Advertisement

ಕಾಸರಗೋಡು ನಗರದಲ್ಲಿ ಬೃಹತ್‌ ಪ್ರತಿಭಟನೆ

07:05 AM Aug 12, 2017 | Team Udayavani |

ಬಿ.ಜೆ.ಪಿ. ಕಾರ್ಯಕರ್ತನ ಕೊಲೆ ಯತ್ನ
ಕಾಸರಗೋಡು: ಬಿ.ಜೆ.ಪಿ. ಕಾರ್ಯಕರ್ತ, ಅಣಂಗೂರು ಜೆ.ಪಿ. ಕಾಲನಿ ನಿವಾಸಿ ಜ್ಯೋತಿಷ್‌ ಅವರನ್ನು ಕೊಲೆಗೈಯ್ಯಲು ಯತ್ನಿಸಿದ ದುಷ್ಕೃತ್ಯವನ್ನು ಪ್ರತಿಭಟಿಸಿ ಸಂಘ ಪರಿವಾರ ನೇತೃತ್ವದಲ್ಲಿ ಕಾಸರಗೋಡು ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು.

Advertisement

ಆ.10 ರಂದು ಸಂಜೆ ನಗರದ ನುಳ್ಳಿಪ್ಪಾಡಿ ನೇತಾಜಿ ರೆಸಿಡೆನ್ಶಿಯಲ್‌ ಪ್ರದೇಶದಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಕಾರು ಢಿಕ್ಕಿ ಹೊಡೆಸಿ ಮಾರಕಾಯುಧಗಳಿಂದ ಆಕ್ರಮಣಗೈದು ಹತ್ಯೆಗೆ ಯತ್ನಿಸಲಾಗಿತ್ತು. ಈ ಸಂದರ್ಭದಲ್ಲಿ ಜ್ಯೋತಿಷ್‌ ಓಡಿದ್ದರಿಂದ ಅಪಾಯದಿಂದ ಪಾರಾಗಿದ್ದರು.

ಕರಂದಕ್ಕಾಡ್‌ನ‌ಲ್ಲಿರುವ ಬಿಜೆಪಿ ಕಾರ್ಯಾಲಯ ಪರಿಸರದಿಂದ ಆರಂಭಗೊಂಡ ಪ್ರತಿಭಟನೆ ಮೆರವಣಿಗೆ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ಬಿಎಂಎಸ್‌ ಕಾರ್ಯಾಲಯ ಸಮೀಪ ಸಪಾರೋಪಗೊಂಡಿತು.

ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್‌, ಪ್ರಧಾನ ಕಾರ್ಯದರ್ಶಿ ಪಿ.ರಮೇಶ್‌, ಬಿಜೆಪಿ ನೇತಾರರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಸುಧಾಮ ಗೋಸಾಡ ಮಾಧವ ಮಾಸ್ಟರ್‌, ಬಿಎಂಎಸ್‌ ನೇತಾರರಾದ ಶ್ರೀನಿವಾಸ, ಎ.ಕೇಶವ ಮೊದಲಾದವರು ನೇತೃತ್ವ ವಹಿಸಿದರು.

ಪೊಲೀಸರ ಪೈಫಲ್ಯ ಕಾರಣ : ಕಾಸರಗೋಡು ನಗರ ಸಹಿತ ಜಿಲ್ಲೆಯಲ್ಲಿ ಪದೇ ಪದೇ ಹಿಂದೂಗಳ ಮೇಲೆ ಹಲ್ಲೆ, ಹಿಂಸೆ ನಡೆಯುತ್ತಿದ್ದರೂ, ಪೊಲೀಸರು ಇಂತಹ ಆಕ್ರಮಣವನ್ನು ತಡೆಯಲು ವಿಫಲರಾಗುತ್ತಿದ್ದಾರೆ. ಕಾಸರಗೋಡಿನಲ್ಲಿ ಕಾನೂನು ಹದಗೆಟ್ಟಿದ್ದರೂ, ಕಾಸರಗೋಡಿನಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ಪೊಲೀಸರು ಸಮರ್ಥಿಸುತ್ತಲೇ ಬಂದಿದ್ದಾರೆ ಎಂದರು.
ಆದರೂ ಹಿಂದೂಗಳ ಮೇಲೆ ಹಿಂಸೆ ನಡೆಯುತ್ತಲೇ ಇದೆ. ಜ್ಯೋತಿಷ್‌ ಅವರ ಹತ್ಯೆಗೆ ಯತ್ನಿಸಿದ ದಷುRರ್ಮಿಗಳನ್ನು ಶೀಘ್ರವೇ ಬಂಧಿಸಬೇಕೆಂದು ಬಿಜೆಪಿ ರಾಜ್ಯ ಸಮಿತಿ ಉಪಾಧ್ಯಕ್ಷ ರವೀಶ ತಂತ್ರಿ ಕುಂಟಾರು ಅವರು ಆಗ್ರಹಿಸಿದರು.

Advertisement

ನಿರಂತರವಾಗಿ ಹಿಂದೂಗಳ ಮೇಲೆ ಹಲ್ಲೆ ನಡೆಯು ತ್ತಿದ್ದರೂ ಈ ವರೆಗೂ ಯಾವುದೇ ಪ್ರಚೋದನೆಗೊಳಗಾ ಗದೆ ತಾಳ್ಮೆಯನ್ನು ಪ್ರದರ್ಶಿಸುತ್ತಲೇ ಬಂದಿದೆ. ತಾಳ್ಮೆ ದೌರ್ಬಲ್ಯವಲ್ಲ ಎಂದು ದುಷ್ಕರ್ಮಿಗಳು ತಿಳಿಯುವುದು ಉತ್ತಮ ಎಂದರು. 

ಇದೇ ಸಂದರ್ಭದಲ್ಲಿ ಪೊಲೀಸರು ಕೈಗೊಂಬಗ ಳಂತೆ ವರ್ತಿಸುತ್ತಿರುವುದರಿಂದಲೇ ಕಾಸರಗೋಡಿನಲ್ಲಿ ನಿರಂತರ ಹಲ್ಲೆ ನಡೆಯಲು ಪ್ರಮುಖ ಕಾರಣ ವಾಗಿದೆ ಎಂದು ಆರೋಪಿಸಿದರು. ಆರೋಪಿಗಳನ್ನು ಶೀಘ್ರವೇ ಬಂಧಿಸದಿದ್ದಲ್ಲಿ ಉಗ್ರ ಹೋರಾಟ ಅನಿವಾರ್ಯ ವಾಗಬಹುದು ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next