Advertisement

40 ವರ್ಷಗಳಿಂದ ಮ್ಯಾಚಿಂಗ್‌ ಡ್ರೆಸ್‌ : ಆಲಪ್ಪುಳದ ಮಿತ್ರದ್ವಯರ ದಾಖಲೆ

03:48 AM Jul 10, 2021 | Team Udayavani |

ಆಲಪ್ಪುಳ: “ಅತ್ಯುತ್ತಮ ಮಿತ್ರರು’ ಎನ್ನುವುದಕ್ಕೆ ಇತಿಹಾಸ ಕಾಲದಲ್ಲಿ ಮತ್ತು ಆಧುನಿಕ ಕಾಲದಲ್ಲಿ ಹಲವು ಉದಾಹರಣೆಗಳನ್ನು ನೀಡಬಹುದು. ಈಗಂತೂ ಮಿತ್ರತ್ವ ಎನ್ನುವುದು ಅನುಕೂಲಕ್ಕೆ ತಕ್ಕಂತೆ ಎಂಬ ಭಾವನೆ ಮೂಡಿರುವ ನಡುವೆ ಕೇರಳದ ಆಲಪ್ಪುಳ ಜಿಲ್ಲೆಯ ಕಾಯಂಕುಳಂನ ಇಬ್ಬರು ಟೈಲರ್‌ಗಳು 25 ವರ್ಷಗಳಿಂದ ಸ್ನೇಹಿತ ರಾಗಿಯೇ ಉಳಿದಿದ್ದಾರೆ.

Advertisement

ಕೇವಲ ಅಷ್ಟೇ ಆಗಿದ್ದರೆ ಸುದ್ದಿಯಾಗುತ್ತಿ ರಲಿಲ್ಲ. ಗಾಢ ಸ್ನೇಹತ್ವವನ್ನು ಪ್ರಕಟಿಸುವುದಕ್ಕೋಸ್ಕರ ಪ್ರತೀ ದಿನವೂ ಇಬ್ಬರೂ ಒಂದೇ ರೀತಿಯ ಪ್ಯಾಂಟ್‌ -ಶರ್ಟ್‌ ಧರಿಸುತ್ತಾರೆ.

ಅವರ ಹೆಸರೇ ರವೀಂದ್ರನ್‌ ಪಿಳ್ಳೆ ಮತ್ತು ಉದಯ ಕುಮಾರ್‌. ಉದಯ ಕುಮಾರ್‌ಗೆ ಅವರ ಅಣ್ಣ ತಿಲಕನ್‌ ಶಾಲೆಯಲ್ಲಿ ಸಹಪಾಠಿಯಾಗಿದ್ದ ರವೀಂದ್ರನ್‌ ಪಿಳ್ಳೆ ಅವರನ್ನು ಪರಿಚಯಿಸಿದ್ದರು. 1982ರಲ್ಲಿ ಇಬ್ಬರ ನಡುವೆ ಪರಿಚಯವಾದ ಬಳಿಕ ಒಂದೇ ಸ್ಥಳದಲ್ಲಿ ತಮ್ಮ ಬಟ್ಟೆ ಹೊಲಿಯುವ ಅಂಗಡಿ ಸ್ಥಾಪಿಸಿದರು ಮತ್ತು ಮಿತ್ರತ್ವ ಗಾಢವಾಗಿ ಕಾಪಿಡುವ ಉದ್ದೇಶದಿಂದ ಪ್ರತೀ ದಿನವೂ ಇಬ್ಬರೂ ಒಂದೇ ಬಣ್ಣದ ಶರ್ಟ್‌- ಪ್ಯಾಂಟ್‌ ಧರಿಸಲು ಶುರು ಮಾಡಿದರು.

ಮ್ಯಾಚಿಂಗ್‌: ಮೂವತ್ತೂಂಬತ್ತು ವರ್ಷಗಳಿಂದ ಇಬ್ಬರೂ ಹಾಕುವ ಶರ್ಟ್‌, ಪ್ಯಾಂಟ್‌ ಒಂದೇ ಬಣ್ಣದ್ದು, ಒಂದೇ ಮೂಲ ವಸ್ತು ವನ್ನು ಹೊಂದಿರುತ್ತದೆ. ಇಬ್ಬರೂ ತಮ್ಮ ಮಿತ್ರತ್ವವನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಸ್ನೇಹಿತರ ತಮ್ಮ ಅಂಗಡಿಗೆ “ಪಿ.ಕೆ.ಟೈಲರ್ಸ್‌’ ಎಂಬ ಹೆಸರನ್ನೂ ಇರಿಸಿದ್ದಾರೆ. ಅವರಿಬ್ಬರ ಬಗ್ಗೆ ಜನರಿಂದ ಕೇಳಿ ತಿಳಿದಿದ್ದ ಕೇರಳದ ಜನಪ್ರಿಯ ವ್ಯಂಗ್ಯಚಿತ್ರ ಕಾರರಾಗಿದ್ದ ದಿ|ಪಿ.ಕೆ.ಮಂತ್ರಿ ಅವರು ಜೋಡಿ ಕಾರ್ಟೂನ್ ರಚಿಸಿದ್ದರು. “ಮನೋರಾಜ್ಯಂ’ ಎಂಬ ನಿಯತ ಕಾಲಿಕದಲ್ಲಿ ಅವರಿಬ್ಬರ ಜೋಡಿಯ ಕಾರ್ಟೂನ್ ಪ್ರಕಟವಾಗಿ ಮೆಚ್ಚುಗೆ ಗಳಿಸಿತ್ತು. ಪಿ ಎಂದರೆ ಪಚ್ಚು ಮತ್ತು ಕೋವಳಂ. ಇದು ಅವರಿಬ್ಬರ ಊರಿನ ಹೆಸರುಗಳು. ಆರಂಭದಲ್ಲಿ 1 ಕಿಮೀ ದೂರದಲ್ಲಿ ವಾಸಿಸುತ್ತಿದ್ದ ಇಬ್ಬರೂ ಕಾಯಂಕುಳಂನಲ್ಲಿ ಹತ್ತಿರ ಹತ್ತಿರವೇ ವಾಸಿಸುತ್ತಿದ್ದಾರೆ. ಹಬ್ಬಗಳ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರೂ ಮ್ಯಾಚಿಂಗ್‌ ಬಟ್ಟೆಯನ್ನೇ ಧರಿಸುತ್ತಾರಂತೆ.

Advertisement

Udayavani is now on Telegram. Click here to join our channel and stay updated with the latest news.

Next