Advertisement

Maharashtra ಬಸ್‌ ದುರಂತ: 24 ಮೃತದೇಹಗಳ ಸಾಮೂಹಿಕ ಅಂತ್ಯಸಂಸ್ಕಾರ

08:40 PM Jul 02, 2023 | Team Udayavani |

ನಾಗ್ಪುರ: ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ನಡೆದ ಬಸ್‌ ದುರಂತದಲ್ಲಿ ಸಜೀವ ದಹನಗೊಂಡ 25 ಜನರ ಪೈಕಿ 24 ಜನರ ಮೃತದೇಹಗಳ ಸಾಮೂಹಿಕ ಅಂತ್ಯಸಂಸ್ಕಾರವನ್ನು ಭಾನುವಾರ ನಡೆಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಗುರುತಿಸಲು ಸಾಧ್ಯವಾಗದಷ್ಟು ಮೃತದೇಹಗಳು ಸುಟ್ಟು ಕರಲಾಗಿವೆ. ಡಿಎನ್‌ಎ ಪರೀಕ್ಷೆಯು ಸುದೀರ್ಘ‌ ಪ್ರಕ್ರಿಯೆಯಾಗಿದೆ. ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದರೆ ಅಂತ್ಯಸಂಸ್ಕಾರಕ್ಕಾಗಿ ಹಲವು ದಿನಗಳು ಕಾಯಬೇಕಾಗುತ್ತದೆ. ಈ ಬಗ್ಗೆ ಕುಟುಂಬಗಳಿಗೆ ಮನವರಿಕೆ ಮಾಡಲಾಗಿದೆ. ಒಂದು ಮೃತದೇಹವನ್ನು ಮಾತ್ರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಬುಲ್ಧಾನಾ ಜಿಲ್ಲಾಧಿಕಾರಿ ಎಚ್‌.ಪಿ.ತುಮ್ಮೊದ್‌ ಹೇಳಿದ್ದಾರೆ.

ವಿದರ್ಭ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್‌ ನಾಗ್ಪುರ-ಮುಂಬೈ “ಸಮೃದ್ಧಿ ಎಕ್ಸ್‌ಪ್ರೆಸ್‌ ವೇ”ನಲ್ಲಿ ಸಂಚರಿಸುತ್ತಿತ್ತು. ಶುಕ್ರವಾರ ತಡರಾತ್ರಿ 1.30ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಬಸ್‌ ಹೆದ್ದಾರಿಯ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಕೂಡಲೇ ಇಡೀ ಬಸ್‌ ಹೊತ್ತಿ ಉರಿದಿದೆ. ಘಟನೆಯಲ್ಲಿ ಒಟ್ಟು 25 ಮಂದಿ ಅಸುನೀಗಿದ್ದಾರೆ. ಚಾಲಕ, ಕ್ಲೀನರ್‌ ಸೇರಿ ಒಟ್ಟು ಎಂಟು ಮಂದಿ ಪಾರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಮೃತರ ಕುಟುಂಬಗಳಿಗೆ ಮಹಾರಾಷ್ಟ್ರ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next