ಮಹಾರಾಷ್ಟ್ರ: ಆಸ್ಪತ್ರೆಯ ಮಕ್ಕಳ ಘಟಕದಲ್ಲಿ ಅಗ್ನಿ ಅವಘಡ ನಡೆದ ಪರಿಣಾಮ ಹತ್ತು ನವಜಾತ ಶಿಶುಗಳು ಮೃತಪಟ್ಟ ಘಟನೆ ಮಹಾರಾಷ್ಟ್ರದ ಭಂಡಾರಾ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಮಧ್ಯರಾತ್ರಿ ಸಮಾರು ಎರಡು ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಸ್ಥಳದಲ್ಲಿ ಏಳು ಶಿಶುಗಳನ್ನು ರಕ್ಷಿಸಲಾಗಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿದೆ.
ಇದನ್ನೂ ಓದಿ:ತೊಕ್ಕೊಟ್ಟು: ತಾತ್ಕಾಲಿಕ ಬೀಫ್ ಸ್ಟಾಲ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ನವಜಾತ ಶಿಶುಗಳ ಆರೈಕೆ ಘಟಕದಲ್ಲಿ 17 ಮಕ್ಕಳು ದಾಖಲಾಗಿದ್ದರು. ರಾತ್ರಿ ಸುಮಾರು ಎರಡು ಗಂಟೆ ಸುಮಾರಿಗೆ ಘಟಕದಲ್ಲಿ ಹೊಗೆ ಆವರಿಸಿತ್ತು. ಆಸ್ಪತ್ರೆ ಸಿಬ್ಬಂದಿ ಮಕ್ಕಳನ್ನು ರಕ್ಷಿಸಲು ಸಾಧ್ಯವಾದ ಪ್ರಯತ್ನವನ್ನೆಲ್ಲಾ ನಡೆಸಿದರು. ಆದರೆ ಹತ್ತು ಮಕ್ಕಳು ಮೃತಪಟ್ಟರು. ಏಳು ಶಿಶುಗಳನ್ನು ರಕ್ಷಿಸಲಾಗಿದೆ ಎಂದು ಆಸ್ಪತ್ರೆ ವೈದ್ಯ ಡಾ. ಪ್ರಮೋದ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಘಟಕದಲ್ಲಿ ದಾಖಲಾದ ಮಕ್ಕಳು ಒಂದರಿಂದ ಮೂರು ತಿಂಗಳ ಪ್ರಾಯದವರು. ವಾರ್ಡ್ ನಲ್ಲಿ ವಿಪರೀತ ಹೊಗೆ ತುಂಬಿದ್ದರಿಂದ ಶಿಶುಗಳ ಸಾವಿಗೆ ಕಾರಣವಾಗಿದೆ ಎಂದು ವರದಿಯಾಗಿದೆ.