ಬಿಲ್ಲವ ಸಮಾಜ ಸೇವಾ ಸಂಘ ಪುಣೆ ವತಿಯಿಂದ ಮೇ 26ರಂದು ಪುಣೆಯ ಕರ್ವೆ ರೋಡ್ ಹತ್ತಿರದ ಕೇತ್ಕರ್ ರೋಡ್‌ನಲ್ಲಿಯ ಡಾ| ಶ್ಯಾಮ್ ರಾವ್ ಕಲ್ಮಾಡಿ ಕನ್ನಡ ಹೈಸ್ಕೂಲ್‌ನ ಹಾಲ್‌ನಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮನುಷ್ಯನ ಜೀವನದಲ್ಲಿ ಅನಾರೋಗ್ಯ, ಅಪಘಾತ ಎಂಬುವುದು ಯಾವತ್ತೂ ಹೇಳಿ ಬರುವುದಿಲ್ಲ. ಅವೆಲ್ಲವೂ ಅಕಸ್ಮಿಕ. ದೇಹದ ಸಮತೋಲನ ತಪ್ಪಿದಾಗ, ಆಹಾರ ಪದ್ಧತಿಯಲ್ಲಿ ಏರುಪೇರಾದಾಗ, ಅಧುನಿಕ ಜೀವನ ಪದ್ಧತಿಯಿಂದ ಹಾಗೂ ಪ್ರಸ್ತುತ ಕಲುಷಿತ ವಾತಾವರಣದಿಂದ ಮನುಷ್ಯ ಬೇಗನೆ ಅನಾರೋಗ್ಯ ಪೀಡಿತನಾಗುತ್ತಾನೆ. ಅಸಮರ್ಪಕ ಜೀವನ ನಿರ್ವಹಣೆಯಿಂದ ಅಥವಾ ಮನುಷ್ಯ ತಪ್ಪಿನಿಂದ ಅಪಘಾತಗಳು ಕೂಡ ಅಧಿಕಗೊಳ್ಳುತ್ತಿವೆ. ಈ ಎಲ್ಲಾ ಅವಘಡಗಳಿಂದ ಮನುಷ್ಯನ ದೇಹದಿಂದ ಯಥೇತ್ಛವಾಗಿ ಮೊದಲು ಹರಿದುಹೋಗುವುದು ರಕ್ತ.
Advertisement
ರಕ್ತ ಮನುಷ್ಯನ ಜೀವದ ಯಂತ್ರ ಚಾಲನೆಗೆ, ಉಸಿರಾಟಕ್ಕೆ ಬಹು ಮುಖ್ಯವಾಗಿದೆ. ಜೀವ ಉಳಿಸಲು ಮೊದಲಾಗಿ ಬೇಕಾಗುವುದು ರಕ್ತ. ರಕ್ತವನ್ನು ಎಲ್ಲೆಂದರಲ್ಲಿ ಹಣ ಕೊಟ್ಟು ಪಡೆಯಬಹುದು ಎಂದರೆ ಅದು ಅಸಾಧ್ಯದ ಮಾತು. ಕೇವಲ ರಕ್ತ ದಾನಿಗಳು ನೀಡಿದ ರಕ್ತದ ಶೇಖರಣೆ ಇದ್ದರೆ ಮಾತ್ರ ಅಪಾಯದಲ್ಲಿರುವ ವ್ಯಕ್ತಿಗೆ ಸಕಾಲದಲ್ಲಿ ರಕ್ತ ನೀಡಿದರೆ ಜೀವ ಉಳಿಸಬಹುದು ಎಂದರು.
Related Articles
Advertisement
ಸುನೀತಾ ಎಸ್. ಪೂಜಾರಿ ಮತ್ತು ವನಿತಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ವಿಶಾಲಾ ಪಿ. ಪೂಜಾರಿ ಸ್ವಾಗತಿಸಿದರು. ಗೀತಾ ಡಿ. ಪೂಜಾರಿ ವಂದಿಸಿದರು. ಶಿಬಿರದ ಯಶಸ್ಸಗೆ ಸಮಾಜದ ಹಿರಿಯ ಗಣ್ಯರು, ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗದ ಪ್ರಮುಖರು, ಯುವ ವಿಭಾಗದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.
