Advertisement

ಮಾಸ್ಕ್ ನಿರ್ಲಕ್ಷ್ಯ: ನಗರದಲ್ಲಿ 3,400 ರೂ. ದಂಡ ಸಂಗ್ರಹ

10:55 PM Sep 30, 2020 | mahesh |

ಮಹಾನಗರ: ನಗರದಲ್ಲಿ ಕೊರೊನಾ ಪ್ರಕರಣ ದಿನೇದಿನೇ ಹೆಚ್ಚು ತ್ತಿದ್ದರೂ ಕೋವಿಡ್‌ ನಿಯಮಾವಳಿಗಳನ್ನು ಪಾಲಿಸದವರಿಗೆ ದಂಡ ವಿಧಿಸುವ ಪ್ರಕ್ರಿಯೆ ಮುಂದುವರಿದಿದೆ. ಬುಧವಾರ ಮನಪಾ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸ್ವತಃ ಮೇಯರ್‌ ಮೇಯರ್‌ ದಿವಾಕರ್‌ ಪಾಂಡೇಶ್ವರ ಮತ್ತು ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ನಿಯಮ ಪಾಲಿಸದವರಿಗೆ ದಂಡದ ಎಚ್ಚರಿಕೆ ನೀಡಿದ್ದಾರೆ.

Advertisement

ಕೋವಿಡ್‌-19 ಹರಡುವಿಕೆ ತಡೆಯಲು ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡ ುವವರಿಗೆ, ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳಿಗೆ ಪಾಲಿಕೆಯಿಂದ 200 ರೂ. ದಂಡ ವಿಧಿಸಲಾಗುತ್ತಿದೆ. ನಿಯಮ ಪಾಲನೆ ಮಾಡದೇ ನಗರದ ಸೂಪರ್‌ ಮಾರ್ಕೆಟ್‌ವೊಂದರ ಬಳಿ ವ್ಯಾಪಾರದಲ್ಲಿ ತೊಡಗಿದ್ದವ ರಿಗೆ ದಂಡ ವಿಧಿಸಿ ಪರವಾನಿಗೆಯನ್ನು ವಶಪಡಿಸಿ ಕೊಳ್ಳಲಾಗಿದೆ.

ಪಾಲಿಕೆಯ ಆರೋಗ್ಯ ಇಲಾಖೆ ಅಧಿಕಾರಿ ಗಳು ಬುಧವಾರ ಕೂಳೂರು ವ್ಯಾಪ್ತಿ ಯಲ್ಲಿ ಕಾರ್ಯಾಚರಣೆ ನಡೆಸಿ ಮಾಸ್ಕ್ ಧರಿಸದವರಿಗೆ ಒಟ್ಟು 3,400 ರೂ. ದಂಡ ವಿಧಿಸಿದರು. ಹಲವು ದಿನಗಳಿಂದ ನಿಯಮ ಪಾಲನೆ ಮಾಡದವರಿಗೆ ದಂಡ ವಿಧಿಸಿ ಜಾಗೃತಗೊಳಿಸುವ ಕೆಲಸವನ್ನು ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ.

ಉಳ್ಳಾಲ: 2,700 ರೂ. ದಂಡ ಸಂಗ್ರಹ
ಉಳ್ಳಾಲ: ಉಳ್ಳಾಲ ನಗರಸಭೆ, ಸೋಮೇಶ್ವರ ಪುರಸಭೆ ಮತ್ತು ಕೋಟೆಕಾರು ಪಟ್ಟಣ ಪಂಚಾಯತ್‌ನಲ್ಲಿ ಕೋವಿಡ್‌ – 19 ನಿಯಮ ಉಲ್ಲಂಘಿಸಿದವರಿಂದ ಒಟ್ಟು 2,700 ರೂ. ದಂಡವನ್ನು ಸಂಗ್ರಹಿ ಸಲಾಗಿದೆ. ಬುಧವಾರ ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ 2,000ರೂ. ದಂಡ ವಸೂಲಿ ಯಾದರೆ ಸೋಮೇಶ್ವರ ಪುರಸಭೆ ವ್ಯಾಪ್ತಿ ಯಲ್ಲಿ 700 ರೂ. ಮತ್ತು ಕೋಟೆಕಾರು ಪ.ಪಂ. ವ್ಯಾಪ್ತಿಯಲ್ಲಿ ಕೋವಿಡ್‌ ತಪಾಸಣೆ ಹಿನ್ನೆಲೆಯಲ್ಲಿ ದಂಡ ವಸೂಲಿಯಾಗಲಿಲ್ಲ.

ಮೂಲ್ಕಿ: 11 ಮಂದಿಗೆ ದಂಡ
ಮೂಲ್ಕಿ: ಮೂಲ್ಕಿ ನಗರದಲ್ಲಿ ಬುಧವಾರ ಮಾಸ್ಕ್ ಧರಿಸದ ಸುಮಾರು 11 ಜನರಿಗೆ ದಂಡ ವಿಧಿಸಿ 2,200 ರೂ. ಮೊತ್ತವನ್ನು ಸಂಗ್ರಹಿಸಲಾಗಿದೆ ಎಂದು ಮುಖ್ಯಾಧಿಕಾರಿ ಪಿ. ಚಂದ್ರ ಪೂಜಾರಿ ತಿಳಿಸಿದ್ದಾರೆ.

Advertisement

ಕೂಳೂರು: 2,800 ರೂ. ದಂಡ ಸಂಗ್ರಹ
ಕೂಳೂರು: ಕೂಳೂರು ಜಂಕ್ಷನ್‌ನಲ್ಲಿ ಬುಧವಾರ ಮಾಸ್ಕ್ ಹಾಕದಿರುವ ಸಾರ್ವ ಜನಿಕರಿಗೆ, ಅಂಗಡಿ ಮಾಲಕರಿಗೆ ದಂಡ ವಿ ಧಿಸಿ ಉಚಿತ ಮಾಸ್ಕ್ ವಿತರಿಸಲಾಯಿತು. ಒಟ್ಟು 2,800 ರೂ. ದಂಡ ಸಂಗ್ರಹವಾಯಿತು. ಇದೇ ಸಂದರ್ಭ ಕೆಲವು ಹೊಟೇಲ್‌ಗ‌ಳ ಸ್ವತ್ಛತೆಯನ್ನು ಪರಿಶೀಲಿಸಲಾಯಿತು. ಕಾರ್ಯಾಚರಣೆಯಲ್ಲಿ ಸೀನಿಯರ್‌ ಹೆಲ್ತ್‌ ಇನ್‌ಸ್ಪೆಕ್ಟರ್‌ ಸುಶಾಂತ್‌, ಜೂನಿಯರ್‌ ಹೆಲ್ತ್‌ ಇನ್‌ಸ್ಪೆಕ್ಟರ್‌ ಅರುಣ್‌, ಸಂಜಯ್‌, ಕಿರಣ್‌, ರಕ್ಷಿತಾ ಹಾಗೂ ಹೆಲ್ತ್‌ ಸೂಪರ್‌ವೈಸರ್‌ ಪ್ರವೀಣ್‌, ನಿತಿನ್‌, ಯೋಗೀಶ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next