Advertisement

ಕುಡಿಯುವ ನೀರಿನ ನಿರ್ವಹಣೆಗೆ ವರ್ಷದ ಹಿಂದೆಯೇ ಮಾಸ್ಟರ್‌ ಪ್ಲಾನ್‌

10:11 AM Mar 21, 2020 | mahesh |

ಕಳೆದ ಬೇಸಗೆಯಲ್ಲಿ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ “ಉದಯವಾಣಿ’ಯು ಭೇಟಿ ಕೊಟ್ಟು, “ಜೀವಜಲ’ ಎನ್ನುವ ಸರಣಿಯಡಿ ಸಾಕ್ಷಾತ್‌ ವರದಿಗಳನ್ನು ಪ್ರಕಟಿಸಿತ್ತು. ಈ ಬಾರಿಯ ಬೇಸಗೆಯಲ್ಲಿ ನೀರಿನ ಸಮಸ್ಯೆಯ ನಿವಾರಣೆಗೆ ಸ್ಥಳೀಯ ಪಂಚಾಯತ್‌ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವೆಲ್ಲ ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಮುಂದೆ ಆಗಬೇಕಾದ ಪ್ರಮುಖ ಕ್ರಮಗಳೆಲ್ಲದರ ಕುರಿತಾದ ಸರಣಿ.

Advertisement

ಪಡುಪಣಂಬೂರು ಗ್ರಾ.ಪಂ.ನ ವ್ಯಾಪ್ತಿಯಲ್ಲಿ ವರ್ಷದ ಹಿಂದೆ ಕಾಡಿದ್ದ ನೀರಿನ ಸಮಸ್ಯೆಯನ್ನು ತೀವ್ರ ಮುತುವರ್ಜಿ ವಹಿಸಿ, ನಿರ್ವಹಿಸಿ, ಅದಕ್ಕಾಗಿ ಮಾಸ್ಟರ್‌ ಪ್ಲಾನ್‌ ಮಾಡಿಕೊಂಡಿದ್ದು ಈ ಬೇಸಗೆಯಲ್ಲಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ.

ಪಡುಪಣಂಬೂರು: ಗ್ರಾ.ಪಂ. ವ್ಯಾಪ್ತಿಯ ಬೆಳ್ಳಾಯರು, 10ನೇ ತೋಕೂರು, ಪಡುಪಣಂಬೂರು ಗ್ರಾಮದಲ್ಲಿ 5 ವಾರ್ಡ್‌ಗಳಿವೆ. 6,365 ಜನಸಂಖ್ಯೆಯಿದ್ದು ಗ್ರಾ.ಪಂ.ನಲ್ಲಿ 1,086 ಒಟ್ಟು ನೀರಿನ ಬಳಕೆದಾರರಿದ್ದಾರೆ. ಮೂರೂ ಗ್ರಾಮದಲ್ಲಿ ಒಟ್ಟು ಪ್ರತೀ ವಾರ್ಡ್‌ನಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿಯಿದೆ. 10ನೇ ತೋಕೂರಿನಲ್ಲಿ ಎರಡು ವಿಶ್ವಬ್ಯಾಂಕ್‌ ಯೋಜನೆಯ ಪ್ರತ್ಯೇಕ ಸಮಿತಿಯಿದ್ದು ಎಲ್ಲ ಸಮಿತಿಗಳು ಕಾರ್ಯ ಚಟುವಟಿಕೆಯಲ್ಲಿದ್ದು ಸೂಕ್ತವಾಗಿ ನೀರು ಸರಬರಾಜನ್ನು ನಿರ್ವಹಿಸುತ್ತಿವೆ.

