Advertisement

ನಾಡಿನೆಲ್ಲೆಡೆ ಏಕಕಾಲದಲ್ಲಿ ಅನುರಣಿಸಿತು ಕನ್ನಡದ ನಾದ

08:08 PM Oct 28, 2021 | Team Udayavani |

ಕುಂದಾಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2021ನೇ ಸಾಲಿನ ಕರ್ನಾಟಕ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸುವ ಸಲುವಾಗಿ  “ಮಾತಾಡ್‌ ಮಾತಾಡ್‌ ಕನ್ನಡ’ ಅಭಿಯಾನದಡಿ ರಾಜ್ಯಾದ್ಯಂತ ನಡೆದ ಲಕ್ಷ ಕಂಠ ಗಾಯನ “ಕನ್ನಡಕ್ಕಾಗಿ ನಾವು’ ಎಂಬ ಶೀರ್ಷಿಕೆಯಡಿ ಗೀತ ಗಾಯನ ಕಾರ್ಯಕ್ರಮ ಗುರುವಾರ ಕುಂದಾಪುರ ಪುರಸಭೆ ವ್ಯಾಪ್ತಿಯ ವಿವಿಧೆಡೆ ನಡೆಯಿತು.

Advertisement

ಸಹಾಯಕ ಕಮಿಷನರ್‌ ಕೆ. ರಾಜು ಮಾತನಾಡಿ, ಕನ್ನಡ ಎಂದರೆ ಭಾಷೆ ಮಾತ್ರ ಅಲ್ಲ. ಬದುಕು, ಅನ್ನ, ಅಮ್ಮ. ಕನ್ನಡಕ್ಕಾಗಿ ನಮ್ಮ ಮನಸ್ಸು ಸದಾ ತುಡಿಯುತ್ತಿರಬೇಕು ಎಂದರು.

ಕನ್ನಡದ ಶ್ರೇಷ್ಠತೆಯನ್ನು ಸಾರುವ  “ಬಾರಿಸು ಕನ್ನಡ ಡಿಂಡಿಮವ’, “ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ  “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’  ಹಾಡುಗಳನ್ನು ಏಕಕಾಲದಲ್ಲಿ ಹಾಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೂಚಿಸಿತ್ತು.

ಅದರಂತೆ ಕುಂದಾಪುರ ತಾಲೂಕಿನಾದ್ಯಂತ ಈ ಕಾರ್ಯಕ್ರಮ ನಡೆಯಿತು.

ಮಿನಿ ವಿಧಾನಸೌಧ:

Advertisement

ಮಿನಿ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತ ಕೆ. ರಾಜು, ಕನ್ನಡದ ಅಸ್ಮಿತೆ ಕಾಪಾಡುವ ಸಂಕಲ್ಪ ಬೋಧಿಸಿದರು. ತಹಶೀಲ್ದಾರ್‌ ಕಿರಣ್‌ ಗೌರಯ್ಯ, ಉಪತಹಶೀಲ್ದಾರ್‌ ವಿನಯ್‌, ಕಂದಾಯ ನಿರೀಕ್ಷಕ ದಿನೇಶ್‌, ಗ್ರಾಮ ಕಾರಣಿಕ ಆನಂದ ಕುಮಾರ್‌ ಹಾಗೂ ಸಿಬಂದಿ ಉಪಸ್ಥಿತದ್ದರು. ಜನಪದ ಗಾಯಕ ಗಣೇಶ್‌ ಗಂಗೊಳ್ಳಿ ಅವರ ನೇತೃತ್ವದಲ್ಲಿ ಗೀತ ಗಾಯನ ನಡೆಯಿತು.

ಫೆರಿ ರೋಡ್‌ ಉದ್ಯಾನವನ

ಫೆರಿ ರೋಡ್‌ ಉದ್ಯಾನವನದ ಕಾರ್ಯಕ್ರಮದಲ್ಲಿ  ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್‌,  ಪುರಸಭೆ ಸಿಬಂದಿ, ಪೌರಕಾರ್ಮಿಕರು ಉಪಸ್ಥಿತರಿದ್ದರು.

