Advertisement
ಸರ್ಕಾರದ ಪ್ರಮುಖ ಇಲಾಖೆಗಳು ಮಾತ್ರವಲ್ಲದೆ, ಮುಖ್ಯಮಂತ್ರಿ, ಸಚಿವರ ಸುತ್ತಮುತ್ತ ಇರುವ ಅಧಿಕಾರಿಗಳಲ್ಲೂ ನಿವೃತ್ತ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ಸಂಪುಟ ಸಭೆಯಲ್ಲೂ ನಿವೃತ್ತ ಅಧಿಕಾರಿಗಳನ್ನು ಗುತ್ತಿದೆ ಆಧಾರದ ಮೇಲೆ ಮುಂದುವರಿಸುವ ಕುರಿತು ತೀರ್ಮಾನ ಕೈಗೊಳ್ಳುವುದು ಸಾಮಾನ್ಯ ಎನ್ನುವಂತಾಗಿದೆ.
Related Articles
Advertisement
ವಿಶೇಷ ಎಂದರೆ ನಿವೃತ್ತ ಅಧಿಕಾರಿಗಳ ನೇಮಕಾತಿ ಆಯಾ ಸರ್ಕಾರದಲ್ಲಿ ಅಧಿಕಾರದಲ್ಲಿರುವವರಿಗೆ ಹತ್ತಿರವಾದ ಅಧಿಕಾರಿಗಳಿಗೆ ಸೀಮಿತವಾಗುತ್ತಿದೆ. ನಿವೃತ್ತ ಅಧಿಕಾರಿಗಳಲ್ಲಿ ತಮಗೆ ಯಾರು ಬೇಕೋ ಅವರನ್ನು ನೇಮಿಸಿಕೊಳ್ಳಲಾಗುತ್ತದೆ. ಹೀಗಾಗಿ ಹಿಂದಿನ ಸರ್ಕಾರದಲ್ಲಿ ನೇಮಕಗೊಂಡ ಕೆಲವು ಅಧಿಕಾರಿಗಳು ಈಗಾಗಲೇ ಮನೆಗೆ ತೆರಳಿದ್ದು, ಅವರ ಸ್ಥಾನಕ್ಕೆ ಹೊಸ ನಿವೃತ್ತ ಅಧಿಕಾರಿಗಳು ಬರುತ್ತಿದ್ದಾರೆ. ಆದರೆ, ಇಲಾಖೆಗಳಲ್ಲಿ ಈ ಹಿಂದಿನ ಸರ್ಕಾರದಲ್ಲಿ ನೇಮಕಗೊಂಡವರೇ ಮುಂದುವರಿದಿದ್ದಾರೆ.
ಸುತ್ತೋಲೆ ನಂತರ ಹೆಚ್ಚಿದ ನೇಮಕ:ರಾಜ್ಯದಲ್ಲಿ ನಿವೃತ್ತ ನೌಕರರ ನೇಮಕ ಹೆಚ್ಚಾಗುತ್ತಿರುವುದರಿಂದ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಮೇಲಾಗಿ ಈ ರೀತಿ ನಿವೃತ್ತ ನೌಕರರನನ್ನು ಪ್ರಮುಖ ಹುದ್ದೆಗಳಲ್ಲಿ ಮುಂದುವರಿಸುವುದು ನಿಯಮಾವಳಿಗೆ ವಿರುದ್ಧ ಎಂಬ ಕಾರಣಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ 2016ರ ಫೆಬ್ರವರಿಯಲ್ಲಿ ಎಲ್ಲಾ ಇಲಾಖೆಗಳಿಗೆ ಸುತ್ತೋಲೆಯೊಂದನ್ನು ಹೊರಡಿಸಿ, ನಿವೃತ್ತಿ ಹೊಂದಿದ ನೌಕರರನ್ನು ಮರುನೇಮಕ ಮಾಡಿಕೊಳ್ಳುವಂತಿಲ್ಲ. ಅದೇ ರೀತಿ ನಿವೃತ್ತಿ ನಂತರ ಪುನರ್ ನೇಮಕದ ಆಧಾರದಲ್ಲಿ ಸೇವೆಯಲ್ಲಿ ಮುಂದುವರಿಯುವ ನೌಕರರನ್ನು