10ನೇ ತೋಕೂರು
10ನೇ ತೋಕೂರಿನಲ್ಲಿ ಕುಡಿಯುವ ನೀರಿನ ನಿರ್ವಹಣೆಯನ್ನು ವಿಶ್ವಬ್ಯಾಂಕ್‌ನ ಸಮಿತಿಗಳು ನಿರ್ವಹಿಸುತ್ತಿದ್ದುರಿಂದ ಗ್ರಾ.ಪಂ.ಗೆ ಹೊರೆಯಾಗಿಲ್ಲ. ಇಲ್ಲಿ ಎರಡೂ ಸಮಿತಿಯಲ್ಲಿ ಒಟ್ಟು 340 ಬಳಕೆದಾ ರರಿದ್ದು, ಸಂಪೂರ್ಣವಾಗಿ ಸಹಕಾರಿ ತತ್ತÌದಲ್ಲಿ ನಿರ್ವಹಿಸು ತ್ತಿರುವುದರಿಂದ ಜತೆಗೆ ಟ್ಯಾಂಕ್‌ಗಾಗಿ ಕೊರೆಯಲ್ಪಟ್ಟಿರುವ ಕೊಳವೆ ಪಂಪ್‌ಗ್ಳ ಅಕ್ಕಪಕ್ಕದಲ್ಲಿ ಕಿಂಡಿ ಅಣೆಕಟ್ಟಿನ ನೀರಿನ ಆಶ್ರಯ ಇರುವುದರಿಂದ ಬೇಸಗೆಯಲ್ಲಿಯೂ ಸಮರ್ಥವಾಗಿ ನೀರಿನ ನಿರ್ವಹಿಸಲಾಗುತ್ತಿದೆ.

ಬೆಳ್ಳಾಯರು ಗ್ರಾಮ
ಬೆಳ್ಳಾಯರಿನಲ್ಲಿ ಹೆಚ್ಚಾಗಿ ಜನವಸತಿ ಪ್ರದೇಶ ಹಾಗೂ ಕೊರಗರ ಕಾಲನಿ ಇದೆ. ಕಾಲನಿಯಲ್ಲಿ ಪ್ರತ್ಯೇಕ ನೀರಿನ ಟ್ಯಾಂಕ್‌ಗಳಿರುವುದರಿಂದ ನೀರಿನ ಕೊರತೆ ಕಂಡು ಬಂದಿಲ್ಲ. ಬೆಳ್ಳಾಯರಿನ ಕೆರೆಕಾಡು ಪ್ರದೇಶ ಹಾಗೂ ಜಾಮಿಯಾ ಮೊಹಲ್ಲಾದಲ್ಲಿ ಕೊಳವೆ ಬಾವಿ,

Advertisement

ಟ್ಯಾಂಕ್‌ಗಳಿದ್ದರೂ ಸಹ ಬಳ್ಕುಂಜೆಯ ಬಹುಗ್ರಾಮ ಯೋಜನೆಯ ಸಂಪರ್ಕದಿಂದ ಸಾಕಷ್ಟು ನೆರವು ಸಿಕ್ಕಿದೆ. ನೀರಿನ ಬಳಕೆಯು ಸಹ ಈ ಭಾಗದಲ್ಲಿ ಹೆಚ್ಚಾಗಿದೆ, ಎರಡೂ ಯೋಜನೆಗಳಿರುವುದರಿಂದ ಒಂದೊಂದು ಯೋಜನೆಗಳು ಪರ್ಯಾಯವಾಗಿ ಕೆಲಸ ಮಾಡುತ್ತದೆ ನೀರಿನ ಸಮಸ್ಯೆಗಳು ಮೇಲ್ನೋಟಕ್ಕೆ ಇಲ್ಲವಾದರೂ ಕೊಳವೆ ಬಾವಿ ಕೆಟ್ಟರೆ, ವಿದ್ಯುತ್‌ ಕೈ ಕೊಟ್ಟರೇ ಬೇಸಗೆ ಕಾಲದಲ್ಲಿ ಒಂದಷ್ಟು ಪರದಾಡುವ ಪರಿಸ್ಥಿತಿ ಇದೆ.