ಬೈಂದೂರು ತಾಲೂಕು:

ಬೈಂದೂರು: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾಡಳಿತ ಮಾರ್ಗದರ್ಶನದಲ್ಲಿ ಬೈಂದೂರು ತಹಶೀಲ್ದಾರರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ,  ಪ.ಪಂ. ಬೈಂದೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ  ಕನ್ನಡ ಗೀತ ಗಾಯನ ಕಾರ್ಯಕ್ರಮ ಬೈಂದೂರು ಗಾಂಧಿ ಮೈದಾನದಲ್ಲಿ ನಡೆಯಿತು.

ಶಾಸಕ ಬಿ.ಎಂ. ಸುಕುಮಾರ್‌ಶೆಟ್ಟಿ  ಕಾರ್ಯಕ್ರಮ ಉದ್ಘಾಟಿಸಿ, ಕನ್ನಡ ನಾಡು ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ಪರಂಪರೆ, ಸಂಸ್ಕೃತಿಯ ಹಿರಿಮೆ ಹೊಂದಿದೆ. ಈ ನಾಡಿನ ಏಳಿಗೆಗೆ ಪರಿಶ್ರಮ ಪಟ್ಟವರ ತ್ಯಾಗ ಕೊಡುಗೆ ಸದಾ ನೆನಪಿಸಬೇಕಿದೆ. ಕನ್ನಡ ನಾಡು ನುಡಿಯ ಚಿಂತನೆ, ಭಾಷೆಯ ಅಭಿಮಾನ ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ತಾ.ಪಂ. ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಭಾರತಿ, ಉಪ ತಹಶೀಲ್ದಾರ್‌ ಭೀಮಪ್ಪ, ಠಾಣಾಧಿಕಾರಿ ಅನಿಲ್‌, ಕ್ಷೇತ್ರ ಶಿಕ್ಷಣಾಧಿಕಾರಿ ಮುಂದಿನಮನಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು. ಬೈಂದೂರು ತಾಲೂಕು ದಂಡಾಧಿಕಾರಿ ಶೋಭಾಲಕ್ಷ್ಮೀ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಯುವಜನ ಮತ್ತು ಕ್ರೀಡಾ ಇಲಾಖೆಯ ಪ್ರಭಾಕರ ಪ್ರತಿಜ್ಞಾ ವಿಧಿ ಬೋಧಿಸಿದರು.ಶಿಕ್ಷಕ ಸುಧಾಕರ ಪಿ.ಬೈಂದೂರು ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಸಿ.ಎನ್‌. ಬಿಲ್ಲವ ಶಿರೂರು ವಂದಿಸಿದರು.

ಸಮವಸ್ತ್ರ, ನೃತ್ಯ, ಗಾಯನ :

ವಿವಿಧೆಡೆ ನಡೆದ ಕಾರ್ಯಕ್ರಮ ಗೀತ ಗಾಯನಕ್ಕಷ್ಟೇ ಸೀಮಿತವಾಗಲಿಲ್ಲ. ಕನ್ನಡದ ಹುರುಪು ಕಂಡು ಬರುತ್ತಿತ್ತು. ಮಿನಿ ವಿಧಾನಸೌಧದಲ್ಲಿ ಸಹಾಯಕ ಕಮಿಷನರ್‌, ತಹಶೀಲ್ದಾರ್‌, ಉಪ ತಹಶೀಲ್ದಾರ್‌ ಸೇರಿದಂತೆ ಅಷ್ಟೂ ಮಂದಿ ಅಚ್ಚಬಿಳಿ ಬಣ್ಣದ ಲುಂಗಿ ಹಾಗೂ ಅಂಗಿಯ ಸಮವಸ್ತ್ರ ಧರಿಸಿದ್ದರು. ಕೆಂಪು ಹಳದಿಯ ಶಾಲು ಧರಿಸಿ ಕನ್ನಡ ದಿನವನ್ನಾಗಿಸಿದರು. ಫೆರಿ ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್‌, ಪುರಸಭೆ ಸಿಬಂದಿ ಹಳದಿ ಬಣ್ಣದ ಸೀರೆ ಧರಿಸಿ ಸಮವಸ್ತ್ರಧಾರಿಗಳಾಗಿದ್ದರು. ಪೊಲೀಸರು ಹಾಗೂ ಜೂನಿಯರ್‌ ಕಾಲೇಜಿನಲ್ಲಿ ಅವರದ್ದೇ ಸಮವಸ್ತ್ರಗಳಿದ್ದರೆ ಕೋಡಿ ಬ್ಯಾರೀಸ್‌ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೃತ್ಯವೂ ನಡೆಯಿತು. ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರು ವಿದ್ಯಾರ್ಥಿಗಳ ಜತೆಗೆ ಕನ್ನಡದ ಹಾಡಿಗೆ ಹೆಜ್ಜೆ ಹಾಕಿ ಹುರಿದುಂಬಿಸಿದರು.

