Advertisement

ನಾಗರಿಕರಿಗೆ ಮಾಸ್ಕ್ ವಿತರಣೆ

02:23 PM Apr 12, 2020 | mahesh |

ಅರಸೀಕೆರೆ: ನಗರಸಭೆ ಮಾಜಿ ಅಧ್ಯಕ್ಷ ಎಂ.ಸಮೀವುಲ್ಲಾ ಹಾಗೂ ಸಿ.ವಿ.ವೆಂಕಟೇಶ್‌ ನಗರದ ಪಿ.ಪಿ.ವೃತ್ತ.  ಪೇಟೇಬೀದಿ ಮುಜಾವರ್‌ ಮೊಹಲ್ಲ, ಸಂತೇಪೇಟೇ ಹುಳಿಯಾರ್‌ ರಸ್ತೆಯಲ್ಲಿ ಸಾರ್ವಜನಿಕರಿಗೆ ಮಾಸ್ಕ್ ಗಳನ್ನು ಉಚಿತವಾಗಿ ವಿತರಣೆ ಮಾಡುವ ಮೂಲಕ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದು ಮನವಿ ಮಾಡಿದರು.

Advertisement

ನಗರದ ರಾಷ್ಟ್ರೀಯ ಹೆದ್ದಾರಿ ಬಿ.ಎಚ್‌.ರಸ್ತೆಯ ತರಕಾರಿ ಮಾರುಕಟ್ಟೆ ಮುಂಭಾಗದಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಗೆ ಮಾಸ್ಕ್ ಧರಿಸದೇ ಗುಂಪು ಸೇರುತ್ತಿದ್ದನ್ನು ಕಂಡು ಸಮೀವುಲ್ಲಾ ಹಾಗೂ ಅವರ ಗೆಳೆಯ ಉದ್ಯಮಿ ಸಿ.ವಿ.ವೆಂಕಟೇಶ್‌ 4 ಸಾವಿರ ಮಾಸ್ಕ್ ಗಳನ್ನು ಖರೀದಿಸಿ ತಂದು ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದ ನಾಗರಿಕರಿಗೆ ಮಾಸ್ಕ್ ಗಳನ್ನು ವಿತರಿಸಿ ಕೊರೊನಾ ವೈರಸ್‌ ಹರಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಂ.ಸಮೀವುಲ್ಲಾ ಅವರು, ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರ ಬರಬಾರದು. ಅಗತ್ಯ ವಸ್ತುಗಳನ್ನು ಖರೀದಿಸಿದ ನಂತರ ಮನೆಗೆ ಹೋಗಿ ಕೈಕಾಲು ತೊಳೆದು ಕೊಂಡು ಯಾವುದೇ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next