ಕೇರಳ: ಧಾರಾಕಾರ ಮಳೆಯಿಂದಾಗಿ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ಭೂಕುಸಿತ ಸಂಭವಿಸಿದೆ. ಪ್ರವಾಸಿ ಪಟ್ಟಣ ಮುನ್ನಾರ್‌ನಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಜಿಲ್ಲೆಯ ರಾಜಮಲೈ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು ಐವರು ಮೃತಪಟ್ಟು ಹಲವರು ಮಣ್ಣಿನ ಕೆಳಗೆ ಸಿಲುಕಿರುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
ಈ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ಟೀ ಎಸ್ಟೇಟ್ ನಲ್ಲಿ ಕೆಲಸ ಮಾಡುವ 70 ರಿಂದ 80 ಜನರು ವಾಸಿಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ, ಭೂಕುಸಿತದ ಸಮಯದಲ್ಲಿ ಎಷ್ಟು ಮಂದಿ ಮಣ್ಣಿನ ಕೆಳಗೆ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದು ಬಂದಿಲ್ಲವಾಗಿಲ್ಲವಾಗಿದ್ದು ಕಾರ್ಯಾಚರಣೆ ಮುಂದುವರೆದಿದೆ.
ಮಳೆ ರಭಸಕ್ಕೆ ಗ್ರಾಮವನ್ನು ಸಂಪರ್ಕಿಸುವ ಸೇತುವೆ ಕೂಡ ನಿನ್ನೆ ಕೊಚ್ಚಿಹೋಗಿದ್ದು, ವಿದ್ಯುತ್ ಕಂಬಗಳು ಕೂಡ ಧರೆಗುರುಳಿವೆ. ಈ ಕಾರಣದಿಂದ ರಕ್ಷಣಾ ತಂಡಕ್ಕೂ ಸ್ಥಳಕ್ಕೆ ತೆರಳಲು ಕಷ್ಟವಾಗುತ್ತಿದೆ ಎಂದು ತಿಳಿದುಬಂದಿದೆ. ಭೂಕುಸಿತದ ಪರಿಣಭಾಮ ಐದು ಜನರು ಸಾವನ್ನಪ್ಪಿದ್ದು, ಈವರೆಗೆ ಇತರ ಹತ್ತು ಜನರನ್ನು ರಕ್ಷಿಸಲಾಗಿದೆ. 20 ಮನೆಗಳು ನೆಲಸಮವಾಗಿದೆ.
ಇದನ್ನೂ ಓದಿ: ಮುನ್ನಾರು ಭೂಕುಸಿತ: ಅವಶೇಷಗಳಡಿಯಿಂದ 15 ಮೃತದೇಹ ಹೊರಕ್ಕೆ
ಅರಣ್ಯ ಅಧಿಕಾರಿಗಳು ಮತ್ತು ಎನ್ ಡಿ ಆರ್ ಎಫ್ ಇತರ ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ತಲುಪಿದ್ದಾರೆ. “ಪರಿಸ್ಥಿತಿ ನಿಜವಾಗಿಯೂ ಗಂಭೀರವಾಗಿದೆ” ಎಂದು ಕಂದಾಯ ಸಚಿವ ಚಂದ್ರಶೇಖರನ್ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗಾಗಿ ಹೆಲಿಕಾಪ್ಟರ್ ಸೇವೆಗಳನ್ನು ಒದಗಿಸಲು ಭಾರತೀಯ ವಾಯುಸೇನೆಯನ್ನು ಸಂಪರ್ಕಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಚೇರಿ ತಿಳಿಸಿದೆ.
ಏತನ್ಮಧ್ಯೆ, ಪತ್ತಂತಿಟ್ಟ ಶಬರಿಮಲೆ ಬೆಟ್ಟ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿ ಮತ್ತೊಂದು ಭೂಕುಸಿತ ಸಂಭವಿಸಿದೆ ಎಂಬ ವರದಿಯಾಗಿವೆ. ಎರ್ನಾಕುಲಂ ಜಿಲ್ಲೆಯ, ಪೆರಿಯಾರ್ ನದಿಯಲ್ಲಿ ನೀರಿನ ಮಟ್ಟ ಏರಿದಂತೆ, ನದಿ ತೀರದಲ್ಲಿರುವ ಪ್ರಸಿದ್ಧ ಶಿವ ದೇವಾಲಯ ಬಹುತೇಕ ಮುಳುಗಿದೆ.