Advertisement

ಗುಜರಾತ್ ನ ಒಎನ್​ಜಿಸಿ ಘಟಕದಲ್ಲಿ ಭಾರಿ ಸ್ಫೋಟ : ಬೆಂಕಿಯ ಕೆನ್ನಾಲಿಗೆಗೆ ಬೆಚ್ಚಿದ ಜನತೆ

11:17 AM Sep 24, 2020 | sudhir |

ಸೂರತ್ : ದೇಶದ ಪ್ರಮುಖ ಬಂದರುಗಳಲ್ಲಿ ಒಂದಾದ ಸೂರತ್’ನ ಹಾಜಿರಾದಲ್ಲಿನ ತೈಲ ಮತ್ತು ನೈಸರ್ಗಿಕ ಅನಿಲ ಘಟಕದಲ್ಲಿ ಗುರುವಾರ ನಸುಕಿನ ವೇಳೆ ಭಾರಿ ಸ್ಫೋಟ ಸಂಭವಿಸಿದ್ದು ಬೆಂಕಿಯ ಕೆನ್ನಾಲಿಗೆ ಆಕಾಶದೆತ್ತರಕ್ಕೆ ಚಿಮ್ಮಿದೆ ಇದನ್ನು ಕಂಡ ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ.

Advertisement

ದಕ್ಷಿಣ ಗುಜರಾತಿನ ಸೂರತ್‍ನ ಹಜೀರಾ ಬಂದರಿನ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಲ್ಲಿ ಸರಣಿ ಸ್ಫೋಟ ಸಂಭವಿಸಿದ್ದು ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯ ನಡೆದಿದೆ.

ಘಟನೆಯ ಕುರಿತು ಯಾವುದೇ ರೀತಿಯ ಸಾವು ನೋವು ಸಂಭವಿಸಿಲ್ಲ ಎಂದು ಕಂಪೆನಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸ್ಪೋಟದ ತೀವ್ರತೆಗೆ ಸುತ್ತಮುತ್ತಲಿನ ಜನರು ಭಯಭೀತರಾಗಿದ್ದು ಬೆಂಕಿಯ ಕೆನ್ನಾಲಿಗೆ ಸುಮಾರು ಕಿಲೋಮೀಟರ್ ದೂರದವರೆಗೆ ಕಾಣಿಸಿದೆ ಅಲ್ಲದೆ ಗ್ಯಾಸ್ ವಾಸನೆಯು ಸುಮಾರು ದೂರದ ವರೆಗೆ ವ್ಯಾಪಿಸಿದ್ದು ಸುರಕ್ಷಾ ಕ್ರಮವಾಗಿ ಸುತ್ತ ಮುತ್ತಲಿನ ಕೈಗಾರಿಕೆಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದ್ದು ಅಧಿಕಾರಿಗಳು ಘಟನಾ ಸ್ಥಳದಲ್ಲಿದ್ದು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಪೊಲೀಸ್ ಕಸ್ಟಡಿಯಲ್ಲಿದ್ದ ಯುವಕ ಠಾಣೆ ಸಮೀಪದ ಬಾವಿಯಲ್ಲಿ ಶವವಾಗಿ ಪತ್ತೆ!

Advertisement

ಸರಣಿ ಸ್ಪೋಟದಿಂದ ಉಂಟಾದ ಬೆಂಕಿಯ ವಿಡಿಯೋಗಳನ್ನು ಅಲ್ಲಿನ ಸ್ಥಳೀಯರು ರೆಕಾರ್ಡ್ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next