Advertisement
ಏನಾಗಿತ್ತು?
Related Articles
Advertisement
ಮೈಕ್ರೋಸಾಫ್ಟ್ ನಾದೆಳ್ಲ ಮಧ್ಯಸ್ಥಿಕೆ
ಓಪನ್‌ಎಐಗೆ ಸ್ಯಾಮ್ ಅವರನ್ನು ವಾಪಸ್ ಕರೆತರಲು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ಗಂಭೀರ ಪ್ರಯತ್ನ ನಡೆಸಿದ್ದರು. ಈ ನಿಟ್ಟಿನಲ್ಲಿ ಹಿಂದಿನ ನಿರ್ದೇಶಕ ಮಂಡಳಿಗೂ ಒತ್ತಡ ಹಾಕಿದ್ದರು. ಸದ್ಯ ಓಪನ್‌ಎಐ ಕಂಪೆನಿಯಲ್ಲಿ ಮೈಕ್ರೋಸಾಫ್ಟ್ 13 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಹೀಗಾಗಿಯೇ ಓಪನ್‌ಎಐ ಷೇರುಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿವೆ. ಜತೆಗೆ ಈ ಕಂಪೆನಿಯಲ್ಲಿ ಸ್ಯಾಮ್ ಆಲ್ಟ್ಮನ್ ಇರಲೇಬೇಕು ಎಂಬುದು ಸತ್ಯ ನಾದೆಳ್ಲ ಅವರ ಅಪೇಕ್ಷೆಯಾಗಿತ್ತು.
ಸ್ಯಾಮ್ ವಜಾಗೊಂಡಾಗಲೇ ಸತ್ಯ ನಾದೆಳ್ಲ ಕಾರ್ಯೋನ್ಮುಖರಾಗಿದ್ದರು. ಮೊದಲಿಗೆ ಮಿರಾ ಮಿರಾತಿ ಅವರನ್ನು ಮಧ್ಯಾಂತರ ಸಿಇಒ ಮಾಡಿದಾಗಲೂ ಅವರು ಸ್ಯಾಮ್ ಅವರನ್ನೇ ವಾಪಸ್ ಕರೆಸಿಕೊಳ್ಳುವಂತೆ ಬೋರ್ಡ್‌ಗೆ ಆಗ್ರಹಿಸಿದ್ದರು. ರವಿವಾರ ಬೆಳಗ್ಗೆ ಸ್ಯಾಮ್ ವಾಪಸ್ ಆಗುವ ಬಗ್ಗೆ ಸುದ್ದಿಗಳು ಹರಿದಾಡಿದ್ದವು. ಆದರೆ ಮಧ್ಯಾಹ್ನದ ಹೊತ್ತಿಗೆ ಬೋರ್ಡ್, ಟ್ವಿಚ್‌ನ ಮಾಜಿ ಸಿಇಒ ಎಮ್ಮೆಟ್ ಶಿಯರ್ ಅವರನ್ನು ಮಧ್ಯಾಂತರ ಸಿಇಒ ಆಗಿ ನೇಮಕ ಮಾಡಿತ್ತು. ಅತ್ತ ಮೈಕ್ರೋಸಾಫ್ಟ್, ಸ್ಯಾಮ್ ಅವರನ್ನು ತನ್ನ ಕಂಪೆನಿಗೆ ಸೇರಿಸಿಕೊಳ್ಳುವ ಪ್ರಯತ್ನದಲ್ಲಿತ್ತು. ಜತೆಗೆ ಓಪನ್‌ಎಐನಿಂದ ಹೊರಬರುವ ಎಲ್ಲ ಉದ್ಯೋಗಿಗಳಿಗೂ ಉದ್ಯೋಗ ಕೊಡಲೂ ಮುಂದಾಗಿತ್ತು. ಈ ಎಲ್ಲ ಬೆಳವಣಿಗೆಗಳ ಬಳಿಕ, ಓಪನ್‌ಎಐನಲ್ಲಿ ಹೊಸ ಬೋರ್ಡ್ ನೇಮಕವಾಗಿದೆ. ಈ ಬೋರ್ಡ್ ಬುಧವಾರ ಸ್ಯಾಮ್ ಅವರನ್ನು ವಾಪಸ್ ಕರೆಸಿಕೊಳ್ಳಲು ನಿರ್ಧಾರ ಮಾಡಿದೆ.
ಯಾರಿವರು ಸ್ಯಾಮ್ ಆಲ್ಟಮನ್?
ಸಿಲಿಕಾನ್ ವ್ಯಾಲಿಯ ಅತ್ಯದ್ಭುತ ಮತ್ತು ಅಪಾರ ಬುದ್ಧಿವಂತಿಕೆಯ ವ್ಯಕ್ತಿ ಈ ಸ್ಯಾಮ್ ಆಲ್ಟ್ಮನ್. ತನ್ನ ಎಐ ಮೂಲಕ ಟೆಕ್ ಜಗತ್ತನ್ನೇ ಒಮ್ಮೆ ಅಲ್ಲಾಡಿಸಿದ ಅಪ್ರತಿಮ ಚಾಣಾಕ್ಷ.
