Advertisement

ಮಸ್ಕಿ ಉಪ ಚುನಾವಣೆಗೆ ಮತ್ತೆ ಸೂತ್ರ ಸಿದ್ಧ!

03:47 PM Jan 02, 2021 | Team Udayavani |

ಮಸ್ಕಿ: ಗ್ರಾಪಂ ಚುನಾವಣೆ ಘೋಷಣೆ ಬಳಿಕ ತಣ್ಣಗಾಗಿದ್ದ ಉಪಚುನಾವಣೆ ಕಾವುಈಗ ಮತ್ತೆ ಶುರುವಾಗಿದೆ. ಇನ್ನೊಂದು ವಾರೊಪ್ಪತ್ತಿನಲ್ಲೇ ಚುನಾವಣೆ ಘೋಷಣೆಸೂಚನೆ ಹಿನ್ನೆಲೆಯಲ್ಲಿ ಎರಡು ಪಕ್ಷಗಳು ಮತ್ತೆ ರಾಜಕೀಯ ದಾಳ ಉರುಳಿಸಲಾರಂಭಿಸಿವೆ. ಇನ್ನೇನು ಉಪಚುನಾವಣೆ ಘೋಷಣೆಯಾಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದ ರಾಜಕೀಯ ಪಕ್ಷಗಳು ಮಸ್ಕಿ ಕ್ಷೇತ್ರದಲ್ಲಿ ಬಿರುಸಿನ ಸಂಚಾರ ಆರಂಭಿಸಿದ್ದವು. ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದವು.

Advertisement

ಚುನಾವಣೆಗೆ ಸ್ಪರ್ಧೆ ಮಾಡುವವರು, ಅವರ ಹಿಂಬಾಲಕರು ಅಂತಿದಿತ್ತ, ಇತ್ತಿಂದತ್ತ ಪಕ್ಷಾಂತರ ಶುರು ಮಾಡಿದ್ದರು. ಅಲ್ಲದೇ ಜೆಡಿಎಸ್‌ನಾಯಕರಿಗೂ ಗಾಳ ಹಾಕಲಾಗಿತ್ತು. ಆದರೆಗ್ರಾಪಂ ಚುನಾವಣೆ ಘೋಷಣೆಯಿಂದ ಈಚಟುವಟಿಕೆಗಳಿಗೆ ಬ್ರೇಕ್‌ ಬಿದ್ದಿತ್ತು. ಆದರೀಗ ಮತ್ತೆ ಕಳೆದೆರಡು ದಿನಗಳಿಂದ ವಿಧಾನಸಭೆಚುನಾವಣೆಗೆ ತಾಲೀಮು ಆರಂಭವಾಗಿದೆ.

ಗ್ರಾಪಂ ಸದಸ್ಯ ಸ್ಥಾನಗಳಿಗೆ ಗೆದ್ದ ಅಭ್ಯರ್ಥಿಗಳ ತಲೆ ಎಣಿಕೆ ಮೂಲಕವೇ ಮುಂದಿನ ಬೈಎಲೆಕ್ಷನ್‌ ಸೂತ್ರ ಸಿದ್ಧಪಡಿಸುತ್ತಿದ್ದಾರೆ.ಕಾಂಗ್ರೆಸ್‌, ಬಿಜೆಪಿ ಎರಡು ಪಕ್ಷದವರುಇಂತಹ ಲೆಕ್ಕಾಚಾರಕ್ಕೆ ಇಳಿದಿದ್ದಾರೆ.ಬಲಾಬಲ ಎಣಿಕೆ: ಮಸ್ಕಿ ತಾಲೂಕಿನ ಒಟ್ಟು21 ಗ್ರಾಪಂಗಳ ಪೈಕಿ 17 ಗ್ರಾಪಂಗಳಿಗೆಚುನಾವಣೆ ನಡೆದಿತ್ತು. ಒಟ್ಟು 345 ಸದಸ್ಯ ಸ್ಥಾನಗಳ ಪೈಕಿ 51 ಸ್ಥಾನಕ್ಕೆ ಅವಿರೋಧಆಯ್ಕೆ ನಡೆದಿತ್ತು. ಇನ್ನು 294 ಸ್ಥಾನಗಳಿಗೆ ಚುನಾವಣೆ ನಡೆದು ಫಲಿತಾಂಶವೂ ಹೊರಬಿದ್ದಿದೆ. ಗೆದ್ದು ಬಂದ ಅಭ್ಯರ್ಥಿಗಳು ಯಾವ ಪಕ್ಷದ ಬೆಂಬಲಿತರು?, ಯಾವ ಪಕ್ಷದಲ್ಲಿ ಗುರುತಿಸಿಕೊಳ್ಳುತ್ತಾರೆ? ಎನ್ನುವ ಲೆಕ್ಕಾಚಾರಗಳು ರಾಜಕೀಯ ವಲಯದಲ್ಲಿ ನಡೆಯುತ್ತಿವೆ.

