Advertisement

ಸಾಮೂಹಿಕ ನಕಲು; ಬೀದರ್‌ ಪರೀಕ್ಷಾ ಕೇಂದ್ರ ರದ್ದು

09:32 AM May 26, 2022 | Team Udayavani |

ಕಲಬುರಗಿ: ಇಲ್ಲಿನ ಗುಲ್ಬರ್ಗಾ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ಎಂಪಿಸಿ ಮಾಡಿದ್ದು, ಬೀದರ್‌ನ ಸನ್‌ ಸಾಫ್ಟ್‌ ಪದವಿ ಕಾಲೇಜಿನಲ್ಲಿ ಸಾಮೂಹಿಕ ನಕಲು ನಡೆಸುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರವನ್ನು ರದ್ದು ಮಾಡಲಾಗಿದೆ.

Advertisement

ಬುಧವಾರ ಕಲಬುರಗಿ ಮತ್ತು ಬೀದರ್‌ ಜಿಲ್ಲೆಗಳ ಹಲವು ಕಾಲೇಜುಗಳಿಗೆ ಭೇಟಿ ನೀಡಿದ ಪರೀಕ್ಷಾ ವಿಭಾಗದ ಕುಲಸಚಿವೆ ಡಾ| ಮೇಧಾವಿನಿ ಕಟ್ಟಿ , ಬೀದರ್‌ನ ಚಂದ್ರಶೇಖರ ಪದವಿ ಮಹಾವಿದ್ಯಾಲಯದಲ್ಲಿ ಇಬ್ಬರು ವಿದ್ಯಾರ್ಥಿಗಳು ಪುಸ್ತಕ ಇಟ್ಟುಕೊಂಡು ನಕಲು ಮಾಡುತ್ತಿರುವುದನ್ನು ಗಮನಿಸಿ ತಕ್ಷಣವೇ ಅವರನ್ನು ಎಂ.ಪಿ.ಸಿ. ಮಾಡಿದರು. ಅಲ್ಲದೇ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ, ಹುಮನಾಬಾದನಲ್ಲಿ ಬಿ.ಎಸ್ಸಿ ಐದನೇ ಸೆಮಿಸ್ಟರ್‌ ಭೌತಶಾಸ್ತ್ರ ವಿಷಯದ ಒಬ್ಬ ವಿದ್ಯಾರ್ಥಿ ನಕಲು ಮಾಡಿ ಸಿಕ್ಕು ಬಿದ್ದ ಪರಿಣಾಮ ಎಂಪಿಸಿ ಮಾಡಿದರು. ಇದಲ್ಲದೇ, ಕಲಬುರಗಿಯ ಎಸ್‌.ಬಿ. ವಾಣಿಜ್ಯ, ಎಸ್‌.ಬಿ. ವಿಜ್ಞಾನ ಪದವಿ ಮಹಾವಿದ್ಯಾಲಯ, ಶಾಂತಿನಿಕೇತನ ಪದವಿ ಮಹಾವಿದ್ಯಾಲಯ, ನೂತನ ವಿದ್ಯಾಲಯ, ನಾರ್ಥ ಕರ್ನಾಟಕ ಪದವಿ ಮಹಾವಿದ್ಯಾಲಯ, ಎಂಜೆಪಿ ಪದವಿ ಮಹಾವಿದ್ಯಾಲಯ ಮತ್ತು ಎಕೆಎಸ್‌ಜಿವಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದಾಗ ಈ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಅಚ್ಚುಕಟ್ಟಾಗಿ ನಡೆಯುತ್ತಿರುವುದನ್ನು ಗಮನಿಸಿ ಸಂತೋಷ ವ್ಯಕ್ತಪಡಿಸಿದರು.

ಪರೀಕ್ಷಾ ಕೇಂದ್ರ ರದ್ದು: ಬೀದರ್‌ ಸನ್‌ ಸಾಫ್ಟ್‌ ಪದವಿ ಮಹಾವಿದ್ಯಾಲಯ, ಚಂದ್ರಶೇಖರ ಪದವಿ ಮಹಾವಿದ್ಯಾಲಯ ಮನ್ನಾಖೇಳ್ಳಿ ಮತ್ತು ಬಿವಿಬಿ ಪರೀûಾ ಕೇಂದ್ರಗಳಿಗೆ ಭೇಟಿ ನೀಡಿದಾಗ ಸನ್‌ ಸಾಫ್ಟ್‌ ಪದವಿ ಮಹಾವಿದ್ಯಾಲಯದಲ್ಲಿ ಕಿರಿಯ ಮೇಲ್ವಿಚಾರಕರು ಮತ್ತು ಮಹಾವಿದ್ಯಾಲಯದ ಸಿಬ್ಬಂದಿ ಮತ್ತು ಏಳು ಜನ ವಿದ್ಯಾರ್ಥಿಗಳು ಸೇರಿಕೊಂಡು ಸಾಮೂಹಿಕ ನಕಲು ಮಾಡುತ್ತಿರುವುದನ್ನು ಪರೀಕ್ಷಾ ವಿಭಾಗದ ಕುಲಸಚಿವೆ ಡಾ| ಮೇಧಾವಿನಿ ಕಟ್ಟಿ ಕಂಡು ಸಿಡಿಮಿಡಿಗೊಂಡರು. ಅಲ್ಲದೆ, ಕೂಡಲೇ ಪರೀಕ್ಷಾ ಕೇಂದ್ರವನ್ನು ರದ್ದು ಮಾಡಲು ಆದೇಶ ಹೊರಡಿಸಿದರು. ರದ್ದಾದ ಪರೀಕ್ಷಾ ಕೇಂದ್ರದಲ್ಲಿ ನಡೆಬೇಕಾಗಿರುವ ಮುಂದಿನ ಪರೀಕ್ಷೆಗಳನ್ನು ಬಿವಿಬಿ ಪರೀಕ್ಷಾ ಕೇಂದ್ರಕ್ಕೆ ವರ್ಗಾಯಿಸಿದ್ದಾರೆ ಎಂದು ವಿವಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕಾಶ್ಮೀರಿ ನಟಿಯ ಮನೆಯ ಮೇಲೆ ದಾಳಿ ಮಾಡಿದ ಲಷ್ಕರ್ ಉಗ್ರರು; ನಟಿ ಸಾವು!

ಪರೀಕ್ಷೆಗಳನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ನಕಲು ಮುಕ್ತವಾಗಿ ನಡೆಸಲು ಯೋಜಿಸಿದ್ದೇವೆ. ಅದರಂತೆ ಬುಧವಾರ ಹಲವು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದಾಗ ಸುಸೂತ್ರವಾಗಿ ನಡೆಯುತ್ತಿರುವುದು ಕಂಡು ಬಂದಿದೆ. ಬೀದರ್‌ನ ಮೂರು ಕಾಲೇಜುಗಳಲ್ಲಿ ನಕಲು ಮಾಡಿರುವುದು ಪತ್ತೆಯಾಗಿದೆ. ಕೇಂದ್ರ ರದ್ದು ಮಾಡಿ ವಿದ್ಯಾರ್ಥಿಗಳನ್ನು ಎಂಪಿಸಿ ಮಾಡಲಾಗಿದೆ. ಡಾ| ಮೇದಾವಿನಿ ಕಟ್ಟಿ, ಕುಲಸಚಿವರು, ಪರೀಕ್ಷಾ ವಿಭಾಗ, ಗುವಿವಿ

Advertisement
Advertisement

Udayavani is now on Telegram. Click here to join our channel and stay updated with the latest news.

Next