Advertisement

ಗೆಜ್ಜೆ  ಮಾತಾಡುತಾವ !

03:45 AM Feb 10, 2017 | |

ಗೆಜ್ಜೆ ಅಂದರೆ ಅವಳು, ಗೆಜ್ಜೆಯನ್ನು ಮಾತನಾಡಿಸುವ ನೆವದಲ್ಲಿ ಅವಳ ಕುಶಲ ವಿಚಾರಿಸುತ್ತಾನೆ ಹುಡುಗ. ಅವಳ ದನಿ ಕೆಲವೊಮ್ಮೆ ಅವನಿಗೆ ಗೆಜ್ಜೆಯಂತೆ ಕೇಳಿಸೋದಿದೆ. ನಗುವಂತೂ ಥೇಟ್‌ ಗೆಜ್ಜೆಯ ಝಲ್‌ ಝಲ್‌ ನಾದವೇ.

Advertisement

ಬಹಳ ಹಿಂದಿನಿಂದಲೇ ಗೆಜ್ಜೆಗೊಂದು ರೊಮ್ಯಾಂಟಿಕ್‌ ಕಲ್ಪನೆ ಇದೆ. ಗೆಜ್ಜೆ ಅಂದರೆ ಸಾಕು, ಮನಃಪಟಲದಲ್ಲಿ ಗೆಜ್ಜೆ ತೊಟ್ಟ ಲಂಗದಾವಣಿಯ ಹಳ್ಳಿ ಹುಡುಗಿ ಇಣುಕುತ್ತಾಳೆ. ಮಾಡರ್ನ್ ಹುಡುಗಿಯರು ಗೆಜ್ಜೆ ಹಾಕ್ಕೊಳ್ಳೋದೆ ಇಲ್ಲಲ್ಲಾ? ಅಂತ ಗೊಣಗೋ ಹಾಗಿಲ್ಲ. ಈ ಜನರೇಶನ್‌ ಹೆಣ್ಮಕ್ಕಳು ಕಾಲಿಗೆ ಗೆಜ್ಜೆ ತೊಡುತ್ತಾರೋ ಇಲ್ಲವೋ ಬೇರೆ ಮಾತು, ಆದರೆ ಗೆಜ್ಜೆ ಪ್ರೀತಿ ಹೆಣ್ಮನಸ್ಸಿಂದ ದೂರ ಸರಿದಿಲ್ಲ ಅನ್ನೋದು ಇತ್ತೀಚೆಗೆ ಸ್ಪಷ್ಟವಾಗ್ತಿದೆ. ಈ ಕಾಲದ ಹುಡುಗೀರು ಹಳತರಲ್ಲೇನೋ ಹೊಸತು ಹುಡುಕುವ ಜಾಯಮಾನದವರು. ಹಳೆಯ ಗೆಜ್ಜೆಯನ್ನು ಹಳಬರ ಹಾಗೆ ಕಾಲಿಗೆ ಕಟ್ಟಿಕೊಂಡು ಓಡಾಡುವುದರಲ್ಲಿ ಅವರಿಗೆ ಅಂಥ ಖುಷಿ ಏನಾಗಲ್ಲ , ಹಾಗಂತ ಗೆಜ್ಜೆಯ ಕಿಣಿಕಿಣಿ ನಾದದಿಂದ ಹಿಂದೋಡಲು ಮನಸ್ಸು ಕೇಳಲ್ಲ. ಅದಕ್ಕೆ ಗೆಜ್ಜೆಯಲ್ಲಿ ಹೊಸ ಹೊಸ ಸ್ಟೈಲ್‌ಗ‌ಳ ಬಗ್ಗೆ ಅವರು ಯೋಚಿಸ್ತಾರೆ. ಇಂಥ ಕ್ರಿಯೇಟಿವ್‌ ಥಿಂಕಿಂಗ್‌ನಲ್ಲಿ ಹೊಳೆದದ್ದೇ, ಗೆಜ್ಜೆಯ ಮೂಗುತಿ, ಗೆಜ್ಜೆಯ ಯಿಯರ್‌ ರಿಂಗ್‌, ಗೆಜ್ಜೆಯ ಬಳೆ, ಗೆಜ್ಜೆಯ ಸರ… ಹೀಗೆ.

ಇಂಥ ಸೊಗಸುಗಾರ್ತಿ ಪುಟ್ಟಮ್ಮಂದಿರಿಗೆ ಇದ್ದದ್ದನ್ನು ಇದ್ದ ಹಾಗೆ ಒಪ್ಪಿಕೊಳ್ಳೋದು ಕಷ್ಟ. ಎಲ್ಲವನ್ನೂ ತಮ್ಮ ಮೂಗಿನ ನೇರಕ್ಕೇ ನೋಡೋ ಸ್ವಭಾವ. ಇದಕ್ಕೊಂದು ಕ್ರಿಯೇಟಿವ್‌ ಛಾಯೆಯೂ ಇರೋ ಕಾರಣ ಗೆಜ್ಜೆಯ ವೈವಿಧ್ಯಮಯ ರೂಪಗಳ ಆವಿಷ್ಕಾರವಾಗಿದೆ.

