Advertisement

ಮಾಸ್ಕ್ ವಿತರಣೆಗೆ ಚಾಲನೆ

01:11 PM Apr 05, 2020 | Suhan S |

ಕುಣಿಗಲ್‌: ಕೋವಿಡ್ 19 ತಡೆಗಟ್ಟುವ ಮುಂಜಾಗ್ರತಾ ಕ್ರಮವಾಗಿ ಡಿಕೆಎಸ್‌ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ 3 ಸಾವಿರ ಲೀಟರ್‌ ಸ್ಯಾನಿಟೈಸರ್‌ ಹಾಗೂ ಒಂದು ಲಕ್ಷ ಮಾಸ್ಕ್ ವಿತರಣೆ ಮಾಡಲಾಗುತ್ತಿದೆ ಎಂದು ಸಂಸದ ಡಿ.ಕೆ. ಸುರೇಶ್‌ ತಿಳಿಸಿದರು.

Advertisement

ತಾಲೂಕು ಕಚೇರಿ ಎದುರು ಉಚಿತ ಮಾಸ್ಕ್, ಸ್ಯಾನಿಟೈಸರ್‌ ಬಾಟಲ್‌ ವಿತರಿಸಿ ಮಾತನಾಡಿ, ಕೋವಿಡ್ 19  ಸಂಬಂಧ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ.ಈ ನಿಟ್ಟಿನಲ್ಲಿ ತಾಲೂಕು ಆಡಳಿತ, ಆರೋಗ್ಯ ಇಲಾಖೆ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ 500 ಎಂ.ಎಲ್‌.ನ ಎರಡು ಸಾವಿರ ಹಾಗೂ 200 ಎಂ.ಎಲ್‌.ನ ಹತ್ತು ಸಾವಿರ ಸ್ಯಾನಿಟೈಸರ್‌ ಬಾಟಲಿ ಹಾಗೂ ಮಾಸ್ಕ್ ಪ್ರತಿ ಮನೆಗಳಿಗೆ ವಿತರಣೆ ಮಾಡಲಾಗುವುದು ಎಂದರು.

ಶಾಸಕ ಡಾ.ಎಚ್‌. ಡಿ.ರಂಗನಾಥ್‌, ಎಂಎಲ್‌ಸಿ ರವಿ, ತಹಶೀಲ್ದಾರ್‌ ವಿ.ಆರ್‌.ವಿಶ್ವನಾಥ್‌, ಡಿವೈಎಸ್‌ಪಿ ಜಗದೀಶ್‌, ಟಿಎಚ್‌ಒ ಡಾ.ಜಗದೀಶ್‌,ಪುರಸಭೆ ಸಿಒ ಆರ್‌.ರಮೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next