Advertisement

ಕಿವುಡರ ಸಂಘದಿಂದ ಬೃಹತ್‌ ಪ್ರತಿಭಟನೆ

01:30 PM Mar 07, 2017 | |

ಮೈಸೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂಬರುವ ಬಜೆಟ್‌ನಲ್ಲಿ ಕಿವುಡರಿಗಾಗಿ ಮೀಸಲಾತಿ ಹಾಗೂ ಅವರ ಅಭಿವೃದ್ಧಿಗಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸ ಬೇಕೆಂದು ಒತ್ತಾಯಿಸಿ ಜಿಲ್ಲಾ ಕಿವುಡರ ಸಂಘದ ನೇತೃತ್ವದಲ್ಲಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸ ಲಾಯಿತು.

Advertisement

ರಾಜ್ಯದಲ್ಲಿ ಅಂದಾಜು 6 ಲಕ್ಷ ಮಂದಿ ಕಿವುಡರಿದ್ದು, ಇವರು ಸಾಮಾನ್ಯ ಜನರಂತೆ ಸಮಾಜದಲ್ಲಿ ಜೀವನ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿ ದ್ದರೂ ಇವರಿಗೆ ಸರ್ಕಾರದಿಂದ ಅಗತ್ಯ ವಿರುವ ಯಾವುದೇ ಸೌಲಭ್ಯ ಗಳು ದೊರೆಯುತ್ತಿಲ್ಲ. ಹೀಗಾಗಿ ಸರ್ಕಾರಗಳು ಶ್ರವಣ ಮಾಂದ್ಯತೆ ಯನ್ನು ವಿಶೇಷ ಪ್ರಕರಣ ವೆಂದು ಪರಿಗಣಿಸಿ ಅವರಿಗೆ ಅನುಕೂಲ ಕಲ್ಪಿಸುವ ಪ್ರಮುಖ ಬೇಡಿಕೆ ಗಳನ್ನು ಈಡೇರಿಸ ಬೇಕೆಂದು ಪ್ರತಿಭಟನಾ ಕಾರರು ಆಗ್ರಹಿಸಿದರು.

ಪ್ರಮುಖವಾಗಿ ಕಿವುಡರ ಶಾಲೆಗಳಲ್ಲಿ ಶಿಕ್ಷಕರಿಗೆ ಸಂಜಾn(ಸನ್ನೆ) ಭಾಷೆಯಲ್ಲಿ ಶಿಕ್ಷಣದ ತರಬೇತಿ ನೀಡಬೇಕು. ಕಿವುಡ ವ್ಯಕ್ತಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವುದು ಹಾಗೂ ವಂಚನೆ ತಡೆಗಟ್ಟುವುದು, ಶೇ.75 ಡೆಸಿಬಲ್‌ ಕಿವುಡುತನವನ್ನು ಹೊಂದಿದವರಿಗೆ ಮಾತ್ರ ಮೀಸಲಾತಿ ನೀಡಬೇಕು. ಪತಿ-ಪತ್ನಿಯರಲ್ಲಿ ಯಾರಾದರೂ ಒಬ್ಬರು ಸರ್ಕಾರಿ ಕೆಲಸದಲ್ಲಿದ್ದರೆ ಇಬ್ಬರನ್ನು ಒಂದೇ ಸ್ಥಳಕ್ಕೆ ವರ್ಗಾಯಿಸಬೇಕು, ಅಂಗವಿಕಲ ದಂಪತಿಗೆ ನೀಡಲಾಗುತ್ತಿರುವ ವಿವಾಹ ಪೋ›ತ್ಸಾಹ ಧನವನ್ನು ಕಿವುಡ ದಂಪತಿಗೂ ವಿಸ್ತರಿಸುವುದು.

ಕಿವುಡ- ಮೂಗರು ಸ್ವಂತ ಉದ್ಯೋಗ ಆರಂಭಿಸಲು ರಿಯಾಯಿತಿ ಬಡ್ಡಿ ದರದಲ್ಲಿ ಆರ್ಥಿಕ ಸಹಾಯ ಹಾಗೂ ಸಬ್ಸಿಡಿ ಸಾಲ ನೀಡಬೇಕು. ಶ್ರವಣ ಮಾಂದ್ಯ ಕ್ರೀಡಾಕೂಟಕ್ಕೆ ಹಾಗೂ ಕ್ರೀಡಾಪಟುಗಳಿಗೆ ಸಹಾಯಧನ ನೀಡುವುದು ಹಾಗೂ ಇವರಿಗೆ ನೀಡುವ ಸಹಾಯಧನವನ್ನು 5 ಸಾವಿರ ರೂ.ಗಳಿಗೆ ಏರಿಸಬೇಕೆಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಡಿ.ರಂದೀಪ್‌ ಅವರಿಗೆ ಮನವಿ ಸಲ್ಲಿಸಿದರು.

ಇದಕ್ಕೂ ಮುನ್ನ ಪ್ರತಿಭಟನಾಕಾರರು ಕೋಟೆ ಆಂಜನೇಯಸ್ವಾಮಿ ದೇವ ಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪಾದಯಾತ್ರೆ ನಡೆಸಿದರು. ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ಕೆ.ಎಚ್‌.ಶಂಕರ್‌, ಅಧ್ಯಕ್ಷ ಮಹೇಶ್‌ ವರ್ಮ, ಪ್ರಧಾನ ಕಾರ್ಯದರ್ಶಿ ಎಚ್‌.ಎನ್‌.ದೇವರಾಜ್‌, ಉಮೇಶ್‌, ಮಧುಸೂದನ್‌ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next