Advertisement

ಲೋಕ ಅದಾಲತ್‌ಗೆ ವ್ಯಾಪಕ ಸ್ಪಂದನೆ: ಮೂರು ಅದಾಲತ್‌ನಲ್ಲಿ 8.34 ಲಕ್ಷ ಪ್ರಕರಣ ಇತ್ಯರ್ಥ

12:18 AM Aug 16, 2022 | Team Udayavani |

ಬೆಂಗಳೂರು: ರಾಜಿ- ಸಂಧಾನದ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥ ಪಡಿಸಿಕೊಳ್ಳುವ ಲೋಕ ಅದಾಲತ್‌ಗೆ ವ್ಯಾಪಕ ಸ್ಪಂದನೆ ಸಿಗುತ್ತಿದ್ದು, ಆ.13ರಂದು ನಡೆದ ಈ ವರ್ಷದ ಮೂರನೇ ಲೋಕ ಅದಾಲತ್‌ನಲ್ಲಿ ರಾಜ್ಯಾದ್ಯಂತ 8.34 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿವೆ.

Advertisement

ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿ ಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್‌ ನ್ಯಾ| ಬಿ. ವೀರಪ್ಪ ಈ ವಿಷಯ ತಿಳಿಸಿದ್ದಾರೆ.

ಹೈಕೋರ್ಟ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಲೋಕ ಅದಾ ಲತ್‌ನ ವಿವರಗಳನ್ನು ನೀಡಿದ ಅವರು, ಆ.13ರಂದು (ಶನಿವಾರ) ರಾಜ್ಯಾದ್ಯಂತ ಒಟ್ಟು 1,009 ಬೈಠಕ್‌ಗಳನ್ನು ನಡೆಸಿ ವಿಚಾರಣೆಗೆ ಬಾಕಿಯಿದ್ದ 1,53,024 ಮತ್ತು ವ್ಯಾಜ್ಯಪೂರ್ವ 6,81,596 ಸೇರಿ ದಂತೆ ಒಟ್ಟು 8,34,620 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಗೊಳಿಸಲಾಗಿದೆ ಎಂದರು.

ಅದಾಲತ್‌ನ ಮತ್ತೊಂದು ವಿಶೇಷ ವೆಂದರೆ 1,380 ವೈವಾಹಿಕ ವಿವಾದ ಪ್ರಕರಣಗಳನ್ನು ಇತ್ಯರ್ಥಪಡಿಸಿ, 120 ಜೋಡಿಗಳನ್ನು ಒಟ್ಟುಗೂಡಿಸಲಾಗಿದೆ. ಮೈಸೂರಿನಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ 27 ದಂಪತಿ ಹಾಗೂ ಬೆಂಗಳೂರಿನ 12 ದಂಪತಿಯನ್ನು ಒಂದು ಗೂಡಿಸಲಾಗಿದೆ ಎಂದು ವಿವರಿಸಿದರು. ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್‌. ಶಶಿಧರ್‌ ಶೆಟ್ಟಿ ಮತ್ತಿತರರು ಇದ್ದರು.

“ಉದಯವಾಣಿ’ಗೆ ಅಭಿನಂದನೆ
ಕಾನೂನು ಸೇವಾ ಪ್ರಾಧಿಕಾರದ ಸೇವೆಗಳು ಮತ್ತು ಲೋಕ ಅದಾಲತ್‌ಗಳನ್ನು ಜನರಿಗೆ ಪರಿಚಯಿಸುವಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದಾಗಿದ್ದು, ಈ ನಿಟ್ಟಿನಲ್ಲಿ “ಉದಯವಾಣಿ’ ಸಹಕಾರ ನೀಡಿದೆ. ಅದಕ್ಕಾಗಿ ಪತ್ರಿಕೆಗೆ ಅಭಿನಂದನೆ ತಿಳಿಸುತ್ತೇನೆ ಎಂದು ನ್ಯಾ| ಬಿ. ವೀರಪ್ಪ ಹೇಳಿದರು. ಜನರನ್ನು ತಲುಪಲು ಮಾಧ್ಯಮಗಳೇ ಪ್ರಾಧಿ ಕಾರಕ್ಕೆ ದೊಡ್ಡ ಸಾಧನ ಮತ್ತು ಅಸ್ತ್ರ. ಮಾಧ್ಯಮಗಳ ಕಾಳಜಿ ಮತ್ತು ಪ್ರಚಾರದಿಂದಾಗಿ ಲೋಕ ಅದಾಲತ್‌ಗಳು ಜನಪ್ರಿಯ ಗೊಳ್ಳುತ್ತಿವೆ. ಮಾಧ್ಯಮಗಳು ಅರಿವು ಮೂಡಿ ಸುತ್ತಿರುವ ಪರಿಣಾಮವಾಗಿಯೇ ಇಂಥ ಅದಾಲತ್‌ಗಳಲ್ಲಿ ಹೆಚ್ಚಿನ ಪ್ರಕರಣಗಳು ಇತ್ಯರ್ಥಗೊಳ್ಳುತ್ತಿವೆ. ಮಾಧ್ಯಮಗಳ ನೆರವು ಮತ್ತು ಸಹಕಾರ ಪಡೆದುಕೊಳ್ಳುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿಗಳಿಗೂ ನಾನು ಮನವಿ ಮಾಡಿರುವುದಾಗಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next