Advertisement

ಜಮ್ಮು: ಉಗ್ರರ ಬೃಹತ್‌ ಅಡಗುದಾಣ ಪತ್ತೆ, ಭಾರೀ ಶಸ್ತ್ರಾಸ್ತ್ರ ವಶ

04:30 PM Oct 03, 2018 | Team Udayavani |

ಶ್ರೀನಗರ : ಭಾರತೀಯ ಸೇನಾ ಪಡೆ ಜಮ್ಮು ಕಾಶ್ಮೀರ ಪೊಲೀಸರೊಂದಿಗೆ ಸೇರಿ ದೋಡಾ ಜಿಲ್ಲೆಯಲ್ಲಿನ ಉಗ್ರರ ಬೃಹತ್‌ ಅಡಗುದಾಣವನ್ನು ಪತ್ತೆ ಹಚ್ಚಿ ಅಲ್ಲಿದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. 

Advertisement

ಇವುಗಳಲ್ಲಿ ಎರಡು ಎಕೆ ರೈಫ‌ಲ್‌ಗ‌ಳು, 355 ಸುತ್ತಿನ ಮದ್ದುಗುಂಡುಗಳು, ಒಂದು ಯುಬಿಜಿಎಲ್‌ ಗ್ರೆನೇಡ್‌ ಲಾಂಚರ್‌, ನಾಲ್ಕು ಚೀನೀ ಗ್ರೆನೇಡ್‌ ಗಳು ಸೇರಿವೆ ಎಂದು ಸೇನಾ ವಕ್ತಾರ ತಿಳಿಸಿದ್ದಾರೆ. 

ಖಚಿತ ಗುಪ್ತಚರ ಮಾಹಿತಿಯನ್ನು ಅನುಸರಿಸಿ ಖುದ್ದಾರ್‌ ಪ್ರದೇಶದ ಭಗವಾಹ್‌ ಬ್ಲಾಕ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಪರಿಣಾಮವಾಗಿ ಉಗ್ರರ ಬೃಹತ್‌ ಅಡಗುದಾಣ ಮತ್ತು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾದವು ಎಂದು ವಕ್ತಾರ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next