ಪಡುಪಣಂಬೂರು ಗ್ರಾಮ
ಕಳೆದ ಒಂದೂವರೆ ವರ್ಷದಿಂದ ಪಡುಪಣಂಬೂರಿನಲ್ಲಿ ಕುಡಿಯುವ ನೀರಿನ ನಿರ್ವಹಣೆಯು ಪಂಚಾಯತ್‌ಗೆ ಒಂದು ಸವಾಲಾಗಿತ್ತು. 204 ಗ್ರಾಹಕರು ಸಂಪರ್ಕ ಪಡೆದಿರುವ ಇಲ್ಲಿ ಕಲ್ಲಾಪು ಹಾಗೂ ಪಡುಪಣಂಬೂರು ಪ್ರದೇಶದಲ್ಲಿ ಒಟ್ಟು ಮೂರು ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಒಂದೂವರೆ ವರ್ಷದ ಹಿಂದೆ ಹೆದ್ದಾರಿಗಾಗಿ ಎರಡು ಟ್ಯಾಂಕ್‌ಗಳನ್ನು ಕಳೆದುಕೊಂಡರೂ ಕನಿಷ್ಠ ಎರಡು ದಿನಕ್ಕೊಮ್ಮೆಯಾದರೂ ಹೊಂದಾಣಿಕೆಯಲ್ಲಿ ನೀರು ನೇರವಾಗಿ ನೀಡುತ್ತಿರುವುದರಿಂದ ಗ್ರಾಹಕರ ಒತ್ತಡ ಅಷ್ಟೇನೂ ಇಲ್ಲವಾಗಿತ್ತು.

ಕಲ್ಲಾಪುವಿನಲ್ಲಿ ಒಂದು ಕೊಳವೆ ಬಾವಿಯಲ್ಲಿ ಉಪ್ಪಿನ ಅಂಶ ಕಂಡು ಬಂದಿದ್ದು, ಇಲ್ಲಿಗೆ ನೇರವಾಗಿ ಪಡುಪಣಂಬೂರು ಪ್ರದೇಶದ ಕೊಳವೆ ಬಾವಿಯಿಂದಲೇ ಸಂಪರ್ಕ ನೀಡಲಾಗಿದೆ.
ಇದೀಗ ಒಂದು ಲಕ್ಷ ಲೀ. ಸಾಮರ್ಥ್ಯದ ಬೃಹತ್‌ ಟ್ಯಾಂಕ್‌ನ್ನು ಎಂಆರ್‌ಪಿಎಲ್‌ ಸಂಸ್ಥೆಯು ನೀಡಿದ್ದು ಇತ್ತೀಚೆಗೆ ಅದರ ಸಂಪರ್ಕದ ವ್ಯವಸ್ಥೆಯನ್ನು ಪರೀಕ್ಷಿಸಿದ್ದು ಅಧಿಕೃತವಾಗಿ ಒಂದೆರಡು ವಾರದಲ್ಲಿ ನೀರು ಶೇಖರಣೆಗೆ ಸಜ್ಜಾಗಲಿದೆ.

