Advertisement

ಶಾಲೆಯಿಂದ ಮನೆಗೆ ಬರುತ್ತಿದ್ದ ವಿದ್ಯಾರ್ಥಿನಿಯ ಬರ್ಬರ ಹತ್ಯೆ : ಕಾರಣ ನಿಗೂಢ

08:04 PM Feb 25, 2022 | Team Udayavani |

ಮಸ್ಕಿ : ವಿದ್ಯಾರ್ಥಿನಿಯನ್ನು ಚಾಕುವಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಪಟ್ಟಣದ ಸಾನಬಾಳ ರಸ್ತೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.

Advertisement

ಕೊಲೆಯಾದ ವಿದ್ಯಾರ್ಥಿನಿ ಭೂಮಿಕಾ (15) ಎಂದು ಗುರುತಿಸಲಾಗಿದೆ.

ಪಟ್ಟಣದ ಕವಿತಾಳ ರಸ್ತೆಯ ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಶಾಲೆ ಬಿಟ್ಟ ನಂತರ ಮನೆಗೆ ತೆರಳುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಪಿಎಸ್ ಐ ಸಿದ್ಧರಾಮ ಬಿದರಾಣಿ ಭೇಟಿ ನೀಡಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.

ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಇದನ್ನೂ ಓದಿ : ಪ್ರಾಧಿಕಾರದಿಂದ ಮಲತಾಯಿ ಧೋರಣೆ : ನೆಲಕಚ್ಚಿದ ಆನೆಗೊಂದಿ ಪ್ರವಾಸೋದ್ಯಮ 

Advertisement

Udayavani is now on Telegram. Click here to join our channel and stay updated with the latest news.

Next