ಮಹಾತ್ಮಾ ಗಾಂಧಿ ಉದ್ಯಾನವನ :

ಮಹಾತ್ಮಾಗಾಂಧಿ ಉದ್ಯಾನವನದ ಕಾರ್ಯಕ್ರಮದಲ್ಲಿ ಕುಂದಾಪುರ ಪುರಸಭೆ ಸ್ಥಾಯೀ ಸಮಿತಿ ಅಧ್ಯಕ್ಷ ಶೇಖರ್‌ ಪೂಜಾರಿ, ಸದಸ್ಯರಾದ ಪ್ರಭಾಕರ್‌ ವಿ., ಗಿರೀಶ್‌ ಜಿ.ಕೆ., ರೋಹಿಣಿ ಉದಯ ಕುಮಾರ್‌, ಪ್ರಭಾವತಿ ಶೆಟ್ಟಿ, ಸಂತೋಷ್‌ ಕುಮಾರ್‌ ಶೆಟ್ಟಿ, ಪುಷ್ಪಾ ಶೇಟ್‌, ಪುರಸಭೆಯ ಗಣೇಶ್‌ ಜನ್ನಾಡಿ, ವನಿತಾ ಬಿಲ್ಲವ, ಪೌರ ಕಾರ್ಮಿಕರು ಉಪಸ್ಥಿತರಿದ್ದರು.

ಕೋಡಿ ಸೀವಾಕ್‌ :

ಕೋಡಿ ಸೀವಾಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಲಕ್ಷ್ಮೀಬಾಯಿ, ಅಶ್ವಿ‌ನಿ ಪ್ರದೀಪ್‌, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕೋಡಿ ಬ್ಯಾರೀಸ್‌ ಶಾಲೆಯ ಪ್ರದೀಪ್‌ ಮೊದಲಾದವರು ಇದ್ದರು. ಬ್ಯಾರೀಸ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅಶೋಕ್‌ ಸಾರಂಗ ನೇತೃತ್ವದಲ್ಲಿ ಗೀತ ಗಾಯನ ನಡೆಸಿದರು.

ಕೊಡಿ ದೀಪಸ್ತಂಭ :

ಕೊಡಿ ದೀಪಸ್ತಂಭದ ಬುಡದಲ್ಲಿ ನಡೆದ ಗೀತ ಗಾಯನದಲ್ಲಿ ಸಹಾಯಕ ಕಮಿಷನರ್‌ ಕೆ. ರಾಜು, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್‌, ಉಪಾಧ್ಯಕ್ಷ ಸಂದೀಪ್‌ ಖಾರ್ವಿ, ಸದಸ್ಯರಾದ ಲಕ್ಷ್ಮೀಬಾಯಿ, ಅಶ್ವಿ‌ನಿ ಪ್ರದೀಪ್‌, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ದೀಪಸ್ತಂಭ ಮೇಲ್ವಿಚಾರಕ ಅಧಿಕಾರಿ ಸಿ.ಎಂ. ಸಾವಂತ್‌, ಪುರಸಭೆ ಎಂಜಿನಿಯರ್‌ ಸತ್ಯ ಮೊದಲಾದವರು ಇದ್ದರು. ಬ್ಯಾರೀಸ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅಶೋಕ್‌ ಸಾರಂಗ ನೇತೃತ್ವದಲ್ಲಿ ಗೀತ ಗಾಯನ ನಡೆಸಿದರು.

