ಮೂಡಬಿದಿರೆ: ಗಾಂಧಿ ಜಯಂತಿ ಅಂಗವಾಗಿ ಮೂಡಬಿದಿರೆಯ ವಿವಿಧೆಡೆಗಳಲ್ಲಿ ಬೃಹತ್ ಸ್ವಚ್ಚತಾ ಅಭಿಯಾನ ಏರ್ಪಡಿಸಲಾಗಿತ್ತು.
ಅಲಂಗಾರ್‌ನಿಂದ ಸೈಂಟ್ ಥಾಮಸ್ ಶಾಲಾವರಣ, ಶಿರ್ತಾಡಿ ಮಾರ್ಗದಲ್ಲಿ ಮಹಮ್ಮದೀಯ ಪ್ರೌಢಶಾಲೆ, ಜೈನ್ ಪ.ಪೂ. ಕಾಲೇಜು, ಧವಲಾ ಕಾಲೇಜು, ಜೈನ ಪ್ರೌಢಶಾಲೆ, ಕಲ್ಲಬೆಟ್ಟು ಕಡೆಯಿಂದ ಎಕ್ಸಲೆಂಟ್, ಮಹಾವೀರ ಕಾಲೇಜುಗಳು, ಪ್ರಾಂತ್ಯ ಸರಕಾರಿ ಪ್ರಾ., ಪ್ರೌಢಶಾಲೆ, ಜ್ಯೋತಿನಗರದ ಬಿ. ಆರ್.ಪಿ. ಪ್ರೌಢಶಾಲೆ, ರೋಟರಿ ಆಂ.ಮಾ. ಶಾಲೆ, ಪ.ಪೂ.ಕಾಲೇಜು, ಹೋಲಿ ರೋಸರಿ ಪ್ರೌಢಶಾಲೆ, ಪ.ಪೂ. ಕಾಲೇಜು, ವಿದ್ಯಾಗಿರಿಯಿಂದ ಆಳ್ವಾಸ್ ನರ್ಸಿಂಗ್ ಕಾಲೇಜು ಹೀಗೆ ಹಲವು ದಿಕ್ಕುಗಳಿಂದ ವಿದ್ಯಾರ್ಥಿಗಳು, ಎನ್‌ಸಿಸಿ, ಎನ್ನೆಸ್ಸೆಸ್, ಸ್ಕೌಟ್ಸ್ ಗೈಡ್ಸ್ ಮೊದಲಾದ ತಂಡಗಳು, ರೋಟರಿ, ಪುರಸಭೆ ಮತ್ತು ಇತರ ಸಂಘಟನೆಗಳ ಸದಸ್ಯರು ಸುಶ್ರಾವ್ಯ ಶಾಲಾ ಬ್ಯಾಂಡ್ ಸೆಟ್ ವಾದನದ ಸಂಭ್ರಮದೊಂದಿಗೆ ಅಭಿಯಾನದಲ್ಲಿ ಸಾಗಿ ಬಂದು ಹಳೆಯ ಪೊಲೀಸ್ ಠಾಣೆಯ ಬಳಿ ಒಗ್ಗೂಡಿದರು.
ಮೂಡಬಿದಿರೆ ಕೋ – ಆಪರೇಟಿವ್ ಬ್ಯಾಂಕ್ ಎದುರು ರೋಟರಿ ಜಿಲ್ಲಾ ಸ್ವಚ್ಚತಾ ಅಭಿಯಾನದ ಸಭಾಪತಿ ಡಾ|ಹರೀಶ್ ನಾಯಕ್, ಪುರಸಭಾ ಮಾಜಿ ಅಧ್ಯಕ್ಷ ರತ್ನಾಕರ ದೇವಾಡಿಗ, ಸ್ಥಾಯೀ ಸಮಿತಿ ಅಧ್ಯಕ್ಷ ಕೊರಗಪ್ಪ ಧ್ವಜ ಬೀಸಿ ಅಭಿಯಾನದ ಮುನ್ನಡೆಗೆ ಚಾಲನೆ ನೀಡಿದರು. ಮುಖ್ಯ ರಸ್ತೆಯಲ್ಲಿ ಸಾಗಿ ಸ್ವರಾಜ್ಯ ಮೈದಾನದ ಬಳಿಯ ‘ಕಾಮಧೇನು ಸಭಾಂಗಣ’ದತ್ತ ಅಭಿಯಾನ ಸಾಗಿತು.
ಸಭಾಂಗಣದಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಶಾಸಕ ಕೆ. ಅಭಯಚಂದ್ರ, ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ , ಪರಿಸರ ಅಭಿಯಂತರೆ ಶಿಲ್ಪಾ, ವಿವಿಧ ರೋಟರಿ ಕ್ಲಬ್‌ಗಳ ಅಧ್ಯಕ್ಷರಾದ ಶ್ರೀಕಾಂತ ಕಾಮತ್, ಬಲರಾಮ್ ಕೆ. ಎಸ್., ಕುಮಾರ್, ರೋಟರಿ ಎ.ಜಿ. ಎ. ಎಂ. ಕುಮಾರ್, ಉಮೇಶ್ ರಾವ್, ಜಿ.ಪಂ. ಸದಸ್ಯ ಸುಚರಿತ ಶೆಟ್ಟಿ, ರೋಟರಿಯ ಪ್ರವೀಣ್ ಪಿರೇರಾ, ಅಜಯ್ ಗ್ಲೆನ್ ಡಿ’ ಸೋಜಾ ಪಾಲ್ಗೊಂಡಿದ್ದರು.
ಅಭಿಯಾನದ ಮುಂಚಿತವಾಗಿ ಒಂದು ಗಂಟೆ ಸ್ವಚ್ಚತಾ ಕಾರ್ಯಕ್ರಮ ನಡೆಸಿದ್ದರು. ಮೂಡಬಿದಿರೆಯ ರೋಟರಿ ಕ್ಲಬ್, ರೋಟರಿ ಕ್ಲಬ್ ಆಫ್ ಮೂಡಬಿದಿರೆ ಟೆಂಪಲ್ ಟೌನ್, ರೋಟರಿ ಕ್ಲಬ್ ಮೂಡಬಿದಿರೆ ಮಿಡ್ ಟೌನ್ , ಮೂಡಬಿದಿರೆ ಪುರಸಭೆ ವಿದ್ಯಾಸಂಸ್ಥೆಗಳು , ಸಂಘಟನೆಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಜರಗಿತು.