ಗಂಗಾವತಿ : ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯ ಭರದಿಂದ ನಡೆಯುತ್ತಿದೆ ಈ ಮಧ್ಯೆ ರಸಗೊಬ್ಬರಗಳ ಕೊರತೆ ಮತ್ತು ನಕಲಿ ರಸಗೊಬ್ಬರ ಮಾರಾಟ ದಂಧೆ ವ್ಯಾಪಕವಾಗಿದೆ.
ಸರಕಾರ ಕೂಡಲೇ ಸಮರ್ಪಕ ರಸಗೊಬ್ಬರ ಪೂರೈಕೆ ಮಾಡಬೇಕು ರಸಗೊಬ್ಬರ ನಕಲಿ ದಂಧೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಸಿಐಟಿಯು ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಕೃಷಿ ಇಲಾಖೆಯ ಕಾರ್ಯಾಲಯದ ಎದುರು ಧರಣಿ ಸತ್ಯಾಗ್ರಹ ನಡೆಸಿದರು .
ಈ ಸಂದರ್ಭದಲ್ಲಿ ಶಿವಣ್ಣ ಬೆಣಕಲ್ ಮತ್ತು ನಿರುಪಾದಿ ಬೆಣಕಲ್ ಮಾತನಾಡಿ, ಮಳೆಗಾಲ ಪ್ರಾರಂಭವಾಗಿ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿವೆ ಉಳುಮೆ ಮತ್ತು ಭತ್ತನಾಟಿ ಮಾಡಿದ ರೈತರಿಗೆ ಸರಿಯಾಗಿ ಗೊಬ್ಬರ ಸಿಗುತ್ತಿಲ್ಲ ರಸಗೊಬ್ಬರ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ರೈತರಿಗೆ ಮೋಸ ಮಾಡಿ ಲೂಟಿಮಾಡಲಾಗುತ್ತಿದೆ. ಮಾರುಕಟ್ಟೆನಲ್ಲಿ ಕಳಪೆ ಮಟ್ಟದ ಗೊಬ್ಬರ ಮಾರಾಟಮಾಡಲಾಗುತ್ತದೆ ಮತ್ತು ಅಕ್ರಮ ದಾಸ್ತಾನುದಾರರ ಗೋಡೌನ್ ಗಳಲ್ಲಿ ದಾಸ್ತಾನು ಮಾಡಿ ರೈತರಿಗೆ ಮೋಸ ಮಾಡುತ್ತಿದ್ದಾರೆ.
ಅಂತವರ ವಿರುದ್ಧ ಮೇಲೆ ಕ್ರಿಮಿನಲ್ ಪ್ರಕರಣ ಕೇಸ್ ದಾಖಲು ಮಾಡಬೇಕು. ಎಲ್ಲಾ ರೈತರಿಗೆ ಸಮಯಕ್ಕೆ ಸರಿಯಾಗಿ ರಸಗೊಬ್ಬರವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಮತ್ತು ಸಹಕಾರಿ ಕೃಷಿ ಪತ್ತಿನ ಸೋಸೈಟಿಗಳಿಗೆ ಪೂರೈಕೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಕಾಳಸಂತೆಕಾರರನ್ನು ಪತ್ತೆ ಮಾಡಿ, ಅಕ್ರಮ ಸಂಗ್ರಹ ಮುಟ್ಟುಗೋಲು ಹಾಕಿಕೊಂಡು ರೈತರಿಗೆ ಪೂರೈಕೆ ಮಾಡಬೇಕು .
ಕಳಪೆ ಅಕ್ರಮ ರಸಗೊಬ್ಬರ ಪೂರೈಕೆ ಮಾಡುವವರ ಮೇಲೆ ಕ್ರಮ ಜರುಗಿಸಬೇಕು.ಎಲ್ಲಾ ರೈತರಿಗೆ ರಸಾಯನಿಕ ರಸಗೊಬ್ಬರ ಸಿಗುವಂತೆ ವ್ಯವಸ್ಥೆ ಮಾಡಬೇಕು. ರೈತಸಂರ್ಪಕೇಂದ್ರ ಮತ್ತು ಸೊಸೈಟಿಗಳಿಗೆ ಹೆಚ್ಚಿನ ರಸಗೊಬ್ಬರ ಪೂರೈಕೆ ಮಾಡಿ ರೈತರ ನೆರವಿಗೆ ಸರಕಾರ ಬರಬೇಕು.ರಸಗೊಬ್ಬರ ದರಗಳನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಮ್.ಬಸವರಾಜ, ಶಿವಣ್ಣ ಬೆಣಕಲ್, ಹುಸೇನಪ್ಪ ಕೆ. ಶ್ರೀನಿವಾಸ, ಮರಿನಾಗ ಡಗ್ಗಿ, ಮುತ್ತಣ್ಣ ದಾಸನಾಳ ಕೆ.ಪಿ.ಆರ್.ಎಸ್. ಬಾಳಪ್ಪ ಹುಲಿಹೈದರ, ನಿರುಪಾದಿ ಬೆಣಕಲ್ ‘ಕೃಷ್ಣಪ್ಪ, ಟಿ.ನಬಿಸಾಬ, ಹನುಮಂತ ಹೊಸ್ಕೇರಾ, ಮುಂತಾದವರು ಭಾಗವಹಿಸಿದ್ದರು.