ಹಾಸನ: ಸಮ್ಮಿಶ್ರ ಸರ್ಕಾರ ರಚನೆ ಬಯಕೆಯಲ್ಲಿದ್ದ ಜಿಲ್ಲೆಯ ಜೆಡಿಎಸ್ ಮುಖಂಡರು, ಕಾರ್ಯಕರ್ತರಿಗೆ ಚುನಾವಣಾ ಫಲಿತಾಂಶವು ನಿರಾಶೆಯನ್ನುಂಟು ಮಾಡಿದೆ. ಆದರೇ ಹೊಸದಾಗಿ ಕಾಂಗ್ರೆಸ್ ಸರ್ಕಾರ ಬರಲಿದ್ದು ಜಿಲ್ಲೆಯ ಅಭಿವೃದ್ಧಿ ವೇಗ ಹೆಚ್ಚಲಿದೆ ಎಂಬುದು ಕೈ ಕಾರ್ಯಕರ್ತರ ನಿರೀಕ್ಷೆಯಾಗಿದೆ.
ಕಳೆದ ಬಾರಿ ವಿಧಾನಸಭಾ ಚುನವಣೆ ಫಲಿತಾಂಶ ದಂತೆ ಈ ಬಾರಿ ಚುನಾವಣೆ ಫಲಿತಾಂಶವೂ ಅತಂತ್ರ ಆಗಲಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಭಾಗಿ ಆಗಲಿದೆ. ಎಚ್.ಡಿ.ರೇವಣ್ಣ ಅವರು ಡಿಸಿಎಂ ಅಥವಾ ಮಂತ್ರಿ ಆಗಲಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತ ರು ನಿರೀಕ್ಷಿಸಿದ್ದರು. ಆದರೆ, ಕಾಂಗ್ರೆಸ್ ಪಕ್ಷವು ಅಭೂತ ಪೂರ್ವ ಬಹುಮತ ಸಾಧಿಸಿ ಸರ್ಕಾರ ರಚನೆಗೆ ಮುಂದಾಗಿರೋದರಿಂದ ಮತ್ತಷ್ಟು ಅಭಿವೃದ್ಧಿ ಸಾಧಿಸಲಿದೆ ಎಂಬುದು ಜಿಲ್ಲೆಯ ಜನರ ನಿರೀಕ್ಷೆಯಾಗಿದೆ.
ಜಿಲ್ಲೆಯ ಹಲವು ಯೋಜನೆಗಳಿಗೆ ಕೊಕ್ಕೆ: 2018ರ ಚುನಾವಣೆ ನಂತರ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿ ಕುಮಾರಸ್ವಾಮಿ ಸಿಎಂ, ಎಚ್.ಡಿ.ರೇವಣ್ಣ ಅವರು ಲೋಕೋಪಯೋಗಿ ಸಚಿವರಾಗಿದ್ದರು. ಜಿಲ್ಲೆಗೆ ನಿರೀಕ್ಷೆ ಮೀರಿದ ಅಭಿವೃದ್ಧಿ ಯೋಜನೆಗಳು ಮಂಜೂರಾಗಿದ್ದವು. ಕೆಲವು ಯೋಜನೆ ಅನುಷ್ಠಾನವೂ ಆದವು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಮಂಜೂರು ಮಾಡಿದ್ದ ಯೋಜ ನೆಗಳು ಸ್ಥಗಿತವಾಗುತ್ತಾ ಹೋದವು. ಬಹುಮುಖ್ಯ ವಾಗಿ ಹಾಸನಕ್ಕೆ ಮಂಜೂರಾಗಿದ್ದ ತಾಂತ್ರಿಕ ವಿವಿ, ತೋಟಗಾರಿಕೆ ಕಾಲೇಜು ಸ್ಥಾಪನೆಯಾ ಗಲೇ ಇಲ್ಲ. ದೇವೇಗೌಡರ ಕನಸಿನ ಯೋಜನೆ ಯಾಗಿದ್ದ ಐಐಟಿ ಸ್ಥಾಪನೆಯಾಗಲಿಲ್ಲ. ಅದಕ್ಕಾಗಿ ಸ್ವಾಧೀನ ಪಡಿಸಿ ಕೊಂಡಿದ್ದ 1057 ಎಕರೆ ಭೂಮಿಯನ್ನೂ ಬಿಜೆಪಿ ಸರ್ಕಾರ ಕೈಗಾರಿಕಾಭಿವೃದ್ಧಿ ಪ್ರದೇಶಕ್ಕೆ ಬಳಕೆ ಮಾಡಿಕೊಳ್ಳಲು ಸರ್ಕಾರ ಆದೇಶ ಮಾಡಿತು.
