Advertisement

ನಕಲಿ ದಾಖಲೆಗಳ ಬೃಹತ್‌ ಜಾಲ ಪತ್ತೆ

01:06 AM Jan 05, 2021 | Team Udayavani |

ಬೆಂಗಳೂರು: ರಾಜ್ಯ ಮತ್ತು ಕೇಂದ್ರ ಸರಕಾರಗಳ ಮೋನೋಗ್ರಾಮ್‌ ಬಳಸಿ ನಕಲಿ ಆಧಾರ್‌, ಪಾನ್‌ಕಾರ್ಡ್‌, ಮತದಾರರ ಗುರುತಿನ ಚೀಟಿ, ಆರ್‌.ಸಿ. ತಯಾರಿಸಿ ಸರಕಾರಕ್ಕೆ ಕೋಟ್ಯಂತರ ರೂ. ವಂಚಿಸುತ್ತಿದ್ದ ಬೃಹತ್‌ ಜಾಲವನ್ನು ಬೆಂಗಳೂರು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ 10 ಮಂದಿಯನ್ನು ಬಂಧಿಸಲಾಗಿದೆ.

Advertisement

ಆರೋಪಿಗಳಿಂದ ವಿವಿಧ ನಕಲಿ ಕಾರ್ಡ್‌ಗಳು ಮತ್ತು 3 ಲ್ಯಾಪ್‌ಟಾಪ್‌, ಪ್ರಿಂಟರ್‌, 67 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಹೇಳಿದ್ದಾರೆ.

ಇಂಥ ನಕಲಿ ವೋಟರ್‌ ಐಡಿಗಳು ಗ್ರಾ.ಪಂ. ಚುನಾವಣೆಯಲ್ಲಿ ಬಳಕೆಯಾಗಿರುವ ಸಾಧ್ಯತೆಗಳಿವೆ. ತ. ನಾಡು, ಕೇರಳ, ಪ.ಬಂಗಾಲ, ತೆಲಂಗಾಣಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇಲ್ಲಿಗೂ ಆರೋಪಿಗಳು ನಕಲಿ ವೋಟರ್‌ ಐಡಿ ಪೂರೈಕೆಗೆ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.

ಕೆಲವು ಇಲಾಖೆಗಳ ಕಾರ್ಡ್‌ಗಳನ್ನು ಮುದ್ರಿಸಲು “ರೋಸ್‌ಮಾರ್ಟ್‌ ಟೆಕ್ನಾಲಜಿ ಲಿ.’ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ. ಈ ಕಂಪೆನಿಯ ನೌಕರರು ಮತ್ತು ಮಾಜಿ ನೌಕರರು ಈ ಕೃತ್ಯ ಎಸಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next