Advertisement

ಶಿಮ್ಲಾದಲ್ಲಿ ಭಾರೀ ಭೂಕುಸಿತ: ಆರು ವಾಹನಗಳು ನೆಲದಡಿಗೆ

06:58 PM Sep 02, 2017 | Team Udayavani |

ಶಿಮ್ಲಾ : ರಾಜ್ಯದ ರಾಜಧಾನಿಗೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಯಿಂದ ಬೃಹತ್‌ ಭೂಕುಸಿತ ಸಂಭವಿಸಿದ್ದು ಕನಿಷ್ಠ ಆರು ಮೋಟಾರು ವಾಹನಗಳು ಮತ್ತು ದೇವಸ್ಥಾನವೊಂದರ ಆಂಶಿಕ ಭಾಗ ಮಣ್ಣಿನ ರಾಶಿಯಡಿ ಹುಗಿದು ಹೋಗಿವೆ. 

Advertisement

ಭಟ್ಟಾಕುಫೇರ್‌ ಸಮೀಪದ ಕಡಿದಾದ ತಿರುವಿನಲ್ಲಿರುವ ದೇವಳದ ಒಂದು ಭಾಗೂ ಭೂಕುಸಿತದಿಂದ ಹಾನಿಗೊಂಡು ಮಣ್ಣಿನಡಿ ಹುಗಿದುಹೋಗಿದೆ. ಪರ್ವತದ ಇಳಿಜಾರಿನಿಂದ ಉರುಳಿ ಬಂದ ಬೃಹತ್‌ ಬಂಡೆಕಲ್ಲುಗಳು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿಡಲಾಗಿದ್ದ ಆರರಿಂದ ಏಳು ಕಾರುಗಳನ್ನು ಅಪ್ಪಚ್ಚಿ ಮಾಡಿ ಮಣ್ಣಿನಡಿ ಹೂತುಹಾಕಿವೆ ಎಂದು ಪೊಲೀಸರು ತಿಳಿಸಿದ್ದಾರೆ. 

ಭೂಕುಸಿತ ತಾಣದಿಂದ ಮೂವರನ್ನು ರಕ್ಷಿಸಲಾಗಿದೆ ಎಂದು ಡಿವೈಎಸ್‌ಪಿ ರಾಜೀಂದರ್‌ ಸಿಂಗ್‌ ಸುದ್ದಿಗಾರರಿಗೆ ಹೇಳಿದರು. 

ಪೊಲೀಸರು ಮೋಟಾರು ವಾಹನಗಳನ್ನು ಶಿಮ್ಲಾ ಹೊರವಲಯದ ಸಂಜೋಲಿ ಮಾರ್ಗವಾಗಿ ಚಲಿಸುವಂತೆ ಸೂಚಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next