ಪಂಚಾಯಿತಿ ಎಲೆಕ್ಷನ್‌ನಲ್ಲಿ ಗೆದ್ದ ಬಹುತೇಕರು ಎರಡು ಪಾರ್ಟಿಯಲ್ಲಿ ಓಡಾಡಿದ್ದಾರೆ. ಎರಡು ಕಡೆಯಿಂದಲೂ ಹಾರ-ತುರಾಯಿ ಹಾಕಿಸಿಕೊಳ್ಳುತ್ತಿದ್ದಾರೆ. ಇದನ್ನೇ ಆಧಾರವಾಗಿಟ್ಟುಕೊಂಡು ಕಾಂಗ್ರೆಸ್‌- ಬಿಜೆಪಿ ಎರಡು ಕಡೆಯವರು ತಮ್ಮ ಬೆಂಬಲಿತ ಅಭ್ಯರ್ಥಿಗಳು ಎಂದು ಬಿಂಬಿಸಲು ಶುರುಮಾಡಿದ್ದಾರೆ. ಕಾಂಗ್ರೆಸ್‌ ಬೆಂಬಲಿತರು 224ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದಿದ್ದಾರೆಎಂದು ಬ್ಲಾಕ್‌ ಕಾಂಗ್ರೆಸ್‌ ಘೋಷಿಸುತ್ತಿದ್ದರೆ,ಬಿಜೆಪಿಯವರು ಒಂದು ಹೆಜ್ಜೆ ಮುಂದೆಹೋಗಿ 300 ಸ್ಥಾನಗಳಿಗೂ ಅಧಿಕ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿತರೇ ಗೆದ್ದಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಅಂಕಿಸಂಖ್ಯೆ ಸ್ವತಃ ಆಯಾ ಪಕ್ಷದ ನಾಯಕರಲ್ಲೇ ಗೊಂದಲ ಮೂಡಿಸುವಂತಿದೆ.

ತಾಲೀಮು ಆರಂಭ: ಪಂಚಾಯಿತಿ ಅಂಕಿಸಂಖ್ಯೆ ಮೂಲಕವೇ ಹಳ್ಳಿಪ್ರವೇಶಿಸುತ್ತಿರುವ ಎರಡು ಪಕ್ಷದನಾಯಕರು ಈಗ ಬೈ ಎಲೆಕ್ಷನ್‌ ತಾಲೀಮುಆರಂಭಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿಉಪಚುನಾವಣೆ ಘೋಷಣೆಯಾಗುತ್ತದೆಎನ್ನುವ ನಿರೀಕ್ಷೆಯಿಂದ ಈಗ ಅಬ್ಬರದ ಪ್ರಚಾರ ಮಾಡಲಾಗುತ್ತಿದೆ.ಪಂಚಾಯಿತಿಯಲ್ಲಿ ಗೆದ್ದ ಅಭ್ಯರ್ಥಿಗಳನ್ನುಮಾತ್ರವಲ್ಲದೆ, ಸೋತ ಅಭ್ಯರ್ಥಿಗಳತಲೆ ಎಣಿಕೆ ಮೂಲಕ ಮತ ಲೆಕ್ಕಾಚಾರಶುರುವಾಗಿದೆ. ಸೋತ ಅಭ್ಯರ್ಥಿ ಅಂತರ ಗಮನಿಸಿ ಎರಡು ಪಕ್ಷದಿಂದ ಸೆಳೆಯುವ ಪ್ರಯತ್ನ ನಡೆದಿದೆ.

Advertisement

ಒಟ್ಟಿನಲ್ಲಿ ಚುನಾವಣೆಯಲ್ಲಿ ಹೆಚ್ಚು ಆಸಕ್ತಿತೋರದೇ ಅಂತರ ಕಾಯ್ದುಕೊಂಡಿದ್ದ ಎರಡುಪಕ್ಷದ ನಾಯಕರು ಈಗ ಫಲಿತಾಂಶದ ಬಳಿಕನಾ ಮೇಲು, ತಾ ಮೇಲು ಎನ್ನುತ್ತಿರುವುದುಅಚ್ಚರಿ ಮೂಡಿಸಿದ್ದು, ಚುನಾವಣೆಘೋಷಣೆ ಬಳಿಕ ಇನ್ನೇನು ಬೆಳವಣಿಗೆ ನಡೆಯಲಿವೆಯೋ? ಕಾದು ನೋಡಬೇಕಿದೆ

ತುರುವಿಹಾಳದಲ್ಲಿ ಬಿಜೆಪಿ ಕಚೇರಿ ಆರಂಭ :

ಯಾವುದೇ ರಾಜಕೀಯ ಪಕ್ಷದ ಕಚೇರಿಗಳು ತಾಲೂಕು ಕೇಂದ್ರದಲ್ಲಿ ಕಚೇರಿ ಆರಂಭಿಸುವುದುಂಟು. ಆದರೆ ಈ ಬಾರಿ ಉಪಚುನಾವಣೆ ಬಾಕಿ ಇರುವಾಗಲೇ ಬಿಜೆಪಿ ಪಕ್ಷ ತುರುವಿಹಾಳ ಹೋಬಳಿ ಕೇಂದ್ರದಲ್ಲೂ ಪ್ರತ್ಯೇಕ ಕಚೇರಿ ಆರಂಭಿಸಿದೆ. ಕಾಂಗ್ರೆಸ್‌ ಅಭ್ಯರ್ಥಿ ಆರ್‌. ಬಸನಗೌಡ ತವರಾದ ಈ ಗ್ರಾಮದಿಂದಲೇ ಬಿಜೆಪಿ ಮತ ಸೆಳೆಯುವ ಕಸರತ್ತು ಆರಂಭಿಸಿದೆ ಎನ್ನಲಾಗುತ್ತಿದೆ.

 

-ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next