Advertisement

Maski: ಮಾಂಸದೂಟ ಸೇವಿಸಿ ಮೂವರು ಅಸ್ವಸ್ಥ

03:57 PM Oct 15, 2024 | Team Udayavani |

ಮಸ್ಕಿ: ದೇವರ ಕಾರ್ಯಕ್ಕೆ ಮಾಡಿದ ಮಾಂಸದ ಊಟ ಸೇವಿಸಿ ಒಂದೇ ಕುಟುಂಬದಲ್ಲಿ ಮೂವರು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಮಾರಲದಿನ್ನಿ ತಾಂಡಾದಲ್ಲಿ ಅ.15ರ ಮಂಗಳವಾರ ನಡೆದಿದೆ.

Advertisement

ಶಿವು ಸರ್ಕಾರ (40) ಸುಮಿತ್ರಾ (37) ಅಜಯ (14) ಅಸ್ವಸ್ಥರಾದವರು.

ದಸರಾ ಹಬ್ಬದ ನಿಮಿತ್ತ ನಡೆದ ದುರ್ಗಾದೇವಿ ಜಾತ್ರೆಯ ಅಂಗವಾಗಿ ಮನೆಯಲ್ಲಿ ಮಾಂಸದೂಟ ಮಾಡಿದ್ದರು. ಜಾತ್ರೆಯ ಮರುದಿನ ಸಂಜೆ ಮಾಂಸದ ಅಡುಗೆ ಮಾಡಿದ್ದು, ಊಟ ಸೇವಿಸಿ ಮಲಗಿದ್ದರು.

ಬೆಳಿಗ್ಗೆ ಏಳಲು ಆಗದೇ ತಲೆ ತಿರುಗಿ ಬಿದ್ದು, ವಾಂತಿಯಾಗಿ ಒಂದೇ ಕುಟುಂಬದಲ್ಲಿ ಮೂವರು ಅಸ್ವಸ್ಥರಾಗಿದ್ದಾರೆ. ಗ್ರಾಮಸ್ಥರ ಸಹಕಾರದಿಂದ ಲಿಂಗಸೂಗೂರಿನ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ‌.

Advertisement
Advertisement

Udayavani is now on Telegram. Click here to join our channel and stay updated with the latest news.

Next