ಬ್ಯಾರೀಸ್‌ ಶಿಕ್ಷಣ ಸಂಸ್ಥೆ ಕೋಡಿ:

ಬ್ಯಾರೀಸ್‌ ಶಿಕ್ಷಣ ಸಂಸ್ಥೆ ಕೋಡಿಯಲ್ಲಿ ಗೀತ ಗಾಯನ ನಡೆಯಿತು. ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್‌, ಉಪಾಧ್ಯಕ್ಷ ಸಂದೀಪ್‌ ಖಾರ್ವಿ, ಸದಸ್ಯೆ ಅಶ್ವಿ‌ನಿ ಪ್ರದೀಪ್‌, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪ್ರಾಂಶುಪಾಲ ಡಾ| ಸಮೀರ್‌ ಮೊದಲಾದವರಿದ್ದರು. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಹೆಜ್ಜೆಹಾಕಿದ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ನನ್ನ ವಿದ್ಯಾರ್ಥಿ ಜೀವನದ ಕ್ಷಣ ಮರಳಿ ಬಂದ ಅನುಭವ ಆಯಿತು. ಸುಮಾರು ನಲವತ್ತೈದು ವರ್ಷಗಳ ಬಳಿಕ ಹೆಜ್ಜೆ ಹಾಕಿರುವುದು ಖುಷಿ ನೀಡಿದೆ. ಪುರಸಭೆಯ ಪ್ರತಿಯೊಂದು ಕಾರ್ಯಕ್ಕೂ ಬ್ಯಾರೀಸ್‌ ಸಮೂಹ ಸಂಸ್ಥೆ ಸಹಕಾರ ನೀಡುತ್ತಾ ಬಂದಿದೆ. ಮುಂದೆಯೂ ನಿಮ್ಮ ಸಹಕಾರ ಹೀಗೆಯೇ ಇರಲಿ ಎಂದರು.

ಕುಂದಾಪುರ ಹೊಸ ಬಸ್‌ನಿಲ್ದಾಣ:

ಕುಂದಾಪುರ  ಡಾ|ರಾಜ್‌ ಕುಮಾರ್‌ ಸಂಘಟನೆಯ ಆಶ್ರಯದಲ್ಲಿ ಹೊಸ ಬಸ್‌ನಿಲ್ದಾಣದಲ್ಲಿ  ನೆರವೇರಿತು. ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಾರ್ಗದರ್ಶನದಲ್ಲಿ  ಸಂಘಟನೆಯ ಅಧ್ಯಕ್ಷ ರತ್ನಾಕರ ಪೂಜಾರಿ ಉಸ್ತುವಾರಿಯಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಯುವ ಗಾಯಕ ಪ್ರತಿಭೆಗಳಾದ ಕೀರ್ತನ್‌ ಖಾರ್ವಿ, ಹರೀಶ್‌ ಖಾರ್ವಿ ಅವರ ಕಂಠಸಿರಿಯಲ್ಲಿ  3 ಗೀತೆಗಳು ಮೊಳಗಿ ಕೇಳುಗರನ್ನು ಮುದಗೊಳಿಸಿದವು. ಹಿರಿಯ ನ್ಯಾಯವಾದಿ ಮುದ್ದಣ ಶೆಟ್ಟಿ, ಉದ್ಯಮಿ ಮಹೇಂದ್ರ ಶೆಟ್ಟಿ ಕೂಡಾಲ್‌, ಯಾಸೀನ್‌ ಹೆಮ್ಮಾಡಿ, ಛಾಯಾಚಿತ್ರಗ್ರಾಹಕ ಸಂತೋಷ್‌ ಕುಂದೇಶ್ವರ್‌, ಮಾಜಿ ಪುರಸಭೆ ಸದಸ್ಯ ಕೇಶವ ಭಟ್‌,  ಕೋಡಿ ಪ್ರಸಾದ್‌ ಗಾಣಿಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next