Advertisement

ಮಾಸ್ಕ್, ಆಕ್ಸಿಮೀಟರ್‌ ವಿತರಣೆ

07:46 PM Jul 05, 2021 | Team Udayavani |

ಬೇಲೂರು: ತಾಲೂಕಿನ ಅರೇಹಳ್ಳಿಸಮುದಾಯ ಆರೋಗ್ಯ ಕೇಂದ್ರದಸಿಬ್ಬಂದಿಗೆ ತಾಲೂಕು ಭಾರತೀಯರೆಡ್‌ಕ್ರಾಸ್‌ ಘಟಕದಿಂದ ಮಾಸ್ಕ್,ಆಕ್ಸಿಮೀಟರ್‌, ಮಿನರಲ್‌ ವಾಟರ್‌ಸೇರಿದಂತೆ ಮಧ್ಯಾಹ್ನದ ಲಘುಉಪಾಹಾರ ವಿತರಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ರೆಡ್‌ಕ್ರಾಸ್‌ ಘಟಕದ ತಾಲೂಕು ಸಭಾಪತಿ ರವಿಕುಮಾರ್‌, ಕೊರೊನಾ ಸಂದರ್ಭ ತಮ್ಮ ಆರೋಗ್ಯದ ಹಂಗು ತೊರೆದು ಸೋಂಕಿತರಕುಟುಂಬದವರು ಮಾಡದ ಕೆಲಸವನ್ನುಆರೋಗ್ಯ ಇಲಾಖೆ ಸಿಬ್ಬಂದಿ ಸೈನಿಕರಂತೆಕರ್ತವ್ಯ ನಿರ್ವಹಿಸುವ ಮೂಲಕ ಸೇವೆಸಲ್ಲಿಸುತಿದ್ದು, ಅವರ ಸೇವೆಗೆ ನಮ್ಮಸಂಸ್ಥೆಯಿಂದ ಅಳಿಲು ಸೇವೆ ಮಾಡುತಿದ್ದೇವೆ ಎಂದರು.

ಅರೇಹಳ್ಳಿಯಸಮಾಜ ಸೇವಕಿ ಚಂದ್ರಕಲಾ ಮಾತನಾಡಿ, ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಸಂಕಷ್ಟದ ಸಮಯದಲ್ಲಿ ನಿರಾಶ್ರಿತರಿಗೆ,ಅಂಗಕಲರಿಗೆ ಹಾಗೂ ರಕ್ತದ ಅವಶ್ಯಕತೆಇರುವವರಿಗೆ ಮತ್ತು ಆರೋಗ್ಯಕಾರ್ಯಕರ್ತರಿಗೆ ನೆರವು ನೀಡುತ್ತಿದ್ದು,ಸಂಸ್ಥೆಯ ಸೇವಾ ಮನೋಭಾವಮುಂದುವರಿಯಲಿ ಎಂದರು.

ಅರೇಹಳ್ಳಿ ಸಮುದಾಯ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ.ಮಮತಾ,ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಖಜಾಂಚಿ ಸೌಭಾಗ್ಯ, ಪ್ರಧಾನಕಾರ್ಯದರ್ಶಿ ಮಹೇಶ್‌, ನಿರ್ದೇಶಕರಾದರೇಣುಕಾ ಪ್ರಸಾದ್‌, ಗಿರೀಶ್‌,ನಿರಂಜನ್‌, ಆಸ್ಪತ್ರೆ ಸಿಬ್ಬಂದಿ ಮತ್ತುಆಶಾಕಾರ್ಯಕರ್ತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next