ಕೊಟ್ಟೂರು: ಜೀವನದಲ್ಲಿ ಬಗೆಬಗೆಯ ಸಮಾಜ ಒಡೆಯುವ ಕಾರ್ಯಗಳು ನಡೆದರೂ ಸಹ ವೀರಶೈವ ಧರ್ಮ ಎಲ್ಲವನ್ನು ಒಗ್ಗೂಡಿಸಿಕೊಂಡು ಸಹಬಾಳ್ವೆ ಜೀವನವನ್ನು ನಡೆಸುವಲ್ಲಿ ಸಾರ್ಥಕತೆಯನ್ನು ಇವತ್ತಿಗೂ ಮೂಡಿಸುತ್ತಿದೆ ಎಂದು ಉಜ್ಜಯಿನಿಯ ಮಹಾ ಪೀಠದ ಶ್ರೀ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಶ್ರೀ ಉಜ್ಜಯನಿ ಮರುಳ ಸಿದ್ದೇಶ್ವರ ಸ್ವಾಮಿಯ ಕಾರ್ತಿಕೋತ್ಸವ ನಿಮಿತ್ತ ಲಿಂಗೈಕ್ಯ ಜಗದ್ಗುರು ಮರುಳಸಿದ್ಧ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಹತ್ತನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಪ್ರಯುಕ್ತ ಪೀಠದಲ್ಲಿ ಶನಿವಾರದಂದು ಸಾಮೂಹಿಕ ವಿವಾಹ ಹಾಗೂ ಲಕ್ಷದೀಪೋತ್ಸವ ಕಾರ್ಯಕ್ರಮ ನೆರವೇರಿಸಿ ಆಶೀರ್ವಚನ ಚಾಲನೆ ನೀಡಿದರು.
ನಾಡಿನ ಒಳಿತಿಗಾಗಿ ವೀರಶೈವ ಧರ್ಮದ ತತ್ವಸದ್ಧಾಂತಗಳು ಸಮಾಜದ ವೀರಶೈವ ಲಿಂಗಾಯತ ಧರ್ಮಕ್ಕೆ ಎಂದೆಂದಿಗೂ ಕುಂದುಂಟು ಬಾರದಂತೆ ಶ್ರೀ ಲಿಂಗೈಕ್ಯ ಜಗದ್ಗುರುಗಳು ನಿಭಾಯಿಸುತ್ತಿದ್ದರು ಪಂಚಪೀಠಗಳಲ್ಲಿ ಇಡಿ ಅತ್ಯಂತ ಸರಳ ಸಜ್ಜನಿಕೆಯ ಮೂಲಕ ಭಕ್ತ ಹಿಡಿ ಸಮೂಹದಲ್ಲೇ ಪ್ರೀತಿ ವಾತ್ಸಲ್ಯ ವಿಶ್ವಾಸವನ್ನು ಗುರಿ ಮುಟ್ಟಿಸಿ ಜಗದ್ಗುರುಗಳು ಕೆಲವೇ ವರ್ಷಗಳಲ್ಲಿ ಕಾಲ ಧೀನರಾಗಿದ್ದು ನಮಗೆ ದೊಡ್ಡ ದುರಂತ ಅವರು ಕೊನೆ ಗಳಿಗೆ ವರಿಗೂ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ಮಾತೃ ಹೃದಯ ಗಳಾಗಿ ತಮ್ಮನ್ನು ತಾವೇ ಅರ್ಪಿಸಿಕೊಂಡರು ಇಂದಿಗೂ ಅವರ ಸಾಧನೆಗಳು ಪ್ರಸ್ತುತ ಎಂದು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
ಈ ಭಾಗದಲ್ಲಿ ಮಳೆಯಾಶ್ರಿತ ಪ್ರದೇಶವಾಗಿದ್ದು ಎಷ್ಟೋ ರೈತರು ಸಾಲದ ಬಾಧೆಯಲ್ಲಿ ಸಿಲುಕಿದ್ದಾರೆ ಈ ವರ್ಷವೂ ಅಕಾಲಿಕ ಮಳೆಯಿಂದ ಎಷ್ಟೋ ರೈತರಿಗೆ ಬೆಳೆದ ಬೆಳೆಗಳು ಸಹ ಕೈಗೆ ಸಿಗುವಂತಾಗಿದೆ ಹಾಗೂ ಕಳೆದ 2ರಿಂದ 3 ವರ್ಷಗಳಲ್ಲಿ ಕರೋನ ಹಾವಳಿಯಿಂದ ಯುವಕರು ಸಹ ಕೆಲಸವಿಲ್ಲದೆ ಮನೆಯಲ್ಲೇ ಕುಳಿತು ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ ಕೂಡಲೇ ಸರ್ಕಾರ ರೈತರ ಕಷ್ಟಗಳನ್ನು ಆಲಿಸಿ ಯುವಕರ ನಿರುದ್ಯೋಗಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದ ಶ್ರೀಗಳು.
ಈ ಸಂದರ್ಭದಲ್ಲಿ ಪುಣ್ಯ ಸ್ಮರಣೋತ್ಸವ ಹಾಗೂ ಶ್ರೀ ಮರುಳಸಿದ್ಧೇಶ್ವರ ಸ್ವಾಮಿಯ ಲಕ್ಷದೀಪೋತ್ಸವ ಧರ್ಮಸಭೆ ನೆರವೇರಿಸಿದ್ದ ಶ್ರೀ ಮಳಿ ಯೋಗೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾಣಿಹಳ್ಳಿ ಪುರವರ್ಗ ಮಠ ಮತ್ತು ಮರುಳಸಿದ್ದಪ್ಪ ಸಂತೋಷದ ಸಿಬ್ಬಂದಿವರ್ಗದವರು ಊರಿನ ಗ್ರಾಮಸ್ಥರು ನೆರೆದಿದ್ದರು ಭಕ್ತರು ಉಪಸ್ಥಿತರಿದ್ದರು.