Advertisement

ಗ್ರಾಮೀಣ ಜನರಿಂದಲೇ ಸಂಸ್ಕೃತಿ ರಕ್ಷಣೆ

04:37 PM Dec 06, 2020 | Suhan S |

ಚಿತ್ರದುರ್ಗ: ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದ ಶ್ರೇಯಸ್ಸು ಗ್ರಾಮೀಣ ಭಾಗದ ಜನರಿಗೆ ಸಲ್ಲುತ್ತದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ಎಸ್‌.ಜೆ.ಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ಸಹಯೋಗದಲ್ಲಿ ನಡೆದ ಮೂವತ್ತನೇ ವರ್ಷದ  ಹನ್ನೆರಡನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿ ವ್ಯಕ್ತಿಯೂ ಬದುಕನ್ನು ಶೃಂಗರಿಸಿಕೊಳ್ಳುವ ಸಂದರ್ಭವನ್ನು ತಂದುಕೊಳ್ಳಬೇಕು. ಬಹಿರಂಗದ ಅಲಂಕಾರ ಕ್ಷಣಿಕ. ಅಂತರಂಗದ ಶೃಂಗಾರ ಮುಖ್ಯ. ಪ್ರೇರಣೆ ಉಜ್ವಲವಾದ ಬದುಕನ್ನು ಕಟ್ಟಿಕೊಡುತ್ತದೆ. ಬದುಕನ್ನು ಕಟ್ಟಿಕೊಳ್ಳಲು ಹಣ, ಶ್ರೀಮಂತಿಕೆ ಮುಖ್ಯವಲ್ಲ ಎಂದರು.

ಬಸವಣ್ಣನವರಿಗೆ ಶರಣರು, ಶರಣರ ಪ್ರೇರಣೆ ಬಸವಣ್ಣನವರಿಗಾಯಿತು. ಗುಡ್ಡಾಪುರದ ಶರಣೆ ದಾನಮ್ಮ ಸಾಮೂಹಿಕ ಕಲ್ಯಾಣ ಮಹೋತ್ಸವ ಮಾಡುತ್ತ ಅನ್ನದಾಸೋಹ ನೆರವೇರಿಸಿ ಪ್ರೇರಣೆಯಾಗಿದ್ದಾರೆ. 12ನೇ ಶತಮಾನದ ಬಸವಾದಿ ಪ್ರಮಥರು ನಮಗೆಲ್ಲ ಪ್ರೇರಣೆಯಾಗಿದ್ದಾರೆ ಎಂದು ತಿಳಿಸಿದರು.

ಕೆಆರ್‌ಐಡಿಎಲ್‌ ಅಧ್ಯಕ್ಷ ಎಂ. ರುದ್ರೇಶ್‌ ಸನ್ಮಾನ ಸ್ವೀಕರಿಸಿ ಮಾತನಾಡಿ, ಮುರುಘಾ ಶರಣರು ನಡೆಸುವ ಎಲ್ಲಾ ಚಟುವಟಿಕೆಗಳು ನಮಗೆ ಪ್ರೇರಣೆಯಾಗಿವೆ. ನಾವೆಲ್ಲ ಎಷ್ಟೇ ದುಡಿದು ಶ್ರೀಮಂತರಾದರು ಇನ್ನೊಬ್ಬರಹಸಿವಿಗೆ ಸ್ಪಂದಿಸಬೇಕು. ಕೊರೊನಾ ವೈರಾಣು ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ಸಾವು ನೋವುಗಳಾಗಿವೆ. ಈ ಸಂದರ್ಭದಲ್ಲಿ ಹಳ್ಳಿ ಜನರ ಸೇವೆ ಅಮೂಲ್ಯವಾದುದು. ನಾವು ದೇಶದ ರಕ್ಷಣೆಗೆ ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕನಕಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ, ಎಸ್‌.ಜೆ.ಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ,ಕೆಇಬಿ ಷಣ್ಮುಖಪ್ಪ, ಎಂ.ಟಿ. ಮಲ್ಲಿಕಾರ್ಜುನಸ್ವಾಮಿ,ಪೈಲ್ವಾನ್‌ ತಿಪ್ಪೇಸ್ವಾಮಿ, ಪಿ. ವೀರೇಂದ್ರಕುಮಾರ್‌, ಎನ್‌. ತಿಪ್ಪಣ್ಣ, ಗುತ್ತಿನಾಡು ಪ್ರಕಾಶ್‌ ಮೊದಲಾದವರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ 2 ಜೊತೆ ಅಂತರ್ಜಾತಿ ಸೇರಿದಂತೆ 12 ಜೋಡಿಗಳ ವಿವಾಹ ನೆರವೇರಿತು. ಜಮುರಾ ಕಲಾವಿದರು ಪ್ರಾರ್ಥಿಸಿದರು. ವೀರಭದ್ರಪ್ಪ ಸ್ವಾಗತಿಸಿದರು. ಜ್ಞಾನಮೂರ್ತಿ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next