ಈ ಗೆಲುವಿನಿಂದ ಪಾಕಿಸ್ಥಾನವು ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಸರಣಿಯ ಮೂರನೇ ಪಂದ್ಯ ಕರಾಚಿಯಲ್ಲಿ ಮೇ 3ರಂದು ನಡೆಯಲಿದೆ. ಈ ಮೊದಲು ನಡೆದ ಪಂದ್ಯದಲ್ಲಿ ಪಾಕಿಸ್ಥಾನ 5 ವಿಕೆಟ್‌ಗಳಿಂದ ಗೆಲುವು ಸಾಧಿಸಿ ಶುಭಾರಂಭ ಮಾಡಿತ್ತು.
Advertisement
ಡ್ಯಾರಿಲ್ ಮಿಚೆಲ್ ಅವರ ಶತಕ ಮತ್ತು ಟಾಮ್ ಲಾಥಂ ಅವರ ಉತ್ತಮ ಆಟದಿಂದ ನ್ಯೂಜಿಲ್ಯಾಂಡ್ ತಂಡವು 5 ವಿಕೆಟಿಗೆ 336 ರನ್ನುಗಳಬೃಹತ್ ಮೊತ್ತ ಪೇರಿಸಿತು. ಮೊದಲ ಪಂದ್ಯದಲ್ಲೂ ಶತಕ ಬಾರಿಸಿದ್ದ ಮಿಚೆಲ್ ಇಲ್ಲಿ 129 ರನ್ ಹೊಡೆದಿದ್ದರೆ ಲಾಥಂ 98 ರನ್ ಗಳಿಸಿ ಎರಡು ರನ್ನಿನಿಂದ ಶತಕ ಗಳಿಸಲು ವಿಫಲರಾದರು.ಗೆಲ್ಲಲು ಕಠಿನ ಗುರಿ ಪಡೆದಿದ್ದರೂ ಪಾಕಿಸ್ಥಾನ ಭರ್ಜರಿಯಾಗಿ ಆಡಿ 48.2 ಓವರ್‌ಗಳಲ್ಲಿ ಕೇವಲ ಮೂರು ವಿಕೆಟಿಗೆ 337 ರನ್ ಬಾರಿಸಿ ಜಯಭೇರಿ ಬಾರಿಸಿತು. ಮತ್ತೆ ಅದ್ಭುತವಾಗಿ ಆಡಿದ ಫಕಾರ್ ಜಮಾನ್ ಅಜೇಯ 180 ರನ್ ಬಾರಿಸಿ ಗಮನ ಸೆಳೆದರು. ಮೊದಲ ಪಂದ್ಯದಲ್ಲೂ ಅವರು ಶತಕ ಬಾರಿಸಿದ್ದರು.
ನ್ಯೂಜಿಲ್ಯಾಂಡ್ 5 ವಿಕೆಟಿಗೆ 336 (ಡ್ಯಾರಿಲ್ ಮಿಚೆಲ್ 129, ಟಾಮ್ ಲಾಥಂ 98, ಹ್ಯಾರಿಸ್ ರವೂಫ್ 78ಕ್ಕೆ 4); ಪಾಕಿಸ್ಥಾನ 48.2 ಓವರ್‌ಗಳಲ್ಲಿ 3 ವಿಕೆಟಿಗೆ 337 (ಫಕಾರ್ ಜಮಾನ್ 180 ಔಟಾಗದೆ, ಬಾಬರ್ ಅಜಂ 65, ಮೊಹಮ್ಮದ್ ರಿಜ್ವಾನ್ 54).