ಸ್ಯಾಮ್ ಆಲ್ಟ್ಮನ್ ಬಹುವಿಧದ ಬುದ್ಧಿವಂತಿಕೆಯ ಉದ್ಯಮಿ, ಹೂಡಿಕೆದಾರ ಮತ್ತು ಪ್ರೋಗ್ರಾಮರ್. 1985ರಲ್ಲಿ ಜನಿಸಿದ ಸ್ಯಾಮ್, ತಂತ್ರಜ್ಞಾನ, ನಾವಿನ್ಯತೆಯ ಬಗ್ಗೆ ಅಪಾರ ಆಸಕ್ತಿಯುಳ್ಳವರು. ಅಂದ ಹಾಗೆ ಇವರು ಸ್ಟಾಂಡ್‌ಫೋರ್ಡ್ ವಿವಿಯಲ್ಲಿ ಪದವಿ ಪಡೆದಿದ್ದಾರೆ. ಸ್ಯಾಮ್ ಅವರ ಮೊದಲ ಉದ್ಯಮ ಕೌಶಲ ಬಹಿರಂಗವಾದದ್ದು ಲೂಪ್ಟ್ ಎಂಬ ಸ್ಥಳ ಆಧಾರಿತ ಸೋಶಿಯಲ್ ನೆಟ್‌ವರ್ಕಿಂಗ್ ಸೈಟ್ ಮೂಲಕ. ಇದನ್ನು ತಮ್ಮ 19ನೇ ವಯಸ್ಸಿನಲ್ಲೇ ರೂಪಿಸಿದ್ದರು. 2012ರಲ್ಲಿ ಈ ಕಂಪೆನಿಯನ್ನು ಗ್ರೀನ್ ಡಾಟ್ ಕಾರ್ಪೋರೇಶನ್‌ಗೆ 43.4 ಮಿಲಿಯನ್ ಡಾಲರ್‌ಗೆ ಮಾರಾಟ ಮಾಡಿದ್ದರು.
ಇದಾದ ಬಳಿಕವು ಅವರು ಉದ್ಯಮಶೀಲತಾ ವೆಂಚರ್‌ನ ಆಚೆಯೂ ಪ್ರಭಾವ ಬೆಳೆಸಿಕೊಂಡಿದ್ದರು. 2014ರಿಂದ 2019ರ ವರೆಗೆ ವೈ ಕಾಂಪಿನೇಟರ್ ಎಂಬ ಸ್ಟಾರ್ಟ್‌ಅಪ್ ಪ್ರೋತ್ಸಾಹ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಇದು ಡ್ರಾಪ್‌ಬಾಕ್ಸ್, ಏರ್‌ನಬ್ ಮತ್ತು ರೆಡಿಟ್‌ನಂಥ ಕಂಪೆನಿಗಳಿಗೆ ಹೂಡಿಕೆ ಮಾಡಿದೆ. ಇದಷ್ಟೇ ಅಲ್ಲ, ವೈಯಕ್ತಿಕವಾಗಿಯೂ ಸ್ಯಾಮ್, 50ಕ್ಕೂ ಹೆಚ್ಚು ಯಶಸ್ವಿ ಕಂಪೆನಿಗಳಲ್ಲಿ ಹೂಡಿಕೆ ಮಾಡಿದ್ದಾರೆ.
2015ರಲ್ಲಿ ಎಲಾನ್ ಮಸ್ಕ್ ಜತೆಗೆ ಸೇರಿಕೊಂಡು ಓಪನ್‌ಎಐ ಅನ್ನು ಹುಟ್ಟುಹಾಕಿದ್ದರು. ಇದು ಕೃತಕ ಬುದ್ಧಿಮತ್ತೆಯ ಸಂಶೋಧನ ಲ್ಯಾಬ್ ಆಗಿತ್ತು. ಮಾನವತೆಗೆ ಸಹಾಯ ಮಾಡುವ ಸಲುವಾಗಿ ಈ ಸಂಸ್ಥೆಯನ್ನು ಆರಂಭಿಸಲಾಗಿತ್ತು.
2019ರಲ್ಲಿ ವೈ ಕಾಂಬಿನೇಟರ್ ಬಿಟ್ಟ ಸ್ಯಾಮ್, ಓಪನ್‌ಎಐ ಮೇಲೆ ಹೆಚ್ಚು ಗಮನಹರಿಸಿದರು. ಇದರ ಚಾಟ್‌ಜಿಪಿಟಿ ಕಂಪ್ಯೂಟರ್ ಪ್ರೋಗ್ರಾಮ್ ಬರೆಯುವುದರಿಂದ ಹಿಡಿದು, ಇಮೇಜ್ ಕ್ರಿಯೇಶನ್, ಬರಹ, ಪದ್ಯ, ಕಥೆ ಎಲ್ಲವನ್ನೂ ಸೃಷ್ಟಿಸಿಕೊಡುತ್ತದೆ.
ಇಬ್ಬರು ಮಧ್ಯಾಂತರ ಸಿಇಒ
ಮೊದಲಿಗೆ ಕಂಪೆನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಮಿರಾ ಮಿರಾತಿ ಅವರನ್ನು ಮಧ್ಯಾಂತರ ಸಿಇಒ ಮಾಡಲಾಗಿತ್ತು. ರವಿವಾರವಷ್ಟೇ ನಿರ್ದೇಶಕ ಮಂಡಳಿಯ ಟ್ವಿಚ್‌ನ ಮಾಜಿ ಸಿಇಒ ಎಮ್ಮೆಟ್ ಶಿಯರ್ ಅವರನ್ನು ಮಧ್ಯಾಂತರ ಸಿಇಒ ಆಗುವಂತೆ ಆಹ್ವಾನ ನೀಡಿತ್ತು. ಇವರು ಇದಕ್ಕೆ ಒಪ್ಪಿಗೆಯನ್ನೂ ನೀಡಿದ್ದರು.