Advertisement

ಸಾವಿರ ಶಿಬಿರಾರ್ಥಿಗಳಿಂದ ಸಾಮೂಹಿಕ ಯೋಗ

12:34 AM Jun 22, 2019 | mahesh |

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ-ಯೋಗ ವಿಜ್ಞಾನಗಳ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ, ಶಾಂತಿವನ ಟ್ರಸ್ಟ್‌ ವತಿಯಿಂದ ಧರ್ಮಸ್ಥಳ ಅಮೃತ ವರ್ಷಿಣಿ ಸಭಾಭವನದಲ್ಲಿ ಯೋಗ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ 5ನೇ ವರ್ಷದ ಯೋಗ ಕಾರ್ಯಕ್ರಮದಲ್ಲಿ 1,000 ಶಿಬಿರಾರ್ಥಿಗಳು ಸಾಮೂಹಿಕ ಯೋಗ ಪ್ರದರ್ಶಿಸಿದರು.

Advertisement

ಉಜಿರೆ ಎಸ್‌.ಡಿ.ಎಂ. ಸಿ.ಎನ್‌. ವೈ.ಎಸ್‌. ಪ್ರಾಂಶುಪಾಲ ಡಾ| ಪ್ರಶಾಂತ್‌ ಶೆಟ್ಟಿ ಮಾತನಾಡಿ, ಮಹಾಮುನಿಗಳು ಸಾರಿದ ಯೋಗ ಸಂದೇಶ ಎಂದಿಗೂ ಪ್ರಸ್ತುತ. ಎಲ್ಲ ಜನರಿಗೂ ಯೋಗದ ಪರಿಚಯಿಸುವ ದೃಷ್ಟಿ ಯಿಂದ ಹೃದಯಕ್ಕೆ ಯೋಗ ಎಂಬ ಶೀರ್ಷಿಕೆಯಡಿ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಸಚಿವ ಸಚಿವ ಸಿ.ಎಚ್. ಪುಟ್ಟರಾಜು, ಹೇಮಾವತಿ ವೀ. ಹೆಗ್ಗಡೆ, ಶಾಸಕ ಹರೀಶ್‌ ಪೂಂಜ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌, ಎಸ್‌. ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ಸಿಂಡಿಕೇಟ್ ಬ್ಯಾಂಕ್‌ನ ಮಹಾಪ್ರಬಂಧಕ ಭಾಸ್ಕರ ಹಂದೆ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಉಪಕುಲಸಚಿವ ಡಾ| ಬಿ. ವಸಂತ ಶೆಟ್ಟಿ, ಶಾಂತಿವನ ಟ್ರಸ್ಟ್‌ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಡಿತ್ತಾಯ, ಯೋಗ ಮತ್ತು ನೈತಿಕ ಶಿಕ್ಷಣ ವಿಭಾಗ ಡಾ| ಐ. ಶಶಿಕಾಂತ್‌ ಜೈನ್‌ ಉಪಸ್ಥಿತರಿದ್ದರು.

ಕಾಲೇಜಿನ ಯೋಗ ವಿಭಾಗದ ಡೀನ್‌ ಡಾ| ಶಿವಪ್ರಸಾದ ಶೆಟ್ಟಿ ವಂದಿಸಿದರು. ಡಾ| ರಿಷಿಕಾ ರೈ ಮತ್ತು ಪ್ರಿಯದಾ ಪಾಲ್ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next