Advertisement

ಮಾತಾ ಮಾಣಿಕೇಶ್ವರಿ ಅಂತ್ಯಸಂಸ್ಕಾರ ಇಂದು

11:05 PM Mar 08, 2020 | Lakshmi GovindaRaj |

ಸೇಡಂ: ಯಾನಾಗುಂದಿಯ ಮಾಣಿಕ್ಯಗಿರಿ ಬೆಟ್ಟದಲ್ಲಿ ಶನಿವಾರ ಲಿಂಗೈಕ್ಯರಾದ ಮಾತಾ ಮಾಣಿಕೇಶ್ವರಿ ಅಮ್ಮನವರ ಅಂತ್ಯಸಂಸ್ಕಾರ ಸೋಮವಾರ ಮಧ್ಯಾಹ್ನ 3 ಗಂಟೆಗೆ ಜರುಗಲಿದ್ದು, ದರ್ಶನ ಪಡೆಯಲು ದೇಶದ ವಿವಿಧ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ.

Advertisement

ಮಾತಾ ಮಾಣಿಕೇಶ್ವರಿ ಅಮ್ಮನವರು ಲಿಂಗೈಕ್ಯರಾದ ಸುದ್ದಿ ತಿಳಿಯುತ್ತಲೇ ಜಾಗೃತ ಗೊಂಡ ಪೊಲೀಸ್‌ ಇಲಾಖೆ, ಭದ್ರತೆಗೆ ಸುಮಾರು 1,500 ಸಿಬ್ಬಂದಿಯನ್ನು ನೇಮಿಸಿದೆ. ಮಾಣಿಕ್ಯಗಿರಿಯಲ್ಲೀಗ ಶಿವನಾಮ ಸ್ಮರಣೆ, ಜಪ-ತಪ, ಆರಾಧನೆ ನಡೆಯುತ್ತಿದ್ದು, ಅಹಿಂಸೆಯೇ ಪರಮ ಧರ್ಮ ಎಂದು ಸಾರಿ, ಸಾರಿ ಹೇಳಿದ ಮಾತಾ ಮಾಣಿಕೇಶ್ವರಿ ಅಮ್ಮನವರನ್ನು ಕಂಡು ಭಕ್ತರು ದುಃಖತಪ್ತರಾಗಿದ್ದಾರೆ.

ಮಂಗಳವಾರ ನಡೆಸಲು ಉದ್ದೇಶಿಸಲಾಗಿದ್ದ ಅಂತ್ಯಸಂಸ್ಕಾರವನ್ನು ಸೋಮವಾರ ಮಧ್ಯಾಹ್ನ 3 ಗಂಟೆಗೆ ಯಾನಾಗುಂದಿಯ ಅಮ್ಮನವರು ಸೂಚಿತ ಗುಹೆಯ ಹೊರಭಾಗದ ದೇವಾಲಯದಲ್ಲಿ ಅದ್ವೆ„ತ ಸಿದ್ಧಾಂತದಡಿ ಸಕಲ ವಿಧಿವಿಧಾನಗಳ ಮೂಲಕ ಆಶ್ರಮದ 108 ಶಾಖೆಗಳ ಮುಖ್ಯ ಆಚಾರ್ಯರ ನೇತೃತ್ವದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಟ್ರಸ್ಟ್‌ನ ಸಿದ್ರಾಮಪ್ಪ ಸಣ್ಣೂರು ತಿಳಿಸಿದ್ದಾರೆ.

ಉತ್ತರಾಧಿಕಾರಿ ನೇಮಕ ಇಲ್ಲ: ಮೂಲಗಳ ಪ್ರಕಾರ ಅಮ್ಮನವರ ಸಮಾಧಿ ಮಂದಿರವೇ ಭಕ್ತ ಸಮೂಹಕ್ಕೆ ಏಕಮೇವ ದ್ವಿತೀಯ ಎನ್ನಲಾಗಿದೆ. ಶ್ರೀಶೈಲದಲ್ಲಿ ನೆಲೆಸಿರುವ ಮಲ್ಲಿಕಾರ್ಜುನಸ್ವಾಮಿ ಆರಾಧನೆಯಲ್ಲೇ ತಮ್ಮ ಇಡೀ ಜೀವನ ಸವೆಸಿದ ಮಾತಾ ಮಾಣಿಕೇಶ್ವರಿ ನೆಲೆಸಿದ ಕ್ಷೇತ್ರ ಎರಡನೇ ಶ್ರೀಶೈಲವಾಗಲಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಉತ್ತರಾ ಧಿಕಾರಿ ನೇಮಕ ಇಲ್ಲ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಸಂಸದ ಉಮೇಶ ಜಾಧವ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ಮಾತೆಯ ಅಂತಿಮ ದರ್ಶನ ಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next