ಅವಶ್ಯಕತೆ ಇಲ್ಲದಿದ್ದರೆ ತಕ್ಷಣ ಸೇವೆಯಿಂದ ಮುಕ್ತಗೊಳಿಸಬೇಕು. ಖಾಲಿ ಹುದ್ದೆಗಳನ್ನು ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ತುಂಬಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತ್ತು. ಆದರೆ, ಈ ಸುತ್ತೋಲೆ ನಂತರ ನಿವೃತ್ತ ನೌಕರರ ನೇಮಕಾತಿ ಹೆಚ್ಚಾಗಿದೆ. ನಿವೃತ್ತರ ನೇಮಕಕ್ಕೆ ಕಾರಣಗಳು
– ರಾಜ್ಯ ಸರ್ಕಾರದಲ್ಲಿ ಒಟ್ಟು 84 ಇಲಾಖೆಗಳಿದ್ದು, 6,96,242 ಮಂಜೂರಾದ ಹುದ್ದೆಗಳಿವೆ. ಇದರಲ್ಲಿ ಸುಮಾರು 2.2 ಲಕ್ಷ ಹುದ್ದೆಗಳು ಖಾಲಿ ಇವೆ. ಇವು ಭರ್ತಿಯಾಗದೆ ಎಲ್ಲಾ ಕಡೆ ಸಿಬ್ಬಂದಿ ಕೊರತೆ ಇದೆ.
– ಹಲವು ವರ್ಷಗಳಿಂದ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ನೇಮಕಾತಿ ಸರಿಯಾಗದೆ ಆಯಕಟ್ಟಿನ ಹುದ್ದೆಗಳು ಖಾಲಿ ಇವೆ. ಈ ಕೆಲಸಗಳನ್ನು ಹೊರಗುತ್ತಿಗೆ ಸಿಬ್ಬಂದಿಯಿಂದ ಮಾಡಿಸಲು ಸಾಧ್ಯವಿಲ್ಲ.
– ನಿವೃತ್ತ ನೌಕರರಿಗೆ ನಿಗದಿಪಡಿಸುವ ವೇತನದಲ್ಲಿ ಅವರ ಪಿಂಚಣಿ ಕಳೆದು ಉಳಿದ ಮೊತ್ತವನ್ನು ಪಾವತಿಸಬೇಕು. ಹೀಗಾಗಿ ಸರ್ಕಾರಕ್ಕೆ ಆರ್ಥಿಕವಾಗಿಯೂ ಲಾಭವಾಗುತ್ತದೆ ಮತ್ತು ಅನುಭವಿ ಅಧಿಕಾರಿಗಳು ಸಿಗುತ್ತಾರೆ. ಅನುಭವಿಗಳ ಕೊರತೆ
ಸರ್ಕಾರಿ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಎಂಬುದಕ್ಕಿಂತಲೂ ಅನುಭವಿ ಮತ್ತು ಕೆಲಸದ ನೈಪುಣ್ಯತೆ ಹೊಂದಿರುವ ಸಿಬ್ಬಂದಿ ಸಮಸ್ಯೆ ಇದೆ. ಕೆಲವು ಹುದ್ದೆಗಳಲ್ಲಿ ದೈಹಿಕ ಶ್ರಮಕ್ಕಿಂತ ಬುದ್ಧಿಗೆ ಸಂಬಂಧಿಸಿದ ಕೆಲಸಗಳು ಹೆಚ್ಚು. ಇಂತಹ ಹುದ್ದೆಗಳಿಗೆ ನಿವೃತ್ತರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆಯೇ ಹೊರತು ಬೇರೆ ಯಾವುದೇ ಕಾರಣ ಇಲ್ಲ ಎನ್ನುತ್ತಾರೆ ಇಲಾಖೆಯೊಂದರ ಪ್ರಧಾನ ಕಾರ್ಯದರ್ಶಿಯವರು. – ಎಂ. ಪ್ರದೀಪ್‌ಕುಮಾರ್