Advertisement
ಪ್ರಧಾನಿ ಮೋದಿಯವರು ಇತ್ತೀಚೆಗೆ ಕರೆ ನೀಡಿ ಎಲ್ಲರೂ ಮಾಸ್ಕ್ ಧರಿಸಲು ಮನವಿ ಮಾಡಿದ್ದರು. ಮನೆಯಲ್ಲೇ ತಯಾರಿಸಿದ ಮಾಸ್ಕ್ ಧರಿಸಲು ಪ್ರಧಾನಿಯವರು ಪ್ರೋತ್ಸಾಹಿಸಿದ್ದರು. ಆದರೆ, ಅನೇಕರು ಇಂದಿಗೂ ಅಂಗಡಿಯಿಂದಲೇ ದುಬಾರಿ ಬೆಲೆ ಕೊಟ್ಟು ಮಾಸ್ಕ್ ಖರೀದಿಸಿ, ಧರಿಸಿ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಎನ್-95 ಸಹಿತವಾಗಿ ವೈರಸ್ ತಡೆಯುವ ಕೆಲವು ಬಗೆಯ ಮಾಸ್ಕಗ ಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ, ಜನ ಸಾಮಾನ್ಯರಲ್ಲಿ ಬಹುತೇಕರು ನಿತ್ಯದ ಓಡಾಟಕ್ಕೂ ಇದೇ ಮಾಸ್ಕ್ ಬಳಸುತ್ತಿದ್ದಾರೆ.
Related Articles
Advertisement
ಇಷ್ಟೆಲ್ಲದರ ನಡುವೆಯೂ ನಗರದ ಕಸದ ರಾಶಿಯಲ್ಲಿ ಮಾಸ್ಕ್ಗಳು ರಾರಾಜಿಸುತ್ತಿವೆ. ನಿತ್ಯವು ಬಿಡಾಡಿ ಹಸುಗಳು ಕಸದ ರಾಶಿಯಲ್ಲಿರುವ ಮಾಸ್ಕ್ಗಳನ್ನು ತಿನ್ನುತ್ತಿವೆ. ಈ ವಾತಾವರಣವು ಹಸುಗಳ ಆರೋಗ್ಯದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಕೂಲ ಪರಿಣಾಮ ಬೀರಲಾಗುತ್ತಿದೆ ಎಂದು ಹೇಳಾಗುತ್ತಿದೆ.
ಸಾರ್ವಜನಿಕರಿಗೆ ಜಾಗೃತಿ ಅಗತ್ಯ : ವೈದ್ಯರು, ವೈದ್ಯಕೀಯ ಸಿಬ್ಬಂದಿ, ದಾದಿಯರು ಅಥವಾ ಆಶಾ ಕಾರ್ಯಕರ್ತೆಯರು ಬಳಸುವ ಮಾಸ್ಕ್ಗಳು ವ್ಯವಸ್ಥಿತ ವಿಲೇವಾರಿ ಯಾಗುತ್ತಿದೆ. ಆದರೆ, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಬಳಸಬೇಕಿರುವ ಮಾಸ್ಕ್ಗಳನ್ನು ಜನ ಸಾಮಾನ್ಯರು ಉಪ ಯೋಗಿಸಿ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇದು ನಿಲ್ಲಬೇಕು. ಕೋವಿಡ್ 19 ಸೋಂಕಿತರನ್ನು ಉಪಚರಿಸುವ, ಚಿಕಿತ್ಸೆ ನೀಡು ವ ವರ್ಯಾರು ಕೂಡ ಮಾಸ್ಕ್ ಅಥವಾ ಪಿಪಿಇ ಕಿಟ್‌ಗಳನ್ನು ಎಲ್ಲಿ ಯಂದರಲ್ಲಿ ಎಸೆಯುವುದಿಲ್ಲ. ಅದಕ್ಕಿರುವ ನಿಯಮಗಳನ್ನು ಸಮರ್ಪ ಕವಾಗಿ ಪಾಲನೆ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ಸಾರ್ವ ಜನಿಕರೇ ಇನ್ನಷ್ಟು ಜಾಗೃತರಾಗುವ ಅಗತ್ಯವಿದೆ ಎಂದು ವಿವರಿಸಿದರು.
ಬಿಡಾಡಿ ಪಶುಗಳ ರಕ್ಷಣೆ : ರಾಜ್ಯದಲ್ಲಿ ಹಸು ಸಹಿತವಾಗಿ ಯಾವುದೇ ಪ್ರಾಣಿಗೆ ಕೊರೊನಾ ಬಂದಿರುವ ಬಗ್ಗೆ ವರದಿಯಾಗಿಲ್ಲ. ಮಾಸ್ಕ್ಗಳನ್ನು ಬಿಡಾಡಿ ಹಸುಗಳು ತಿನ್ನುತ್ತಿರುವ ಬಗ್ಗೆ ಮಾಹಿತಿಯಿದೆ.ಆದರೆ, ಸಾರ್ವಜನಿಕರು ಕೂಡ ಉಪಯೋಗಿಸಿದ ಮಾಸ್ಕ್ಗಳನ್ನು ಎಲ್ಲಿಯಂದರಲ್ಲಿ ಎಸೆಯದೇ ಸಮರ್ಪಕ ವಿಲೇವಾರಿ ಮಾಡಬೇಕು. ಪ್ರಾಣಿಗಳ ಆರೋಗ್ಯದ ಹಿತ ರಕ್ಷಣೆಗಾಗಿ ಹೊರಡಿಸಿರುವ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಬಿಡಾಡಿ ಹಸುಗಳ ಬಗ್ಗೆ ಹೆಚ್ಚಿನ ಜಾಗೃತಿ ವಹಿಸುತ್ತಿದ್ದೇವೆ ಎಂದು ಪಶುಸಂಗೋಪಾನ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.