Advertisement

ದೆಹಲಿ ನಂತರ ಬೆಂಗಳೂರಿನಲ್ಲೂ ಕೋವಿಡ್ ಶವಗಳ ಸಾಮೂಹಿಕ ಅಂತ್ಯ ಸಂಸ್ಕಾರ

04:16 PM Apr 30, 2021 | Team Udayavani |

ಬೆಂಗಳೂರು: ಇತ್ತೀಚಿಗಷ್ಟೆ ನವದೆಹಲಿಯಲ್ಲಿ ಕೋವಿಡ್‍ನಿಂದ ಸಾವನ್ನಪ್ಪಿದ 50 ಶವಗಳನ್ನು ಸಾಮೂಹಿಕ ಅಂತ್ಯ ಸಂಸ್ಕಾರ ನಡೆಸಲಾಗಿತ್ತು. ಇಂತಹ ಘಟನೆ ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮರುಕಳಿಸಿದೆ.

Advertisement

ಇಂದು( ಏ.30, ಶುಕ್ರವಾರ) ನಗರ ತಾವರೆಕೆರೆಯಲ್ಲಿ ಏಕಕಾಲದಲ್ಲಿ 26 ಮೃತ ದೇಹಗಳಿಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಒಂದರ ಪಕ್ಕದಲ್ಲೊಂದು ಹೆಣಗಳನ್ನಿಟ್ಟು ಅಂತ್ಯ ಸಂಸ್ಕಾರ ನಡೆಸಲಾಗಿದೆ. ಇತ್ತ ಇಂತಹದೇ ಘಟನೆ ಬೆಳಗಾವಿಯಲ್ಲಿಯೂ ನಡೆದಿದೆ. ಬಯಲು ಜಾಗದಲ್ಲಿ ಒಟ್ಟಿಗೆ ಏಳು ಶವಗಳ ಸಾಮೂಹಿಕ ಅಂತ್ಯ ಸಂಸ್ಕಾರ ನಡೆಸಲಾಗಿದೆ.

ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್‍ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್‍ಗೆ ಬಲಿಯಾದವರ ಮೃತ ದೇಹಗಳನ್ನು ತೆಗೆದುಕೊಂಡು ಹೋಗಲು ಸಂಬಂಧಿಕರು ಮುಂದಾಗುತ್ತಿಲ್ಲವಂತೆ. ಈ ಕಾರಣಕ್ಕಾಗಿ ಸರ್ಕಾರದ ವತಿಯಿಂದಲೇ ಅಂತ್ಯ ಸಂಸ್ಕಾರ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next