ಮೊನ್ನೆ ಮೊನ್ನೆ ಉಡುಪಿಯಲ್ಲಿ ಕಾಲೇಜ್‌ ಹುಡುಗಿಯೊಬ್ಬಳು ತನ್ನ ವಿಭಿನ್ನ ಡ್ರೆಸಿಂಗ್‌ ಸ್ಟೈಲ್‌ನಿಂದಲೇ ಇತರರ ಗಮನ ಸೆಳೆಯುತ್ತಿದ್ದಳು. ಅವಳ ಉಡುಗೆಯಲ್ಲೆಲ್ಲ ದೇಸೀತನ ಎದ್ದು ಕಾಣುತ್ತಿತ್ತು. ಬೆಳ್ಳನೆಯ ಮಂಜಿನಂತಹ ಟಾಪು, ಅದಕ್ಕೊಂದು ದೊಗಲೆ ಪ್ಯಾಂಟ್‌, ಗಾಳಿಗೆ ಮನಸೋ ಇಚ್ಛೆ ಹಾರಾಡ್ತಿದ್ದ ಕೂದಲು, ಇದೆಲ್ಲಕ್ಕಿಂತ ಗಮನಸೆಳೆದದ್ದು ಸಂಸ್ಕೃತದ ಶಬ್ದವಿದ್ದ ಬೆಳ್ಳಿಯ ಬ್ಯಾಡ್ಜ್ , ಅದರ ತುದಿಯಲ್ಲೆರಡು ಗೆಜ್ಜೆ , ಹೌದೋ ಅಲ್ಲವೋ ಎಂಬ ಹಾಗೆ ಶಬ್ದ ಮಾಡುತ್ತಿದ್ದವು. ಆಕೆಯ ಕಾಲಿನ ಕಡೆ ನೋಡಿದರೆ ಅವು ಗೆಜ್ಜೆಗಳಿಲ್ಲದೆ ಬೋಳಾಗಿದ್ದವು.

“ನತ್ತು’ ಸಾಂಪ್ರದಾಯಿಕವಾಗಿಯೂ ಚೆಂದ, ಮಾಡರ್ನ್ ಡಿಸೈನ್‌ ಇದ್ರೂ ಅಂದ, ನತ್ತಿನಲ್ಲಿ ಅವಳಿಗಷ್ಟೇ ಕೇಳುವಂತೆ ಗೆಜ್ಜೆ ಇದ್ರೆ ಕ್ಯೂಟ್‌ನೆಸ್‌ ಇನ್ನೂ ಒಂಚೂರು ಹೆಚ್ಚಾಗುತ್ತದೆ. ಇಲ್ಲೊಬ್ಬ ಹೆಣ್ಮಗಳು ಸಂಪಿಗೆ ನಾಸಿಕಕ್ಕೆ ಮೂಗುಬೊಟ್ಟು ಸಿಕ್ಕಿಸಿಕೊಂಡು ಅದಕ್ಕೆರಡು ಗೆಜ್ಜೆಗಳ ಕಿಂಕಿಣಿಯನ್ನೂ ಸೇರಿಸಿದ್ದಾಳೆ.

Advertisement

ಕಿವಿಯೋಲೆಗಳಲ್ಲಿ ಗೆಜ್ಜೆ ಬರೋದು ಅಪರೂಪ ಏನಲ್ಲ, ಸಿಲ್ವರ್‌ ಯಿಯರ್‌ರಿಂಗ್‌ ತಗೊಂಡರೆ ಅದರಲ್ಲಿ ತರಹೇವಾರಿ ವಿನ್ಯಾಸದ ಗೆಜ್ಜೆಗಳಿರುತ್ತವೆ. ಆದರೆ ಕಿವಿಯ ಮೇಲೆ ಯಿಯರ್‌ಕಪ್‌ನಲ್ಲಿ ಈಕೆ ಗೆಜ್ಜೆ ತೊಟ್ಟಿದ್ದಾಳೆ. ಇವು ಕಾಲ್ಗೆಜ್ಜೆಗಳಂತೆ ಘಲ್‌ಘಲ್‌ ಅನ್ನಲಾರವು. ಆದರೆ ಪಕ್ಕದಲ್ಲೇ ಇರೋ ಕಿವಿಗೆ ಅವು ಒಂದಕ್ಕೊಂದು ತಾಗಿದಾಗ ಹೊಮ್ಮುವ ನಾದದ ಅನುಭೂತಿಯಾಗಬಹುದು.

ಇದಲ್ಲದೇ ಕೈಬೆರಳಿಗೆ ಉಂಗುರದ ಜೊತೆಗೆ ಗೆಜ್ಜೆ ಪೋಣಿಸಿದ್ದರೆ ಅದೊಂಥರ ಚೆಂದ. ಬ್ರೇಸ್‌ಲೈಟ್‌ಗಳಲ್ಲೂ ಗೆಜ್ಜೆಗಳನ್ನು ಜೋಡಿಸಬಹುದು. ಬ್ರೇಸ್‌ಲೈಟ್‌ಗಳಲ್ಲಿ ಹಳೆಯ ಐದುಪೈಸೆ ನಾಣ್ಣ ಬಳಸಿ ಮಾಡಿದ, ಅಲ್ಲಲ್ಲಿ ಗೆಜ್ಜೆ ಕಟ್ಟಿದ ವಿನ್ಯಾಸಕ್ಕೆ ಎಲ್ಲಿಲ್ಲದ ಜನಪ್ರಿಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next