ನ್ಯೂಯಾರ್ಕ್: ಯುಎಸ್ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿ ಕ್ರೊವೇಶಿಯಾದ ಮೇಟ್ ಪಾವಿಕ್-ಬ್ರಝಿಲ್‌ನ ಬ್ರುನೊ ಸೊರೆಸ್ ಜೋಡಿಯ ಪಾಲಾಗಿದೆ. ಫೈನಲ್‌ನಲ್ಲಿ ಇವರು ವೆಸ್ಲಿ ಕೂಲೋಫ್ (ನೆದರ್ಲೆಂಡ್ಸ್)-ನಿಕೋಲ ಮೆಕ್‌ಟಿಕ್ (ಕ್ರೊವೇಶಿಯಾ) ಜೋಡಿ ವಿರುದ್ಧ 7-5, 6-3 ಅಂತರದ ಜಯ ಸಾಧಿಸಿದರು. ಇದು ಪಾವಿಕ್-ಸೊರೆಸ್ ಜತೆಗೂಡಿ ಆಡಿದ ಮೊದಲ ಗ್ರ್ಯಾನ್‌ಸ್ಲಾಮ್ ಫೈನಲ್ ಆಗಿದೆ. ಇವರಲ್ಲಿ ಪಾವಿಕ್ 2018ರಲ್ಲಿ ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಪ್ರಶಸ್ತಿ ಜಯಿಸಿದ್ದರು. ಅಂದು ಆಸ್ಟ್ರಿಯಾದ ಒಲಿವರ್ ಮರಾಕ್ ಇವರ ಜೋಡಿಯಾಗಿದ್ದರು.
ಸೊರೆಸ್‌ಗೆ ಇದು 2ನೇ ಯುಎಸ್ ಓಪನ್ ಡಬಲ್ಸ್ ಪ್ರಶಸ್ತಿ. 2016ರಲ್ಲಿ ಅವರು ಜಾಮಿ ಮರ್ರೆ ಜತೆಗೂಡಿ ಇಲ್ಲಿ ಚಾಂಪಿಯನ್ ಆಗಿದ್ದರು. ಅದೇ ವರ್ಷ ಈ ಜೋಡಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನೂ ಜಯಿಸಿತ್ತು.