Advertisement
ಏಕೆಂದರೆ, ಸುಪ್ರೀಂಕೋರ್ಟ್ ನಿರ್ದೇಶನದಂತೆ ಇವಿಎಂ-ವಿವಿಪ್ಯಾಟ್ ಮತಗಳನ್ನು ತಾಳೆ ಮಾಡಬೇಕಾಗಿದ್ದು, ಇದಕ್ಕಾಗಿ ಸಾಕಷ್ಟು ಸಮಯ ಹಿಡಿಯಲಿದೆ. ಅದಕ್ಕಾಗಿ ಎಲ್ಲ 28 ಲೋಕಸಭಾ ಕ್ಷೇತ್ರಗಳ ಸ್ಪಷ್ಟ ಚಿತ್ರಣ ಹೊರಬೀಳಲು ಸಂಜೆ ಆಗಬಹುದು. ಪ್ರತಿ ವಿಧನಸಭಾ ಕ್ಷೇತ್ರದ 5 ಮತಗಟ್ಟೆಗಳ ವಿವಿಪ್ಯಾಟ್ ಚೀಟಿಗಳನ್ನು ಎಣಿಕೆ ಮಾಡಬೇಕು. ಒಂದು ವಿವಿಪ್ಯಾಟ್‌ನ ಚೀಟಿ ಎಣಿಕೆ ಪೂರ್ಣಗೊಳಿಸಲು ಕನಿಷ್ಠ 45 ನಿಮಿಷ ಬೇಕು. ಅದರಂತೆ ಎಲ್ಲ 5 ವಿವಿಪ್ಯಾಟ್‌ಗಳ ಚೀಟಿಗಳ ಎಣಿಕೆಗೆ ಕನಿಷ್ಠ 3ರಿಂದ 4 ತಾಸು ಬೇಕು. ಇದು ಅಂತಿಮ ಫಲಿತಾಂಶ ವಿಳಂಬವಾಗಲು ಪ್ರಮುಖ ಕಾರಣ.
Related Articles
Advertisement
1,120 ಮತಗಟ್ಟೆಗಳಲ್ಲಿ “ಮತ ತಾಳೆ’: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 224 ವಿಧಾನಸಭಾ ಕ್ಷೇತ್ರಗಳಿದ್ದು, ಲೋಕಸಭಾ ಚುನಾವಣೆಯಲ್ಲಿ 58,186 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಈಗ ಸುಪ್ರೀಂ ಆದೇಶದಂತೆ ಪ್ರತಿ ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಗಳಲ್ಲಿ ಅಲ್ಲಿನ ಇವಿಎಂನಲ್ಲಿ ಬಿದ್ದ ಮತಗಳನ್ನು ವಿವಿಪ್ಯಾಟ್‌ನಲ್ಲಿನ ಮುದ್ರಿತ ಚೀಟಿಗಳೊಂದಿಗೆ ತಾಳೆ ಮಾಡಬೇಕು. ಅದರಂತೆ 224 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5 ರಂತೆ 28 ಲೋಕಸಭಾ ಕ್ಷೇತ್ರಗಳಲ್ಲಿ ತಲಾ 40ರಂತೆ ಒಟ್ಟು 1,120 ಮತಗಟ್ಟೆಗಳಲ್ಲಿ ಇವಿಎಂ-ವಿವಿಪ್ಯಾಟ್ ಮತಗಳ ತಾಳೆ ಮಾಡಬೇಕಾಗಿದೆ. ಇದಕ್ಕಾಗಿ ಚುನಾವಣಾ ಆಯೋಗಕ್ಕೆ ಹೆಚ್ಚುವರಿ 5 ಸಾವಿರ ಸಿಬ್ಬಂದಿ ಹಾಗೂ 3 ತಾಸು ಹೆಚ್ಚುವರಿ ಸಮಯ ಬೇಕಾಗುತ್ತದೆ.
ಸುಪ್ರೀಂಕೋರ್ಟ್ ಆದೇಶದಂತೆ ಪ್ರತಿ ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಗಳಲ್ಲಿ ವಿವಿಪ್ಯಾಟ್ ಮುದ್ರಿತ ಚೀಟಿಗಳನ್ನು ಎಣಿಕೆ ಮಾಡಿ ಇವಿಎಂ ಮತಗಳ ಜತೆ ತಾಳೆ ಹಾಕಬೇಕಾಗಿದೆ. ಇದಕ್ಕಾಗಿ ಸಾಕಷ್ಟು ಸಮಯ ಹಿಡಿಯಲಿದೆ. ಒಂದು ವಿವಿಪ್ಯಾಟ್‌ನ ಚೀಟಿಗಳ ಎಣಿಕೆಗೆ ಕನಿಷ್ಠ 45 ನಿಮಿಷ ಬೇಕು. ಹೀಗಾಗಿ, ಈ ಬಾರಿ ಒಟ್ಟಾರೆ ಅಂತಿಮ ಫಲಿತಾಂಶ ಹೊರಬರಲು ರಾತ್ರಿ 8 ಗಂಟೆ ಆಗಬಹುದು.-ಸಂಜೀವ್ ಕುಮಾರ್, ರಾಜ್ಯ ಮುಖ್ಯ ಚುನಾವಣಾಧಿಕಾರಿ. * ರಫೀಕ್ ಅಹ್ಮದ್