ರಕ್ತದಾನ ಶಿಬಿರವನ್ನು ಪಿಂಪ್ರಿ ಚಿಂಚಾÌಡ್ ಮಹಾನಗರ ಪಾಲಿಕೆಯ ವೈ. ಸಿ. ಎಂ. ಬ್ಲಿಡ್ ಬ್ಯಾಂಕಿನ ವೈದ್ಯಾಧಿಕಾರಿಗಳಾದ ಡಾ| ಶಂಕರ್ ಮೊಸಲಿY, ಡಾ| ನೀತಾ ಘಾಡೆY, ಡಾ| ಸ್ವಾತಿ ಪಾಟೀಲ್, ಡಾ| ಕಿಶನ್ ಗಾಯಕ್ವಾಡ್ ಮತ್ತು¤ ತಂಡದವರು ನಡೆಸಿಕೊಟ್ಟರು. ವೈದ್ಯಾಧಿಕಾರಿಗಳು ಹಾಗೂ ಈ ರಕ್ತದಾನ ಶಿಬಿರಕ್ಕೆ ಭೇಟಿ ನೀಡಿದ ಗಣ್ಯರನ್ನು ವಿಶ್ವನಾಥ್ ಪೂಜಾರಿ ಕಡ್ತಲ ಮತ್ತು ಪದಾಧಿಕಾರಿಗಳು ಗೌರವಿಸಿದರು.
ಪುಣೆ ಬಿಲ್ಲವ ಸಂಘದ ಪ್ರತಿಯೊಂದು ಜನಸೇವಾ ಕಾರ್ಯಕ್ರಮಗಳು ಸಮಾಜದ ಒಳಿತಿಗಾಗಿ ಮತ್ತು ಅವಶ್ಯವಾಗಿ ಕಷ್ಟದಲ್ಲಿರುವವರಿಗೆ ಸಹಾಯಕವಾಗಲು ನಡೆಯುತ್ತಿವೆ. ಸಂಘದ ಅಧ್ಯಕ್ಷರ ಸಮಾಜ ಸೇವಾ ಮನೋಭಾವದಿಂದ ಹಲವಾರು ಕಾರ್ಯಕ್ರಮಗಳು ಸಾಕಾರಗೊಂಡಿದ್ದು ಸಮಾಜಕ್ಕೆ ಸಹಕಾರಿಯಾಗಿವೆ. ಇನ್ನು ಮುಂದೆಯೂ ಇಂತಹ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿರಲಿ. ತಮಗೆÇÉಾ ನಮ್ಮ ಸಂಪೂರ್ಣ ಸಹಕಾರವಿದೆ.– ಸುಂದರ್ ಪೂಜಾರಿ, ಸ್ಥಾಪಕಾಧ್ಯಕ್ಷರು, ಬಿಲ್ಲವ ಸಂಘ ಪುಣೆ ಇಂದಿನ ಕಾರ್ಯಕ್ರಮವೆಂದರೆ ರಕ್ತದಾನ. ಅದು ಜನರ ಪಾಲಿಗೆ ಯಾವತ್ತೂ ಬಹು ಮುಖ್ಯವಾಗಿ ಬೇಕಾಗುವಂತದ್ದು. ರಕ್ತದಾನ ಸರ್ವ ಶ್ರೇಷ್ಠವಾದುದು. ರಕ್ತ ದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ ಕೂಡಾ ಹೌದು. ಇಂತಹ ಅವಕಾಶವನ್ನು ಪುಣೆ ಬಿಲ್ಲವ ಸಂಘದ ಅಧ್ಯಕ್ಷರಾದ ವಿಶ್ವನಾಥ್ ಪೂಜಾರಿಯವರ ಉತ್ಸಾಹಿ ಸಮಾಜ ಸೇವಾ ಕಳಕಳಿಯಿಂದ ಆಯೋಜನೆಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ನಾವೆಲ್ಲರೂ ಇದರಲ್ಲಿ ಭಾಗಿಗಳಾಗೋಣ.
– ಸದಾನಂದ ಪೂಜಾರಿ, ಮಾಜಿ ಅಧ್ಯಕ್ಷರು, ಬಿಲ್ಲವ ಸಂಘ ಪುಣೆ ಚಿತ್ರ-ವರದಿ : ಹರೀಶ್ ಮೂಡಬಿದ್ರಿ ಪುಣೆ