ಜೆಡಿಎಸ್ ಕಾರ್ಯಕರ್ತರಿಗೆ ನಿರಾಸೆ: ಹೀಗೆ ಜಿಲ್ಲೆಯ ನನೆಗುದಿಗೆ ಬಿದ್ದಿದದ ಅಭಿವೃದ್ಧಿ ಕಾರ್ಯಗಳ ಈ ಬಾರಿ ಸಮ್ಮಿಶ್ರ ಸರ್ಕಾರ ರಚನೆಯಾಗಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಎಚ್.ಡಿ.ರೇವಣ್ಣ ಅವರು ಮಂತ್ರಿಯಾಗಿ ಈ ಎಲ್ಲ ಯೋಜನೆಗಳನ್ನೂ ಅನುಷ್ಠಾನಗೊಳಿಸುತ್ತಾರೆ ಎಂಬ ನಿರೀಕ್ಷೆ ಬಹಳಷ್ಟಿತ್ತು. ಎಚ್.ಡಿ. ರೇವಣ್ಣ ಅವರೂ ಜೆಡಿಎಸ್ ಅಧಿಕಾರಕ್ಕೆ ಬಂದರೆ ತ್ವರಿತವಾಗಿ ಅನುಷ್ಠಾನಗೊಳಿಸುವುದಾಗಿ ಹಲವಾರು ಬಾರಿ ಹೇಳಿದ್ದೂ ಉಂಟು. ಈ ಹಿನ್ನೆಲೆ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರಲ್ಲಿ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಬಗ್ಗೆ ನಿರೀಕ್ಷೆಗಳು ಗರಿಗೆದರಿದ್ದವು. ಆದರೆ, ಜೆಡಿಎಸ್ ಅಧಿಕಾ ರದಿಂದ ದೂರವಾಗಿರುವುದು ಜೆಡಿಎಸ್ ಕಾರ್ಯಕರ್ತರಿಗೆ ಬಹಳ ನಿರಾಸೆಯಾಗಿದೆ.
ಅನುದಾನ ತಾರತಮ್ಯ ಸಾಧ್ಯತೆ: ಎಚ್.ಡಿ.ರೇವಣ್ಣ ಅವರು ಪ್ರಭಾವಿ ರಾಜಕಾರಣಿ ಆಗಿರುವುದರಿಂದ ಸರ್ಕಾರದ ಮೇಲೆ ಪ್ರಭಾವಿ ಬೀರಿ ಒಂದಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಾರೆ ಎಂಬ ನಂಬಿಕೆ ಜೆಡಿಎಸ್ ಕಾರ್ಯಕರ್ತರಲ್ಲಿದೆ. ಆದರೆ, ರೇವಣ್ಣ ಅವರು ಮಂತ್ರಿಯಾಗಿದ್ದಾಗ ಆಗಿದ್ದ ಪ್ರಮಾಣ ದಲ್ಲಿ ಜಿಲ್ಲೆಯ ಅಭಿವೃದ್ಧಿ ಯೋಜನೆಗಳು ಹಾಸನ ಜಿಲ್ಲೆಗೆ ಮಂಜೂರಾಗಲ್ಲ. ಅನುಷ್ಠಾನ ಆಗುವುದೂ ಇಲ್ಲ ಎಂಬ ವಿಶ್ಲೇಷಣೆಯೂ ನಡೆದಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ, ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಯಾರಾಗಲಿದ್ದಾರೆ ಎಂಬುದರ ಮೇಲೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ನಿರ್ಧಾರ ಆಗಬೇಕಾಗಿದ್ದು, ಈಗ ಸದ್ಯಕ್ಕೆ ಮುಖ್ಯಮಂತ್ರಿ ಹಾಗೂ ಮಂತ್ರಿಮಂಡಲ ಮೇಲೆ ಜಿಲ್ಲೆಯ ಜನ ಎದುರು ನೋಡುತ್ತಿದ್ದು ಜನರ ನಿರೀಕ್ಷೆ ಗರಿಗೆದರಿದೆ.
ಅನುದಾನದ ಕೊರತೆ ಕಾಮಗಾರಿ ಸ್ಥಗಿತ: ಹಾಸನ ವಿಮಾನ ನಿಲ್ದಾಣದ ಮೂಲ ಯೋಜನೆಯನ್ನೂ ಬಿಜೆಪಿ ಸರ್ಕಾರ ಮೂಲೆಗೆ ಸೇರಿಸಿ ಚಿಕ್ಕ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಚಾಲನೆ ನೀಡಿತು. ಈಗ ಅನುದಾನದ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿದೆ. ಹಾಸನ ಬಸ್ ನಿಲ್ದಾಣ ಸಮೀಪ ಚನ್ನಪಟ್ಟಣ ಕೆರೆ ಸೌಂದರ್ಯಿಕರಣದ 144 ಕೋಟಿ ರೂ.ಯೋಜನೆಯನ್ನೂ ಬಿಜೆಪಿ ಸರ್ಕಾರ ಹಾಳು ಮಾಡಿತು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವೂ ಅರೆಬರೆಯಾಗಿದೆ. ಹೀಗೆ ಹತ್ತಾರು ಅಭಿವೃದ್ಧಿ ಯೋಜನೆಗಳು ಬಿಜೆಪಿ ಸರ್ಕಾರದಲ್ಲಿ ನನೆಗುದಿಗೆ ಬಿದ್ದವು. ಈ ಬಾರಿ ಚುನಾವಣೆಯಲ್ಲಿ ಪ್ರೀತಂ ಜೆ.ಗೌಡ ಅವರ ಸೋಲಿಗೆ ಶಾಶ್ವತ ಅಭಿವೃದ್ಧಿ ಯೋಜನೆಗಳನ್ನು ಬಿಜೆಪಿ ಸರ್ಕಾರ ಅಡ್ಡಿಪಡಿಸಿದ್ದೂ ಒಂದು ಕಾರಣವಾಗಿತ್ತು