Advertisement
ಅವರು ಉತ್ತರಪ್ರದೇಶದ ಕಾಶಿ ಮಹಾ ಪೀಠದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದ ತಾಯಿ ಪಾರ್ವತಿ ಬಳಗದ ನೂರಕ್ಕೂ ಹೆಚ್ಚು ಮಾತೆಯರು ಒಂದು ವಾರ ಕಾಲ ನಡೆಸಿ ಕೊಟ್ಟ ವೀರಶೈವ ಧರ್ಮಗ್ರಂಥ ಶ್ರೀ ಸಿದ್ಧಾಂತ ಶಿಖಾಮಣಿಯ ಸಾಮೂಹಿಕ ಪಾರಾಯಣ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಎಲ್ಲ ವಿವಿಧ ಯಜ್ಞಗಳಲ್ಲಿ ಜಪ ಯಜ್ಞವೇ ಶ್ರೇಷ್ಠ ಎಂಬುದಾಗಿ ಭಗವದ್ಗೀತೆ ಯಲ್ಲಿ ಉಲ್ಲೇಖೀತಗೊಂಡಿದೆ. ಜತೆಗೆ ಮಂತ್ರಗಳ ಅರ್ಥವನ್ನು ಅರಿತು ಮಂತ್ರಾಕ್ಷರಗಳನ್ನು ಪದೇ ಪದೇ ಉಚ್ಚರಿಸುವುದು ಕೂಡ ಜಪವೆಂದು ಪತಂಜಲಿ ಮಹರ್ಷಿಗಳು ತಮ್ಮ ಯೋಗ ಸೂತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಧರ್ಮ ಗ್ರಂಥಗಳ ಸಾಮೂ ಹಿಕ ಪಾರಾಯಣದಿಂದ ಪರ ಸ್ಪರ ಕೂಡಿ ಬಾಳುವ ಸ್ನೇಹ ಪೂರ್ಣ ಸೌಹಾರ್ದ ಭಾವ ಸಂಪನ್ನತೆಯೊಂದಿಗೆ ಸಕಾರಾತ್ಮಕ, ಕ್ರಿಯಾಪ್ರೇರಕ, ಊರ್ಜಾಶಕ್ತಿ ವಿಕಾಸವಾಗಿ ಬದುಕಿನಲ್ಲಿ ನಿರ್ದಿಷ್ಟ ಪರಿವರ್ತನೆ ಯನ್ನು ಕಾಣಲು ಸಾಧ್ಯವಾಗುತ್ತದೆ. ವ್ಯಕ್ತಿಗಳಲ್ಲಿ ಧನಾತ್ಮಕ ಸತ್ವಗುಣ ಸಂಪನ್ನತೆ ಅಧಿಕವಾಗಿ ಜೀವನ ಕ್ರಮದಲ್ಲಿ ಶ್ರೇಷ್ಠ ಸುಸಂಸ್ಕೃತ ಸಂತತಿಯ ಮಾನವಸಂಪನ್ಮೂಲ ವಿಪುಲವಾಗಿ ನಿರ್ಮಾಣ ವಾಗುತ್ತದೆ. ಗ್ರಂಥರೂಪಿ ಮಹಾಮಂತ್ರದ ಜಪದಿಂದ ಪುಣ್ಯಪ್ರಾಪ್ತಿಯಾಗಿ ಅದರಿಂದ ಲೌಕಿಕ ಭೋಗ-ಭಾಗ್ಯಗಳು, ಗ್ರಂಥಾರ್ಥದ ಅನುಭೂತಿಯಿಂದ ಉತ್ಕೃಷ್ಟ ಜ್ಞಾನಪ್ರಾಪ್ತಿಯೂ ಸಾಧ್ಯ ವಾಗುತ್ತದೆ. ಧರ್ಮಗ್ರಂಥಗಳ ನಿತ್ಯಪಾರಾ ಯಣದಿಂದ ಬದುಕಿನಲ್ಲಿ ಅಭ್ಯುದಯ ಹಾಗೂ ಸಾûಾತ್ಕಾರ ಸಾಧ್ಯವಾಗುತ್ತದೆ. ಹಾಗಾಗಿ ವೀರ ಶೈವರಾದಿ ಎಲ್ಲ ಧರ್ಮೀಯರು ತಮ್ಮ ಧರ್ಮ ಗ್ರಂಥಗಳನ್ನು ನಿತ್ಯ ಪಾರಾಯಣ ಮಾಡಬೇಕು ಎಂದರು.
Advertisement
ವೀರಶೈವ ಧರ್ಮಗ್ರಂಥ ಶ್ರೀ ಸಿದ್ಧಾಂತ ಶಿಖಾಮಣಿಯ ಸಾಮೂಹಿಕ ಪಾರಾಯಣ
04:11 PM Mar 14, 2019 | |
Advertisement
Udayavani is now on Telegram. Click here to join our channel and stay updated with the latest news.