ ಸಂಶೋಧನೆಗಳು ಅಗತ್ಯ

10:19 AM Jan 24, 2018 | Team Udayavani |

ಮಂಗಳಗಂಗೋತ್ರಿ: ವಸ್ತು ವಿಜ್ಞಾನ, ಜೈವಿಕ ಭೌತಶಾಸ್ತ್ರದಲ್ಲಿ ವಿಪುಲ ಅವಕಾಶಗಳಿದ್ದು, ಸುಧಾರಣೆಗಳು ನಡೆಯುತ್ತಿವೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆಗಳು ನಡೆದರೆ ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಬಹುದು ಎಂದು ಆಸ್ಟ್ರೇಲಿಯಾ ಕ್ಯಾನಿಬೇರಾದ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ| ಚೆನ್ನುಪತಿ ಜಗದೀಶ್‌ ಅಭಿಪ್ರಾಯಪಟ್ಟರು.

Advertisement

ಮಂಗಳೂರು ವಿಶ್ವವಿದ್ಯಾನಿಲಯ ಇದರ ಭೌತಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ವಸ್ತು ವಿಜ್ಞಾನ ಮತ್ತು ಜೈವಿಕ ಭೌತಶಾಸ್ತ್ರ ದ ಇತ್ತೀಚಿನ ಬೆಳವಣಿಗೆಗಳು (ಆರ್‌ಎಎಂಎಸ್‌ಬಿ) ಎಂಬ ವಿಷಯದ ಬಗ್ಗೆ ಮಂಗಳಗಂಗೋತ್ರಿಯ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಆಡಿಟೋರಿಯಂನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಅಂತಾರಾಷ್ಟ್ರೀಯ ಕಾರ್ಯಾಗಾರಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಯಾವುದೇ ಕ್ಷೇತ್ರ ಬೆಳವಣಿಗೆ ಯಾಗಬೇಕಾದರೆ ಆ ಕ್ಷೇತ್ರದಲ್ಲಿ ಸಂಶೋಧನೆಗಳು ಅಗತ್ಯ. ನಮ್ಮ ನಿತ್ಯ ಜೀವನದಲ್ಲಿ ಬಳಸುವ ವಸ್ತುಗಳಿಗೆ ಸಂಬಂಧಿಸಿದಂತೆ ಈ ಸಂಶೋಧನೆಗಳು ಸಹಕಾರಿಯಾಗಲಿದ್ದು, ಕಾರ್ಯಾಗಾರಗಳಿಂದ ಉತ್ತಮ ಮಹಿತಿ ಪಡೆಯಬಹುದು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿ.ವಿ.ಯ ಉಪ ಕುಲಪತಿ ಪ್ರೊ| ಕೆ. ಭೈರಪ್ಪ ವಹಿಸಿದ್ದರು. ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಸಚಿವ ಪ್ರೊ| ಬಿ.ಎಸ್‌. ನಾಗೇಂದ್ರ ಪ್ರಕಾಶ್‌ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರೊ| ಯೆರೊಲ್‌ ನಾರಾಯಣ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಶೋಧನ ವಿದ್ಯಾರ್ಥಿನಿ ಪಾರ್ವತಿ ವೇಣು ನಿರೂಪಿಸಿದರು. ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ| ರವಿಚಂದ್ರ ಆಚಾರ್ಯ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next