Advertisement

ಪ್ರತಿ ಮನೆಗೂ ಮಾಸ್ಕ್ ವಿತರಣೆ

02:33 PM Apr 25, 2020 | mahesh |

ಹುಳಿಯಾರು: ಪಂಚಾಯ್ತಿಯ 8 ಕಂದಾಯ ಗ್ರಾಮಗಳ ಪ್ರತಿ ಹಳ್ಳಿಗಳಲ್ಲಿ ಪ್ರತಿಯೊಬ್ಬರೂ ಮುಖ ಗವಸು ತೊಟ್ಟು ಮನೆಯಿಂದ ಹೊರ ಬರಬೇಕು. ಇದಕ್ಕಾಗಿ ಗ್ರಾಪಂನಿಂದಲೇ ಪ್ರತಿ ಮನೆಗೆ ಮುಖ ಗವಸು ವಿತರಿಸುವ ಯೋಜನೆ ರೂಪಿಸಿದೆ. ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಗ್ರಾಪಂಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸ್ಕ್ ವಿತರಿಸುವ, ಆಟೋ ಮತ್ತು ಕರಪತ್ರದ ಮೂಲಕ ಪ್ರಚಾರ ಮಾಡುವ, ಫೆನಾಯಿಲ್‌ ಮತ್ತು ಔಷಧ ಸಿಂಪಡಿಸುವ ಕಾರ್ಯಗಳನ್ನು ಯಶಸ್ವಿಯಾಗಿ ಮಾಡುತ್ತಿವೆ. ಆದರೆ ಹುಳಿಯಾರು ಹೋಬಳಿಯ ಬರಕನ ಹಾಲ್‌ ಗ್ರಾಪಂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು ಪ್ರತಿ ಮನೆಗೆ ಮುಖಗವಸು ನೀಡಲು ಮುಂದಾಗಿವೆ.

Advertisement

ಬರಕನಹಾಲ್‌ ಗ್ರಾಮದ ಟೈಲ ರಿಂಗ್‌ ಬರುವ ಮಹಿಳೆಯರಿಂದ ಹೊಲಿಸಿದ ಮಾಸ್ಕ್ಗಳನ್ನು ಡೇರಿಗೆ ಹಾಲು ಕೊಡಲು ಹೋಗುವವರು, ದಿನಸಿ ಅಥವಾ ತುರ್ತು ಸಾಮಗ್ರಿ ತರಲು ಹೊರಹೋಗುವವರು, ಕೂಲಿ ಕಾರ್ಮಿಕರಿಗೆ ಆದ್ಯತೆ ಮೇಲೆ ವಿತರಿಸಿದ್ದಾರೆ. ಪಂಚಾಯ್ತಿ ವ್ಯಾಪ್ತಿಯ 8 ಕಂದಾಯ ಗ್ರಾಮಗಳಲ್ಲಿರುವ ಮನೆಗಳ ಲೆಕ್ಕ ಹಾಕಿ, 512 ಮೀಟರ್‌ ಕಾಟನ್‌ ಬಟ್ಟೆ ಖರೀದಿಸಿ, ಗ್ರಾಮದ ಮಹಿಳೆಯರಿಂದ 5 ಸಾವಿರ ಮಾಸ್ಕ್ ತಯಾರಿಸಲಾಗಿದ್ದು ಇದಕ್ಕಾಗಿ 50 ಸಾವಿರ ರೂ. ಪಂಚಾಯ್ತಿ ಸಂಪನ್ಮೂಲ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಪಿಡಿಒ ತುಕ್ಯಾನಾಯ್ಕ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next