ಸಮಸ್ಯೆಗೆ ಪರಿಹಾರ
ಕಳೆದ ಬೇಸಗೆಯಲ್ಲಿ ಹೆಚ್ಚು ಸಮಸ್ಯೆಯನ್ನು ಕಾಡಿರುವ ಪಡುಪಣಂಬೂರಿನಲ್ಲಿ ಟ್ಯಾಂಕ್‌ನ ಸಮಸ್ಯೆ ಈಡೇರಿದೆ. ಕಲ್ಲಾಪು ಪ್ರದೇಶದಲ್ಲಿನ ಉಪ್ಪಿನಂಶದ ನೀರಿನಿಂದ ಟ್ಯಾಂಕರ್‌ ಮೂಲಕ ನೀರು ನೀಡಿದ್ದು, ಈ ಬಾರಿ ನೇರವಾಗಿ ಪಡುಪಣಂಬೂರು ನೂತನ ಟ್ಯಾಂಕ್‌ನಿಂದ ನೀರಿನ ಸಂಪರ್ಕ ಕಲ್ಪಿಸಿ, ಪರಿಹಾರ ಕಂಡುಕೊಳ್ಳಲಾಗಿದೆ. ಪಡು ಪಣಂಬೂರಿನಲ್ಲಿ ಬಾಂದ ಕೆರೆಯ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಕೆರೆಕಾಡಿನ ಜಳಕದ ಕೆರೆಯು ಸಹ 1.5 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಯಾ ಗುತ್ತಿದೆ. ಪಂಚಾಯತ್‌ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಮಾಡು ವಾಗ ಕಡ್ಡಾಯವಾಗಿ ಮಳೆಕೊಯ್ಲು ಅಳವಡಿಸಿಕೊಳ್ಳಬೇಕು ಎಂಬ ನಿರ್ದೇಶನ ಕಟ್ಟುನಿಟ್ಟಾಗಿ ಜಾರಿ ಯಾಗಿದೆ. ಅದಕ್ಕಾಗಿ ರೂ. 2 ಸಾವಿರ ಸಹಾಯಧನವಾಗಿ ನೀಡಲಾಗುತ್ತಿದೆ. ನರೇಗಾ ಯೋಜನೆಯಲ್ಲಿ ಸು ಮಾರು 60 ತೆರೆದ ಬಾವಿಗಳನ್ನು ವೈಯಕ್ತಿಕವಾಗಿ ನಿರ್ಮಿಸಲಾಗಿದೆ. ತೋಕೂರು ಹಿಂದೂಸ್ತಾನಿ ಸರಕಾರಿ ಶಾಲೆ ಯಲ್ಲಿ ಮಳೆಕೊಯ್ಲು ಸಹಿತ ನೀರು ಶೇಖರಣೆಯ ಸಂಪನ್ನು ನಿರ್ಮಾಣ ಮಾಡಲಾಗಿದೆ.

ಇನ್ನಷ್ಟು ಸಾಧ್ಯತೆ ಇದೆ
ಪಂಚಾಯತ್‌ ವ್ಯಾಪ್ತಿಯಲ್ಲಿನ ಶಾಲೆ ಕೆರೆ, ದಡ್ಡಿ ಕೆರೆ, ಭೀಮಾ ಕೆರೆ, ಪಾಂಡ್ಲಚ್ಚಿಲ್‌ಗ‌ಳಲ್ಲಿನ ಕೆರೆಗಳನ್ನು ಅಭಿವೃದ್ಧಿಪಡಿಸಿದಲ್ಲಿ ನೀರಿನ ಸಂರಕ್ಷಣೆ ಹೆಚ್ಚಾಗಿ ಸಿಗುತ್ತದೆ. ಗ್ರಾಮಸ್ಥರಿಗೆ ಮಳೆಕೊಯ್ಲು ಬಗ್ಗೆ ಪಂಚಾಯತ್‌ ಇನ್ನಷ್ಟು ಹೆಚ್ಚು ಜಾಗೃತಿ ಮೂಡಿಸಬೇಕಾದ ಆವಶ್ಯಕತೆ ಇದೆ.

