Advertisement

ಮತದಾರರಿಗೆ ಮಾಸ್ಕ್, ಮಾತ್ರೆ ಗಿಫ್ಟ್!

01:16 AM Oct 06, 2020 | mahesh |

ಹೈದರಾಬಾದ್‌: ಚುನಾವಣೆಗಳಲ್ಲಿ ಮತದಾರರಿಗೆ ವಿವಿಧ ರಾಜಕೀಯ ಪಕ್ಷಗಳು ಸರಾಯಿ, ಬಿರಿಯಾನಿಯನ್ನು ಹಂಚುವುದು ವಾಡಿಕೆ. ಹೈದರಾಬಾದ್‌ ಮಹಾನಗರ ಪಾಲಿಕೆಗೆ ಇತ್ತೀಚೆಗೆ ಚುನಾವಣೆ ಘೋಷಣೆಯಾಗಿದ್ದು ಅಲ್ಲೀಗ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿವೆ. ಹೇಳಿಕೇಳಿ ಮೊದಲೇ ಕೋವಿಡ್ ಬಿಕ್ಕಟ್ಟು ಇನ್ನೂ ಅಸ್ತಿತ್ವದಲ್ಲಿರುವುದರಿಂದ ಅಲ್ಲಿನ ರಾಜಕೀಯ ಪಕ್ಷಗಳು ಮತದಾರರಿಗೆ ಉಚಿತವಾಗಿ ಫೇಸ್‌ ಮಾಸ್ಕ್ಗಳನ್ನು, ಪ್ಯಾರಾಸಿಟಮಲ್‌ ಮಾತ್ರೆಗಳು, ವಿಟಮಿನ್‌ ಮಾತ್ರಗಳು ಹಾಗೂ ಮೊಟ್ಟೆಗಳನ್ನು ನೀಡುವ ಹೊಸ ಚಾಳಿ ಆರಂಭಿಸಿದ್ದಾರೆ. ಚುನಾವಣೆ ಮುಗಿಯುವುದರೊಳಗೆ ಪ್ರತಿ ಮನೆಗೂ ಈ ಉಚಿತ ವಸ್ತುಗಳ ಪ್ಯಾಕೇಜ್‌ ಕನಿಷ್ಠ ಮೂರು ಬಾರಿಯಾದರೂ ತಲುಪುತ್ತದೆ ಎಂದು ಕೆಲ ಪಕ್ಷಗಳ ಕಾರ್ಯಕರ್ತರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next