ಕೆರೆಗಳ ಅಭಿವೃದ್ಧಿ
ಕುಡಿ ಯುವ ನೀರು ನಿರ್ವ ಹಣೆಗಿಂತ ಅದರ ಮೂಲವನ್ನು ಹುಡುಕಿ ಯೋಜನೆ ರೂಪಿಸಿ ಕೊಂಡಿದ್ದರಿಂದ ನೀರಿನ ಸಮಸ್ಯೆಯು ಕಾಡುತ್ತಿಲ್ಲ, ಪಡುಪಣಂಬೂರಿನಲ್ಲಿ ಎಂಆರ್‌ಪಿಎಲ್‌ ಸಂಸ್ಥೆಯಿಂದ ಟ್ಯಾಂಕ್‌ನ್ನು ಕೊಡುಗೆಯಾಗಿ ನೀಡಿದ್ದರಿಂದ ಇಲ್ಲಿನ ಬಹುದೊಡ್ಡ ಸಮಸ್ಯೆಗೆ ಸ್ಪಂದಿಸಿದಂತಾಗಿದೆ. ಕನಿಷ್ಠ ಮೂರು ಪಂಚಾಯತ್‌ಗೊಂದರಂತೆ ಬಹುಗ್ರಾಮದ ಬೃಹತ್‌ ಶೇಖರಣೆ ಟ್ಯಾಂಕ್‌ ಅಥವಾ ಸಂಪ್‌ ಮಾಡಿಕೊಂಡಲ್ಲಿ ಇನ್ನಷ್ಟು ಸಹಕಾರಿಯಾಗುತ್ತದೆ. ಗ್ರಾಮಸ್ಥರಿಗೆ ಅನೇಕ ಸೇವಾ ಸಂಸ್ಥೆಗಳೇ ಸ್ವಯಂಪ್ರೇರಣೆಯಿಂದ ನೀರಿನ ಜಾಗೃತಿ ಮೂಡಿಸುತ್ತಿದೆ.
– ಮೋಹನ್‌ದಾಸ್‌, ಅಧ್ಯಕ್ಷರು, ಪಡುಪಣಂಬೂರು ಗ್ರಾ.ಪಂ.

ತೆರೆದ ಬಾವಿಗೆ ಪ್ರಾಶಸ್ತ್ಯ
ಭವಿಷ್ಯ ದಲ್ಲಿ ಕೊಳವೆ ಬಾವಿಗಳೇ ಅಪಾಯದ ಸೂಚನೆ ನೀಡಿದೆ. ಅದಕ್ಕಾಗಿ ತೆರೆದ ಬಾವಿಗಳಿಗೆ ವಿಶೇಷ ಆದ್ಯತೆಯನ್ನು ನರೇಗಾ ಯೋಜನೆಯ ಮೂಲಕ ನೀಡುತ್ತಿದ್ದೇವೆ, ಮಳೆಗಾಲವಾಗಲಿ ಬೇಸಗೆಯಾಗಲಿ ನಾವು ನೀರನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಲು ಆಗಾಗ ಗ್ರಾಮಸ್ಥರಿಗೆ ಜಾಗೃತಿ ಮೂಡಿಸುತ್ತಿದ್ದೇವೆ. ಶಾಲಾ ಮಕ್ಕಳಿಗೆ ವಿಶೇಷವಾಗಿ ಇದರ ಬಗ್ಗೆ ಅರಿವು ನೀಡುತ್ತಿದ್ದೇವೆ, ಮಳೆ ಕೊಯ್ಲು ಹಾಗೂ ನೀರಿನ ಒರತೆಗೆ ಅನುಕೂಲವಾಗುವ ಕಾರ್ಯಕ್ರಮಕ್ಕೆ ನಾವು ಸದಾ ಪ್ರೋತ್ಸಾಹ ನೀಡುತ್ತೇವೆ. ಪಂಚಾಯತ್‌ನ ಎಲ್ಲ ಸಮಿತಿಗಳು ಉತ್ತಮವಾಗಿ ನಿರ್ವಹಣೆ ನಡೆಸುತ್ತಿವೆ.
– ಅನಿತಾ ಕ್ಯಾಥರಿನ್‌, ಪಿಡಿಒ, ಪಡುಪಣಂಬೂರು ಗ್ರಾ.ಪಂ.

ನರೇಂದ್ರ ಕೆರೆಕಾಡು

Advertisement

Udayavani is now on Telegram. Click here to join our channel and stay updated with the latest news.

Next